/newsfirstlive-kannada/media/post_attachments/wp-content/uploads/2024/10/JOBS_RAILWYA.jpg)
ಉದ್ಯೋಗ ಹುಡುಕುತ್ತಿರುವವರಿಗೆ ರೈಲ್ವೆ ಇಲಾಖೆ ಗುಡ್ ನ್ಯೂಸ್ ನೀಡಿದೆ. ರೈಲ್ವೆ ರಿಕ್ವರ್​​ಮೆಂಟ್ ಬೋರ್ಡ್​ (ಆರ್​​ಆರ್​​ಬಿ) ಮತ್ತೆ ಟೆಕ್ನಿಷಿಯನ್ ಉದ್ಯೋಗಗಳಿಗೆ ಅರ್ಜಿಗಳನ್ನು ಆಹ್ವಾನ ಮಾಡಿದೆ. ಅರ್ಜಿಗಳನ್ನು ಈ ಹಿಂದೆ ಅಂದರೆ ಮಾರ್ಚ್​ 9 ರಿಂದ ಏಪ್ರಿಲ್ 2024ರ ಒಳಗೆ ಪೂರ್ಣಗೊಂಡಿದ್ದವು. ಆದರೆ ಈಗ ಅದೇ ಉದ್ಯೋಗಗಳನ್ನು ಸಾವಿರಗಟ್ಟಲೇ ಹೆಚ್ಚಳ ಮಾಡಿ ಆಹ್ವಾನ ಮಾಡಿದೆ. ಇಂತಹ ಸುವರ್ಣಾವಕಾಶವನ್ನು ಅಭ್ಯರ್ಥಿಗಳು ಉಪಯೋಗ ಮಾಡಿಕೊಳ್ಳಬೇಕು.
ಇದನ್ನೂ ಓದಿ: KRCL Recruitment; ವಿವಿಧ ಸರ್ಕಾರಿ ಹುದ್ದೆಗಳು.. ಸಂದರ್ಶನ ಮಾತ್ರ, ಪರೀಕ್ಷೆ ಇಲ್ಲ!
ಆರ್​​ಆರ್​​ಬಿ ಈ ಹಿಂದೆ ಒಟ್ಟು 18 ವಿಭಾಗಗಳಲ್ಲಿ 9,114 ಉದ್ಯೋಗಗಳನ್ನ ಭರ್ತಿ ಮಾಡಲು ನಿರ್ಧರಿಸಿತ್ತು. ಇದಕ್ಕಾಗಿ ಅಭ್ಯರ್ಥಿಗಳಿಂದ ಅರ್ಜಿಗಳನ್ನ ಪಡೆಯುವ ಪ್ರಕ್ರಿಯೆ ಪೂರ್ಣಗೊಳಿಸಿತ್ತು. ಆದರೆ ಇದೀಗ ಹುದ್ದೆಗಳನ್ನ 9114 ರಿಂದ 14,298ಕ್ಕೆ ಹೆಚ್ಚಳ ಮಾಡಿ ಮತ್ತೆ ಹೊಸ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. 5,184 ಕೆಲಸಗಳನ್ನ ಹೆಚ್ಚಿಸಿದ್ದು ಈ ಸಲ 40 ವಿಭಾಗಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ತುಂಬಲು ನಿರ್ಧರಿಸಿದೆ.
ಇನ್ನು ಅಪ್ಲೇ ಮಾಡಲು ಮಿಸ್ ಮಾಡಿಕೊಂಡಿದ್ದ ಅಭ್ಯರ್ಥಿಗಳು ಈಗ ಈ ಚಾನ್ಸ್ ಅನ್ನು ಬಳಸಿಕೊಳ್ಳಬೇಕು. ಹುದ್ದೆಗೆ ಸಂಬಂಧಿಸಿದ ಪೂರ್ಣ ಮಾಹಿತಿ ಇಲ್ಲಿದೆ. ಬೆಂಗಳೂರಲ್ಲೂ ಈ ಹುದ್ದೆಗಳು ಖಾಲಿ ಇದ್ದು 337 ಉದ್ಯೋಗಗಳಿವೆ. ಇದರಲ್ಲಿ ಗ್ರೇಡ್-1 44 ಇದ್ದು, ಗ್ರೇಡ್- 3 98 ಹಾಗೂ ವರ್ಕ್​ಶಾಪ್ 195 ಖಾಲಿವೆ. ಉಳಿದಂತೆ ಇಡೀ ದೇಶದ್ಯಾಂತ ಹುದ್ದೆಗಳು ಇವೆ. ಹೀಗಾಗಿ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ರೈಲ್ವೆ ಇಲಾಖೆಗೆ ಅಪ್ಲೇ ಮಾಡಬೇಕು.
ತಿಂಗಳ ಸ್ಯಾಲರಿ-
- ಟೆಕ್ನಿಷಿಯನ್ ಗ್ರೇಡ್-1= ಸಿಗ್ನಲ್ 29,200 ರೂಪಾಯಿ
- ಟೆಕ್ನಿಷಿಯನ್ ಗ್ರೇಡ್-3= 19,200 ರೂಪಾಯಿಗಳು
ಯಾವ ಹುದ್ದೆ ಹಾಗೂ ಎಷ್ಟು ಉದ್ಯೋಗಗಳು..?
- ಟೆಕ್ನಿಷಿಯನ್ ಗ್ರೇಡ್-1 ಸಿಗ್ನಲ್ (ಓಪನ್ ಲೈನ್)- 1092 ಉದ್ದೆಗಳು
- ಟೆಕ್ನಿಷಿಯನ್ ಗ್ರೇಡ್-3 ಸಿಗ್ನಲ್ (ಓಪನ್ ಲೈನ್)- 8052 ಜಾಬ್ಸ್​
- ಟೆಕ್ನಿಷಿಯನ್ ಗ್ರೇಡ್-3 ( ವರ್ಕ್​ಶಾಪ್ & ಪಿಯುಎಸ್)- 5154
ಒಟ್ಟು ಹುದ್ದೆಗಳು- 14,298
ಇದನ್ನೂ ಓದಿ: ಇಂದು PSI 402 ಹುದ್ದೆಗಳಿಗೆ ಪರೀಕ್ಷೆ.. ಅಭ್ಯರ್ಥಿಗಳು ಯಾವೆಲ್ಲ ರೂಲ್ಸ್ ಪಾಲನೆ ಮಾಡಬೇಕು..?
/newsfirstlive-kannada/media/post_attachments/wp-content/uploads/2024/10/JOB_RAILWYA_1.jpg)
ಶೈಕ್ಷಣಿಕ ಅರ್ಹತೆ
ಬಿಸ್​ಸಿ, ಬಿಟೆಕ್​, ಡೊಪ್ಲೋಮಾ ಇನ್ ಪಿಸಿಕ್ಸ್, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್, ಐಟಿ
SSLC, ITI ಅಥವಾ ಪಿಯುಸಿಯಲ್ಲಿ ಪಿಸಿಎಂ ಪೂರ್ಣಗೊಳಿಸಿರಬೇಕು
ವಯೋಮಿತಿ
ಟೆಕ್ನಿಷಿಯನ್ ಗ್ರೇಡ್-1 ಸಿಗ್ನಲ್ (ಓಪನ್ ಲೈನ್)- 18 ರಿಂದ 36 ವರ್ಷ
ಟೆಕ್ನಿಷಿಯನ್ ಗ್ರೇಡ್-3 ಸಿಗ್ನಲ್ (ಓಪನ್ ಲೈನ್)- 18 ರಿಂದ 33 ವರ್ಷ
ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಹೇಗಿದೆ?
ಲಿಖಿತ ಪರೀಕ್ಷೆ (ಸಿಬಿಟಿ)
ವೈದ್ಯಕೀಯ ಪರೀಕ್ಷೆ
ಮೆಡಿಕಲ್ ಪರೀಕ್ಷೆ
ಅರ್ಜಿ ಶುಲ್ಕ
ಜನರಲ್, ಒಬಿಸಿ, ಇತರೆ- 500 ರೂ.ಗಳು
ಎಸ್​ಸಿ, ಎಸ್​​ಟಿ ಮಹಿಳೆ- 250 ರೂ.ಗಳು
ಮುಖ್ಯವಾದ ದಿನಾಂಕಗಳು
ಅರ್ಜಿ ಸಲ್ಲಿಕೆ- ಅಕ್ಟೋಬರ್ 02 ರಿಂದ ಆರಂಭ
ಅರ್ಜಿ ಕೊನೆ- ಅಕ್ಟೋಬರ್ 16 ಕೊನೆ ದಿನ
ಅಪ್ಲಿಕೇಶನ್ ಮಾರ್ಪಾಡು ದಿನಾಂಕ- 17-20 ಅಕ್ಟೋಬರ್ 2024
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us