Advertisment

SSLC, ITI ಪಾಸ್ ಆಗಿದ್ರೆ ಸರ್ಕಾರಿ ಉದ್ಯೋಗ; ಪರೀಕ್ಷೆ ಇಲ್ಲ, 3 ಸಾವಿರಕ್ಕೂ ಅಧಿಕ ಜಾಬ್ಸ್

author-image
Bheemappa
Updated On
SSLC, ITI ಪಾಸ್ ಆಗಿದ್ರೆ ಸರ್ಕಾರಿ ಉದ್ಯೋಗ; ಪರೀಕ್ಷೆ ಇಲ್ಲ,  3 ಸಾವಿರಕ್ಕೂ ಅಧಿಕ ಜಾಬ್ಸ್
Advertisment
  • ಯಾವ್ಯಾವ ವಿಭಾಗದಲ್ಲಿ ಎಷ್ಟೆಷ್ಟು ಉದ್ಯೋಗಗಳು ಇವೆ..?
  • ಸಂಪೂರ್ಣ ಮಾಹಿತಿ ಇಲ್ಲಿ ಕೊಡಲಾಗಿದೆ, ಒಮ್ಮೆ ಓದಿಕೊಳ್ಳಿ
  • ನೀವು ಅರ್ಜಿಗಳನ್ನ ಹಾಕಲು ಎಷ್ಟು ವಯಸ್ಸು ಆಗಿರಬೇಕು?

ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡಲು ಇಷ್ಟ ಪಡುವ ಅಭ್ಯರ್ಥಿಗಳಿಗೆ ಇಲ್ಲೊಂದು ಗುಡ್​ನ್ಯೂಸ್ ಇದೆ. ಆರ್​​ಆರ್​ಸಿ ಪೂರ್ವ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವಂತ ಅಪ್ರೆಂಟಿಸ್ ಉದ್ಯೋಗಗಳನ್ನು ಭರ್ತಿ ಮಾಡಲು ಆನ್​ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನ ಮಾಡಲಾಗಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅಪ್ಲೇ ಮಾಡಬಹುದಾಗಿದೆ.

Advertisment

ಇದನ್ನೂ ಓದಿ: ನ್ಯೂ ಇಂಡಿಯಾ ಅಶ್ಯೂರೆನ್ಸ್​ನಲ್ಲಿ ಉದ್ಯೋಗಗಳು.. ಆಯ್ಕೆ ಆದವರಿಗೆ 80 ಸಾವಿರ ರೂ. ಸ್ಯಾಲರಿ 

ಅಭ್ಯರ್ಥಿಗಳು ಆನ್​ಲೈನ್ ಮೂಲಕವೇ ಅಪ್ಲೇ ಮಾಡಬೇಕು. ಇನ್ನು ಈ ಹುದ್ದೆಗೆ ಸಂಬಂಧಿಸಿದ ಪ್ರಮುಖವಾದ ದಿನಾಂಕ, ಆಯ್ಕೆ ಪ್ರಕ್ರಿಯೆ, ವಿದ್ಯಾರ್ಹತೆ, ವಯೋಮಿತಿ ಸೇರಿ ಇತರೆ ಮಾಹಿತಿ ಇಲ್ಲಿ ನೀಡಲಾಗಿದೆ. ಸೆಪ್ಟೆಂಬರ್ 9 ರಂದು ನೋಟಿಫಿಕೇಶನ್ ರಿಲೀಸ್ ಮಾಡಲಾಗಿತ್ತು. ಅರ್ಜಿ ಇನ್ನು ಆರಂಭವಾಗಿಲ್ಲ. ಇದೇ ಸೆಪ್ಟೆಂಬರ್ 24ರಿಂದ ಅರ್ಜಿ ಪ್ರಾರಂಭ ಮಾಡಲಾಗುತ್ತದೆ. ಬಳಿಕ ಅಭ್ಯರ್ಥಿಗಳು ಅಪ್ಲೇ ಮಾಡಬಹುದು. ಇಲಾಖೆಯ ಅಧಿಕೃತ ವೆಬ್​ಸೈಟ್​ rrcer.org. ಗೆ ಭೇಟಿ ನೀಡಿ ಇನ್ನಷ್ಟು ಮಾಹಿತಿ ತಿಳಿದುಕೊಳ್ಳಬಹುದು.

ಇದನ್ನೂ ಓದಿ:39 ಸಾವಿರಕ್ಕೂ ಅಧಿಕ ಸರ್ಕಾರಿ ಉದ್ಯೋಗಗಳು.. ಜಸ್ಟ್ SSLC ಪಾಸ್ ಆಗಿದ್ರೆ ಸಾಕು, ಜಾಬ್ ಸಿಗುತ್ತೆ

Advertisment

publive-image

ಇನ್ನು ಈ ಪರೀಕ್ಷೆಗಳಿಗೆ ಪರೀಕ್ಷೆ ಇರುವುದಿಲ್ಲ. ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಮೆಟ್ರಿಕ್ಯುಲೇಷನ್ ಮತ್ತು ITI ಪರೀಕ್ಷೆಗಳಿಂದ ಸರಾಸರಿ ಅಂಕಗಳ ಮೇಲೆ ಆಯ್ಕೆಯನ್ನು ನಿರ್ಧರಿಸಲಾಗುತ್ತದೆ. ಮೆರಿಟ್ ಲಿಸ್ಟ್ ಆದ ಮೇಲೆ ದಾಖಲಾತಿ ಪರಿಶೀಲನೆಗೆ ಅಭ್ಯರ್ಥಿಗಳನ್ನು ಕರೆಯಲಾಗುತ್ತದೆ. ಇಬ್ಬರು ಅಭ್ಯರ್ಥಿಗಳು ಸಮ ಅಂಕಗಳನ್ನು ಹೊಂದಿದ್ದರೇ ಫಸ್ಟ್ ಪಾಸ್ ಆಗಿದ್ದವರನ್ನು ಪರಿಗಣಿಸಲಾಗುತ್ತದೆ. ಆನ್​ಲೈನ್​ನಲ್ಲಿ ಅಪ್ಲೇ ಮಾಡಿದ ಎಲ್ಲ ದಾಖಲೆಗಳನ್ನು ಅಭ್ಯರ್ಥಿಗಳು ತರಬೇಕಾಗುತ್ತದೆ.

ವಿಭಾಗಗಳು ಹಾಗೂ ಒಟ್ಟು ಹುದ್ದೆಗಳು ಎಷ್ಟು ಇವೆ..?

  • ಒಟ್ಟು 3115 ಹುದ್ದೆಗಳು ಭರ್ತಿ ಮಾಡಲಾಗುತ್ತಿದೆ
  • ಹೌರಾ ವಿಭಾಗ- 659
  • ಲಿಲುವಾ ಕಾರ್ಯಾಗಾರ- 612
  • ಸೀಲ್ದಾ ವಿಭಾಗ- 440
  • ಕಂಚುರಪಾರ ಕಾರ್ಯಾಗಾರ- 187
  • ಮಾಲ್ಡಾ ವಿಭಾಗ- 138
  • ಅಸನ್ಸೋಲ್ ವಿಭಾಗ- 412
  • ಜಮಾಲ್ಪುರ್ ಕಾರ್ಯಾಗಾರ- 667

ಅರ್ಜಿ ಶುಲ್ಕ ಎಷ್ಟಿ ಇರುತ್ತದೆ..?
ಜನರಲ್ ಅಭ್ಯರ್ಥಿಗಳಿಗೆ- 100 ರೂಪಾಯಿಗಳು
ಎಸ್​​ಸಿ, ಎಸ್​ಟಿ- ಮೀಸಲಾಯಿತಿ ವಿನಾಯಿತಿ ಇರುತ್ತದೆ

Advertisment

ಸ್ಯಾಲರಿ- ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಆಗಿದ್ದರಿಂದ ಉತ್ತಮ ಮಟ್ಟದ ಸಂಬಳ ಇರುತ್ತದೆ.

ಪೋಸ್ಟ್ ಹೆಸರು- ಅಪ್ರೆಂಟಿಸ್
ವಿದ್ಯಾರ್ಹತೆ- SSLC ಜೊತೆ ಐಟಿಐ ಪಾಸ್ ಆಗಿರಬೇಕು
ವಯೋಮಿತಿ- 15 ವರ್ಷದಿಂದ 24 ವರ್ಷದ ಒಳಗಿನವರು

ಈ ಹುದ್ದೆಗೆ ಸಂಬಂಧಿಸಿದ ದಿನಾಂಕಗಳು..?
ನೋಟಿಫಿಕೇಶನ್ ಪ್ರಕಟ- ಸೆಪ್ಟೆಂಬರ್ 09
ಅರ್ಜಿ ಹಾಕಲು ಪ್ರಾರಂಭ- ಸೆಪ್ಟೆಂಬರ್ 24
ಅರ್ಜಿ ಕೊನೆ ದಿನಾಂಕ- ಅಕ್ಟೋಬರ್ 23

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment