newsfirstkannada.com

×

ಇಂದಿಗೆ ಮುನಿರತ್ನ ಕಸ್ಟಡಿ ಅಂತ್ಯ, ಮುಂದೇನು ಕತೆ? ಪೊಲೀಸರ ಮುಂದೆ ಶಾಸಕ ತೋಡಿಕೊಂಡ ಅಳಲೇನು?

Share :

Published September 16, 2024 at 7:23am

    ಶೇಷಾದ್ರಿಪುರಂ ACP ಪ್ರಕಾಶ್ ರೆಡ್ಡಿಯಿಂದ ಮುನಿರತ್ನ ವಿಚಾರಣೆ

    ಶಾಸಕ ಮುನಿರತ್ನ ವಾಯ್ಸ್ ಸ್ಯಾಂಪಲ್ ಪಡೆಯಲಿರುವ ಪೊಲೀಸರು

    ವಾಯ್ಸ್ ಮ್ಯಾಚ್ ಆದ್ರೆ ಶಾಸಕ ಮುನಿರತ್ನಗೆ ಸಂಕಷ್ಟ ಫಿಕ್ಸ್​!

ಗುತ್ತಿಗೆದಾರನಿಗೆ ಜಾತಿನಿಂದನೆ, ಜೀವಬೆದರಿಕೆ ಆರೋಪದಲ್ಲಿ ಶಾಸಕ ಮುನಿರತ್ನ ಬಂಧನ ಆಗಿದೆ. ಎಷ್ಟೇ ವಿಚಾರಣೆ ಮಾಡಿದ್ರೂ ನಾನೇನು ತಪ್ಪು ಮಾಡಿಲ್ಲ ಅಂತ ಹೇಳ್ತಿದ್ದಾರೆ. ಈ ಮಧ್ಯೆ ಇಂದು ಮುನಿರತ್ನ ಪೊಲೀಸ್ ಕಸ್ಟಡಿ ಅಂತ್ಯ ಆಗಲಿದ್ದು, ಕಸ್ಟಡಿ ವಿಸ್ತರಣೆ ಆಗುವ ಸಾಧ್ಯತೆ ಇದೆ.

ಶಾಸಕ ಮುನಿರತ್ನ ಕಸ್ಟಡಿ ವಿಸ್ತರಣೆ ಮಾಡುವ ಸಾಧ್ಯತೆ

ಗುತ್ತಿಗೆದಾರ ಚಲುವರಾಜುಗೆ ಜಾತಿನಿಂದನೆ ಹಾಗೂ ಜೀವ ಬೆದರಿಕೆ ಹಾಕಿದ್ದ ಪ್ರಕರಣದಲ್ಲಿ ಶಾಸಕ ಮುನಿರತ್ನ ಬಂಧನ ಆಗಿದ್ದು ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಮೊನ್ನೆ ರಾತ್ರಿ ನ್ಯಾಯಾಧೀಶರ ಮನೆಯಲ್ಲಿ ಹಾಜರುಪಡಿಸಿದ್ದ ಪೊಲೀಸರು, ಒಂದು ವಾರ ಕಸ್ಟಡಿಗೆ ಕೇಳಿದ್ದರು. ಆದ್ರೆ ನ್ಯಾಯಾಧೀಶರು 2 ದಿನವಷ್ಟೇ ಕಸ್ಟಡಿಗೆ ನೀಡಿದ್ದರು. ಇಂದಿಗೆ ಮುನಿರತ್ನ ಕಸ್ಟಡಿ ಅಂತ್ಯ ಆಗಲಿದ್ದು, ಕೋರ್ಟ್​​ಗೆ ಪ್ರೊಡ್ಯೂಸ್ ಮಾಡಲಿದ್ದಾರೆ. ಕೋರ್ಟ್​​ ಬಹುತೇಕ ಪೊಲೀಸ್ ಕಸ್ಟಡಿ ಅವಧಿ ಮುಂದುವರಿಸುವ ಸಾಧ್ಯತೆ ದಟ್ಟವಾಗಿದೆ.

ತನಿಖಾಧಿಕಾರಿಗಳಿಂದ ಶಾಸಕ ಮುನಿರತ್ನ ವಿಚಾರಣೆ

ಈ ನಡುವೆ ಕಸ್ಟಡಿ ಪಡೆದ ತನಿಖಾಧಿಕಾರಿಗಳು ಶಾಸಕ‌ ಮುನಿರತ್ನ ವಿಚಾರಣೆ ತೀವ್ರಗೊಳಿಸಿದ್ದಾರೆ. ಎಷ್ಟೇ ವಿಚಾರಣೆ ಮಾಡಿದ್ರೂ ನಾನೇನು ತಪ್ಪು ಮಾಡಿಲ್ಲ ಅಂತ ಅಲವತ್ತುಕೊಂಡಿದ್ದಾರೆ.

ಇದನ್ನೂ ಓದಿ: KGF ಕಥೆಯನ್ನೇ ಮೀರಿಸುತ್ತೆ ಶಾಸಕ ಮುನಿರತ್ನ ಬದುಕು; ಬೀದಿಯಲ್ಲಿ ಇಡ್ಲಿ ಮಾರುತ್ತಿದ್ದ ಇವ್ರು ಬೆಳೆದಿದ್ದೇ ರೋಚಕ!

ಚೆಲುವರಾಜು ಹೇಗೆ ಪರಿಚಯ, ಆಡಿಯೋದಲ್ಲಿರೋ ಧ್ವನಿ ನಿಮ್ದಾ?

ಎಸಿಪಿ ಪ್ರಕಾಶ್ ರೆಡ್ಡಿಯಿಂದ ಮುನಿರತ್ನ ವಿಚಾರಣೆ ನಡೆದಿದೆ. ಚೆಲುವರಾಜು ಹೇಗೆ ಪರಿಚಯ, ಆಡಿಯೋದಲ್ಲಿರೋದು ನಿಮ್ಮ ಧ್ವನಿನಾ ಅಂತ ಪ್ರಶ್ನೆಗಳನ್ನ ಕೇಳಿದ್ದಾರೆ. ಆದ್ರೆ ನಾನೇನು ತಪ್ಪು ಮಾಡಿಲ್ಲ. ಇದು ರಾಜಕೀಯ ಷಡ್ಯಂತ್ರ ಅಂತ ಮುನಿರತ್ನ ಹೇಳಿದ್ದಾರೆ. ಇನ್ನು ಚೆಲುವರಾಜು, ವೇಲು ನಾಯ್ಕ್ ಇಬ್ಬರೂ ಜೊತೆಯಲ್ಲಿದ್ದು, ಉಂಡ ಮನೆಗೆ ಎರಡು ಬಗೆದಿದ್ದಾರೆ ಅಂತ ಹೇಳ್ಕೊಂಡಿದ್ದಾರೆ.

ಇದನ್ನೂ ಓದಿ: ಶಾಸಕ ಮುನಿರತ್ನ ರೀತಿ ಚೆನ್ನಾರೆಡ್ಡಿ ಬಂಧನ ಏಕಾಗಿಲ್ಲ? ಸರ್ಕಾರದ ವಿರುದ್ಧ ಛಲವಾದಿ ನಾರಾಯಣಸ್ವಾಮಿ ಆಕ್ರೋಶ

ಈ ಮಧ್ಯೆ ಇಂದು ಪೊಲೀಸರು, ಶಾಸಕ ಮುನಿರತ್ನ ವಾಯ್ಸ್ ಸ್ಯಾಂಪಲ್ ಪಡೆಯಲಿದ್ದಾರೆ. ಕೇಸ್ ನಲ್ಲಿ ಸದ್ದು ಮಾಡಿರೋ ಆಡಿಯೋ ಪ್ರಮುಖ ಸಾಕ್ಷ್ಯವಾಗಿದೆ. ಹೀಗಾಗಿ ಆಡಿಯೋದಲ್ಲಿರೋ ವಾಯ್ಸ್ ಪರಿಶೀಲನೆಗೆ ಪೊಲೀಸರು ಮುಂದಾಗಿದ್ದಾರೆ. ಇಂದು ವಾಯ್ಸ್ ಸ್ಯಾಂಪಲ್ ಪಡೆದು ಎಫ್​​ಎಸ್​​​ಎಲ್​​ಗೆ ಕಳುಹಿಸಲಿದ್ದಾರೆ. ಒಂದ್ವೇಳೆ ಮುನಿರತ್ನ ವಾಯ್ಸ್ ಹಾಗೂ ಆಡಿಯೋದಲ್ಲಿರೋ ವಾಯ್ಸ್ ಮ್ಯಾಚ್ ಆದ್ರೆ ಶಾಸಕ ಮುನಿರತ್ನಗೆ ಸಂಕಷ್ಟ ಹೆಚ್ಚಾಗಲಿದೆ..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇಂದಿಗೆ ಮುನಿರತ್ನ ಕಸ್ಟಡಿ ಅಂತ್ಯ, ಮುಂದೇನು ಕತೆ? ಪೊಲೀಸರ ಮುಂದೆ ಶಾಸಕ ತೋಡಿಕೊಂಡ ಅಳಲೇನು?

https://newsfirstlive.com/wp-content/uploads/2024/09/MUNIRATNA.jpg

Load More