ವೀಕ್ಷಕರಲ್ಲಿ ಮತ್ತಷ್ಟು ಕುತೂಹಲ ಮೂಡಿಸಿದ SS ರಾಜಮೌಳಿ ಸಾಕ್ಷ್ಯಚಿತ್ರ
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ ಡಾಕ್ಯೂಮೆಂಟರಿ ಟ್ರೈಲರ್
ರಾಜಮೌಳಿ ಬಗ್ಗೆ ಜೂ. NTR, ರಾಮ್ ಚರಣ್, ಪ್ರಭಾಸ್ ಹೇಳಿದ್ದೇನು..?
ಮಗಧೀರ, ಬಾಹುಬಲಿ, RRR ಖ್ಯಾತಿಯ ಎಸ್.ಎಸ್ ರಾಜಮೌಳಿ ಅವರ ಜೀವನವನ್ನು ಆಧರಿಸಿದ ‘ಮಾಡರ್ನ್ ಮಾಸ್ಟರ್ಸ್’ ಸಾಕ್ಷ್ಯಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ನೆಟ್ಫ್ಲಿಕ್ಸ್ ಅಪ್ಲಾಸ್ ಎಂಟರ್ಟೈನ್ಮೆಂಟ್ ಮತ್ತು ಫಿಲ್ಮ್ ಕಂಪ್ಯಾನಿಯನ್ ಸ್ಟುಡಿಯೋಸ್ ಸಹಯೋಜನೆಯೊಂದಿಗೆ ಈ ಡಾಕ್ಯುಮೆಂಟರಿ ನಿರ್ಮಾಣಗೊಂಡಿದೆ.
ಇದನ್ನೂ ಓದಿ: ತರುಣ್ ಕೈ ಹಿಡಿಯುತ್ತಿರುವ ಸೋನಲ್ ಯಾರು? ಮೂಲತಃ ಎಲ್ಲಿಯವ್ರು? ಇಲ್ಲಿದೆ ಮಾಹಿತಿ
ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕ SS ರಾಜಮೌಳಿ ಅವರ ಡಾಕ್ಯೂಮೆಂಟರಿ ಆಗಸ್ಟ್ 2ರಂದು ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆಯಾಗಲಿದೆ. ರಾಘವ್ ಖನ್ನಾ ಅವರು SS ರಾಜಮೌಳಿ ಅವರ ಡಾಕ್ಯೂಮೆಂಟರಿಯನ್ನು ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಟ್ರೈಲರ್ ನೋಡಿದ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.
ಈ ಸಾಕ್ಷ್ಯಚಿತ್ರದಲ್ಲಿ ರಾಜಮೌಳಿ ಅವರ ಬಗ್ಗೆ ಗೊತ್ತಿರದ ಮತ್ತಷ್ಟು ವಿಚಾರಗಳು ಬೆಳಕಿಗೆ ಬರಲಿದೆ. ಈ ಮೂಲಕ ಅವರ ಅಭಿಮಾನಿಗಳು ರಾಜಮೌಳಿ ಅವರ ಜೀವನದಲ್ಲಿ ನಡೆದ ಇನ್ನಷ್ಟೂ ಸಂಗತಿಗಳ ಬಗ್ಗೆ ತಿಳಿದುಕೊಳ್ಳಬಹುದಾಗಿದೆ. ಇನ್ನು, ಖ್ಯಾತ ನಿರ್ದೇಶಕ ರಾಜಮೌಳಿ ಅವರ ಬಗ್ಗೆ ಜೂನಿಯರ್ ಎನ್ಟಿಆರ್, ರಾಮ್ ಚರಣ್, ಡಾರ್ಲಿಂಗ್ ಪ್ರಭಾಸ್, ಚಿತ್ರನಿರ್ಮಾಪಕ ಕರಣ್ ಜೋಹರ್ ಸೇರಿದಂತೆ ಸಾಕಷ್ಟು ಗಣ್ಯರು ಮಾತನಾಡಿದ್ದಾರೆ. ಸದ್ಯ ಇದೇ ಟ್ರೈಲರ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ