/newsfirstlive-kannada/media/post_attachments/wp-content/uploads/2024/09/jr-ntr3.jpg)
ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಬಣ್ಣದ ಲೋಕದ ದಿಗ್ಗಜರ ಸಮಾಗಮ ಆಗಿದೆ. ಕೃಷ್ಣ ಮುಖ್ಯಪ್ರಾಣ ದೇವರ ದರ್ಶನಕ್ಕೆ ಟಾಲಿವುಡ್ ಸ್ಯಾಂಡಲ್​ವುಡ್ ಸ್ಟಾರ್ಸ್ ಬಂದಿದ್ದಾರೆ. ಸರ್ವೇ ಜನ ಸುಖಿನೋಭವಂತು ಎಂದು ದೇವರಿಗೆ ಅಡ್ಡಬಿದ್ದ ಎನ್​ಟಿಆರ್ ಕುಟುಂಬದ ಕುಡಿ. ಆರ್ ಆರ್ ಸ್ಟಾರ್​ ಅಮ್ಮನಿಗೆ 40 ವರ್ಷದ ಹರಕೆ ಪೂರೈಸಿದ ಖುಷಿ.
/newsfirstlive-kannada/media/post_attachments/wp-content/uploads/2024/09/jr-ntr2.jpg)
ಉಡುಪಿ ಶ್ರೀ ಕೃಷ್ಣ ಮಠಕ್ಕೆ ದಿಗ್ಗಜ ನಟರು ಆಗಮಿಸಿ ದೇವರ ದರ್ಶನ ಪಡೆದಿದ್ದಾರೆ. ಶ್ರಾವಣ ಶನಿವಾರದ ಶುಭದಿನ ತೆಲುಗಿನ ಸ್ಟಾರ್ ನಟ ಜೂನಿಯರ್ ಎನ್​ಟಿಆರ್ ಉಡುಪಿಯ ಮುಖ್ಯ ಪ್ರಾಣ ದೇವರ ದರ್ಶನ ಪಡೆದಿದ್ದಾರೆ. ಆರ್​ಆರ್​ಆರ್​ನ ಭೀಮನಿಗೆ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಸಾಥ್​ ನೀಡಿದ್ದಾರೆ. ಎರಡು ಕುಟುಂಬಗಳ ಜೊತೆ ಕೆಜಿಎಫ್ ಎಂಬ ಮಹಾ ಮೂವಿ ಜಗತ್ತಿಗೆ ಕೊಟ್ಟ ಪ್ರಶಾಂತ್ ನೀಲ್ ಕುಟುಂಬ ಉಡುಪಿ ಮಠದಲ್ಲಿ ಜೊತೆಯಾಯ್ತು. ಮೂರು ಕುಟುಂಬಗಳು ಕನಕ ನವಗ್ರಹ ಕಿಂಡಿಯ ಮೂಲಕ ಉಡುಪಿ ಕೃಷ್ಣನ ದರ್ಶನ ಮಾಡಿದ್ರು. ಬಳಿಕ ಚಂದ್ರ ಶಾಲೆಯಲ್ಲಿರುವ ಅಯೋಧ್ಯೆ ರಾಮನ ಮೂರ್ತಿ ಮತ್ತು ಗರುಡ ದೇವರ ಗುಡಿಗೆ ಭೇಟಿ ಕೊಟ್ಟು ದರ್ಶನ ಪಡೆದ್ರು. ಇದೇ ವೇಳೆ ಪುತ್ತಿಗೆ ಹಿರಿಯ ಕಿರಿಯ ಶ್ರೀಗಳಿಗೆ ಮೂರು ಕುಟುಂಬಗಳು ಗೌರವ ಸಮರ್ಪಣೆ ಮಾಡಿತು.
/newsfirstlive-kannada/media/post_attachments/wp-content/uploads/2024/09/jr-ntr.jpg)
ಎನ್​ಟಿಆರ್ ಪತ್ನಿ ಶಾಲಿನಿ ನಂದಮೂರಿ ಪೂರ್ವಿಕರು ಉಡುಪಿ ಜಿಲ್ಲೆಯ ಕುಂದಾಪುರದವರು. ಕಳೆದ 40 ವರ್ಷಗಳಿಂದ ಶಾಲಿನಿ ನಂದಮೂರಿ ಒಂದು ಕನಸನ್ನು ಕಟ್ಟಿಕೊಂಡಿದ್ದರು. ಮಗನನ್ನ ಒಮ್ಮೆ ಉಡುಪಿ ಕೃಷ್ಣನ ದರ್ಶನ ಮಾಡಿಸಬೇಕು. ಆ ಸಂದರ್ಭ ತಾನು ಜೊತೆಗಿರಬೇಕು ಎಂಬುದು ಅವರ ದೊಡ್ಡ ಬಯಕೆಯಾಗಿತ್ತು. ಶ್ರಾವಣ ಮಾಸದ ಶುಭ ಶನಿವಾರ ತಾಯಿಯ 40 ವರ್ಷಗಳ ಮಹದಾಸೆಯನ್ನು ಪುತ್ರನಾಗಿ ಈಡೇರಿಸಿದ್ದಾರೆ.
/newsfirstlive-kannada/media/post_attachments/wp-content/uploads/2024/09/jr-ntr1.jpg)
ಇನ್ನು, ದೇವರ ದರ್ಶನದ ನಂತರ ಪತ್ನಿ ಲಕ್ಷ್ಮಿ ಪ್ರಣತಿ, ರಿಷಬ್ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ, ನೀಲ್ ಫ್ಯಾಮಿಲಿ ಜೊತೆಯಾಗಿ ಕೃಷ್ಣಮಠದಲ್ಲೇ ವಿಶೇಷ ಅನ್ನ ಪ್ರಸಾದವನ್ನು ಸವಿದರು. ಕೃಷ್ಣಮಠದಲ್ಲಿ ತಯಾರಿಸುವ ಅಡುಗೆ ಮಾದರಿಯನ್ನೇ ಇಂದಿಗೂ ತಮ್ಮ ಮನೆಯಲ್ಲಿ ಊಟ ಮಾಡುತ್ತಿರುವುದಾಗಿ ಜೂನಿಯರ್ ಎನ್ ಟಿ ಆರ್ ಊಟದ ಗುಟ್ಟು ಬಿಚ್ಚಿಟ್ಟರು. ಇನ್ನು ಜೂನಿಯರ್ ಎನ್​ಟಿಆರ್ ನನ್ನ ಸಹೋದರನಿದ್ದಂತೆ. ಕುಟುಂಬ ಸಮೇತರಾಗಿ ದೇವರ ದರ್ಶನದ ಅವಕಾಶ ಸಿಕ್ಕಿದ್ದು ಭಾಗ್ಯ ಎಂದು ರಿಷಬ್ ಶೆಟ್ಟಿ ಖುಷಿ ವ್ಯಕ್ತಪಡಿಸಿದ್ದಾರೆ. ಒಂದು ಕೋಟಿ ಬಾರಿ ಭಗವದ್ಗೀತೆಯನ್ನು ಬರೆಯುವ, ಕೋಟಿಗೀತಾ ಲೇಖನ ಯಜ್ಞವನ್ನು ಜೂನಿಯರ್ ಎನ್​ಟಿಆರ್, ರಿಷಬ್ ಕೈಗೊಳ್ಳುವ ಸಂಕಲ್ಪ ಮಾಡಿದ್ದಾರೆ. ಉಡುಪಿಗೆ ಭೇಟಿ ನೀಡಿದ್ದ ಸಿನಿ ದಿಗ್ಗಜರ ಜೊತೆ ಸೆಲ್ಫಿ ಕ್ಲಿಕ್ಕಿಸಲು ಅಭಿಮಾನಿಗಳು ಮುಗಿಬಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us