newsfirstkannada.com

₹33,000 ದಂಡ ಸಾಕಾಗಲಿಲ್ಲ, ಮತ್ತೆ ಹೆಚ್ಚುವರಿಯಾಗಿ ₹47,500 ಸಾವಿರ ಫೈನ್ ಹಾಕಿದ ಟ್ರಾಫಿಕ್ ಪೊಲೀಸ್..!

Share :

Published March 28, 2024 at 11:01am

    ಹೋಳಿ ಆಚರಣೆ ವೇಳೆ ಅಸಭ್ಯ ವರ್ತನೆಗೆ ಬಿತ್ತು ಭಾರೀ ದಂಡ

    ನೋಯ್ಡಾ ಪೊಲೀಸರ ಕಠಿಣ ಕ್ರಮಕ್ಕೆ ಜನ ಹೊಗಳ್ತಿದ್ದಾರೆ

    ಮೂವರ ವಿರುದ್ಧ ಎಫ್​ಐಆರ್​, ಯಾವೆಲ್ಲ ಸೆಕ್ಷನ್ ಅಡಿ ಕೇಸ್..?

ಇಬ್ಬರು ಯುವತಿಯರು ಓರ್ವ ಯುವಕ ಸಾರ್ವಜನಿಕರಿಗೆ ತೊಂದರೆ ಕೊಡುತ್ತ ಅಪಾಯಕಾರಿ ರೀತಿಯಲ್ಲಿ ಬೈಕ್ ರೈಡ್ ಮಾಡಿದ ಪ್ರಕರಣದ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ನೋಯ್ಡಾ ಪೊಲೀಸರು ತಿಳಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋ ಆಧಾರದ ಮೇಲೆ ಮತ್ತೆ 47,500 ರೂಪಾಯಿ ದಂಡವನ್ನು ಹಾಕಲಾಗಿದೆ ಎಂದು ತಿಳಿಸಿದ್ದಾರೆ.

ಸ್ಥಳೀಯ ಪೊಲೀಸರು ಎಫ್​ಐಆರ್ ದಾಖಲಿಸಿದ್ದಾರೆ. ಇದಕ್ಕೂ ಮೊದಲು ಸ್ಥಳೀಯ ಪೊಲೀಸರು 33 ಸಾವಿರ ರೂಪಾಯಿ ದಂಡವನ್ನು ವಿಧಿಸಿದ್ದರು. ಅಂದರೆ ಈ ಹಿಂದೆಯೂ ಕೂಡ ಇದೇ ರೀತಿಯ ಅಸಭ್ಯವಾಗಿ ಮತ್ತು ಅಪಾಯಕಾರಿ ವಿಡಿಯೋ ವೈರಲ್ ಆಗಿತ್ತು. ಮಾರ್ಚ್​​ 25 ರಂದು ವಿಡಿಯೋ ವೈರಲ್ ಆಗಿತ್ತು. ಇದನ್ನು ನೋಡಿದ ಸೋಶಿಯಲ್ ಮೀಡಿಯಾ ಬಳಕೆದಾರರು ಸಾರ್ವಜನಿಕ ಸ್ಥಳದಲ್ಲಿ ಅಸಭ್ಯತೆಯನ್ನು ಪ್ರದರ್ಶಿಸಿದ್ದಾರೆ ಎಂದು ಕಿಡಿಕಾರಿದ್ದರು.

ಇದನ್ನೂ ಓದಿ: 38 ಸಿಕ್ಸ್​​, 33 ಬೌಂಡರಿ, 523 ರನ್..! ರನ್​​.. ರನ್​.. ರನ್​​.. ಹೈದ್ರಾಬಾದ್​ನಲ್ಲಿ ರನ್​ ಮಳೆ ಸುರಿದ ಕಂಪ್ಲೀಟ್ ಕಹಾನಿ..!

ವಿಡಿಯೋದಲ್ಲಿ ಇಬ್ಬರು ಯುವತಿಯರು ಎದುರು ಬದುರು ಕೂತು ಅಸಭ್ಯವಾಗಿ ವರ್ತಿಸುತ್ತಿದ್ದಾರೆ. ಮುಂದೆ ಯುವಕ ಕೂತು ಬೈಕ್ ಓಡಿಸುತ್ತಿದ್ದಾನೆ. ಇದೀಗ ಟ್ರಾಫಿಕ್ ಪೊಲೀಸರಿಗೆ ಮತ್ತೊಂದು ವಿಡಿಯೋ ಸಿಕ್ಕಿದೆ. ಎರಡು ಘಟನೆಯಿಂದ ಸ್ಕೂಟಿಯ ಮಾಲೀಕರಿಗೆ 80,500 ರೂಪಾಯಿ ದಂಡದ ಬರೆ ಬಿದ್ದಿದೆ ಎಂದು ಡೆಪ್ಯೂಟಿ ಕಮೀಷನರ್ ಆಫ್ ಪೊಲೀಸ್ (ಟ್ರಾಫಿಕ್) ಅನಿಲ್ ಕುಮಾರ್ ತಿಳಿಸಿದ್ದಾರೆ. ಐಪಿಸಿ ಸೆಕ್ಷನ್ 279 (ಅತಿವೇಗ ಮತ್ತು ನಿರ್ಲಕ್ಷ್ಯದ ಚಾಲನೆ), 290 (ಸಾರ್ವಜನಿಕರಿಗೆ ತೊಂದರೆ), 336 ಮತ್ತು 337 (ಇತರರ ಜೀವಕ್ಕೆ ಹಾನಿಯುಂಟು ಮಾಡುವ) ಅಡಿಯಲ್ಲಿ ಕೇಸ್​ ದಾಖಲಿಸಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

₹33,000 ದಂಡ ಸಾಕಾಗಲಿಲ್ಲ, ಮತ್ತೆ ಹೆಚ್ಚುವರಿಯಾಗಿ ₹47,500 ಸಾವಿರ ಫೈನ್ ಹಾಕಿದ ಟ್ರಾಫಿಕ್ ಪೊಲೀಸ್..!

https://newsfirstlive.com/wp-content/uploads/2024/03/SCOOTY.jpg

Load More