/newsfirstlive-kannada/media/post_attachments/wp-content/uploads/2024/10/MUMBAI-RENTAL-HOUSE.jpg)
ಮುಂಬೈ: ವಾಣಿಜ್ಯ ನಗರಿ ಎಂದೇ ಖ್ಯಾತಿ ಪಡೆದಿರುವ ಹಾಗೂ ದೇಶದ ಬೊಕ್ಕಸಕ್ಕೆ ಅತಿಹೆಚ್ಚು ಟ್ಯಾಕ್ಸ್ ತಂದು ಸುರಿಯುವ ನಗರಿ ಅಂದ್ರೆ ಅದು ಮಹಾರಾಷ್ಟ್ರದ ರಾಜಧಾನಿ ಮುಂಬೈ. ಇಲ್ಲಿ ಬದುಕುವುದು ಅಷ್ಟ ಸರಳವಲ್ಲ. ಹೆಜ್ಜೆಯಿಟ್ಟಲ್ಲೆಲ್ಲಾ ದುಡ್ಡಿನ ಮೊರೆ ತೋರಿಸಿ ಎಂದೇ ಜನರು ಕೇಳುತ್ತಾರೆ. ಕಾಸ್ಟ್​ ಆಫ್ ಲಿವೀಂಗ್ ಅಂತೂ ಬೆಂಗಳೂರಿಗೆ ಹೋಲಿಸಿದರೆ ಮುಂಬೈ ಸಿಕ್ಕಾಪಟ್ಟೆ ದುಬಾರಿ. ಆ ದುಬಾರಿ ನಗರಿಯ ಮತ್ತೊಂದು ಮುಖ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ್ತಿದೆ.
ಇದನ್ನೂ ಓದಿ:ಇಶಾ ಫೌಂಡೇಶನ್ ವಿರುದ್ಧ ಪೊಲೀಸರ ಕ್ರಮಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ.. ಏನಿದು ಪ್ರಕರಣ..?
ಮುಂಬೈನಲ್ಲಿ ಬಾಡಿಗೆ ಮನೆಗಳು ಅನ್ನೋದು ಅದ್ಯಾವ ಮಟ್ಟಕ್ಕೆ ದುಬಾರಿ ಅನ್ನೋದಕ್ಕೆ ಸದ್ಯ ಇಂಟರ್​ನೆಟ್​ನಲ್ಲಿ ಸಂಚಲನ ಸೃಷ್ಟಿಸುತ್ತಿರುವ ಈ ಮನೆ. ಮುಂಬೈನ ಪೂರ್ವ ಮತುಂಗಾದಲ್ಲಿರುವ ಅಪಾರ್ಟ್​​ಮೆಂಟ್​ ಒಂದು ಹಳೆಯ ಮನೆಯ ಬಾಡಿಗೆ ದರ ಈಗ ಇಂಟರ್​ನೆಟ್​ನಲ್ಲಿ ಹಲ್​ಚಲ್ ಸೃಷ್ಟಿಸುತ್ತಿದೆ. ಸಿಂಗಲ್ ಬೆಡ್​ರೂಮ್​ನ ಈ ಮನೆಗೆ ಒಂದಲ್ಲ ಎರಡಲ್ಲ ತಿಂಗಳಿಗೆ ಬರೋಬ್ಬರಿ 45 ಸಾವಿರ ರೂಪಾಯಿ ಬಾಡಿಗೆ. ಈ ಬಾಡಿಗೆಯ ದರ ಕೇಳಿದ ನೆಟ್ಟಿಗರು ಇದೇನು ಮನೆನಾ ಇಲ್ಲಾ ಪ್ಯಾಲೆಸಾ ಎಂದು ನಿಬ್ಬೆರಗಾಗುತ್ತಾರೆ.
ಅಟ್ಟದ ಮೇಲೋಂದು ಮನೆ. ಒಂದು ಪುಟ್ಟ ಲಿವೀಂಗ್ ರೂಮ್​. ಒಂದು ಬೆಡ್​ರೂಮ್ ಒಂದು ಅಡುಗೆ ಮನೆ. ಬೇಡವಾದ ಸಾಮಾನಗಳನ್ನು ಇಡಲು ಒಂದು ಸ್ಟೇರ್​ಕೇಸ್ ಇಷ್ಟೇ ಇರೋದು ಈ ಒಂದು ಮನೆಗೆ 45 ಸಾವಿರ ರೂಪಾಯಿ ಬಾಡಿಗೆ ಕೇಳುತ್ತಿದ್ದಾರೆ. ಈ ಅಪಾರ್ಟ್​ಮೆಂಟ್​ನನ್ನು ಒಲ್ಡ್​ ವೈಬ್ಸ್ ಎಂದೇ ಬಣ್ಣಿಸಲಾಗುತ್ತಿದೆ. ಇನ್ನು ಈ ಮನೆಯ ಕಾಮನ್ ಟಾಯ್ಲೆಟ್​ ಫೋಟೋವನ್ನೇ 200ಕ್ಕೂ ಹೆಚ್ಚು ಜನ ಶೇರ್ ಮಾಡಿದ್ದಾರೆ. ಒಬ್ಬರು ನಾನು ಯುಎಸ್​​ನಲ್ಲಿ ಬಾಡಿಗೆಗೆ ಇದ್ದ ಮನೆ ಇದಕ್ಕಿಂತಲೂ ಕಡಿಮೆಯಿತ್ತು ಎಂದು ಹೇಳಿದ್ದಾರೆ. ಇನ್ನೂ ಕೆಲವರು ಈ ಮನೆ ನೋಡಿದ್ರೆ ಸರ್ಕಾರಿ ಕಾಲೇಜ್ ಹಾಗೂ ಸರ್ಕಾರಿ ಹಾಸ್ಟೆಲ್​ಗಿಂತಲೂ ಕೆಟ್ಟದಾಗಿದೆ ಎಂದು ನಗಾಡುತ್ತಿದ್ದಾರೆ. ಇನ್ನೂ ಕೆಲವರು ಇಷ್ಟೊಂದು ಬಾಡಿಗೆ ಕೇಳೋದಕ್ಕೆ ನಾಚಿಕೆ ಆಗೋದಿಲ್ವಾ ಅಂತಲೂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇವುಗಳನ್ನೆಲ್ಲಾ ನೋಡಿದಾಗ ನಮ್ಮ ಬೆಂಗಳೂರು ಸಾವಿರ ಪಾಲು ಮೇಲು ಅಂತ ನಮಗೆ ಅನಿಸದೇ ಇರೋದಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us