newsfirstkannada.com

ರಷ್ಯಾ ಅಧ್ಯಕ್ಷ ಪುಟಿನ್ ಬದ್ಧ ವೈರಿ ಜೈಲಿನಲ್ಲಿ ನಿಗೂಢ ಸಾವು; ಯಾರಿವರು? ಅನುಮಾನಗಳೇನು?

Share :

Published February 16, 2024 at 8:36pm

Update February 16, 2024 at 8:32pm

    ಪುಟಿನ್ ವಿರುದ್ಧ ತಿರುಗಿ ಬೀಳುತ್ತಿದ್ದ ವಿರೋಧ ಪಕ್ಷದ ನಾಯಕ

    ಕಳೆದ 3 ವರ್ಷಗಳಿಂದ ಸೆರೆವಾಸದಲ್ಲಿದ್ದ ರೆಬೆಲ್ ಲೀಡರ್ ಈತ

    ಅಲೆಕ್ಸಿ ಅವರ ಸಾವಿಗೆ ಪುಟೀನ್ ಬೆಂಬಲಿಗರಿಂದ ಸಂಭ್ರಮಾಚರಣೆ

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅಂದ್ರೆ ಕೆರಳಿ ಕೆಂಡವಾಗುತ್ತಿದ್ದ, ಮಾತು, ಮಾತಿಗೂ ಪುಟಿನ್ ವಿರುದ್ಧ ತಿರುಗಿ ಬೀಳುತ್ತಿದ್ದ ರಷ್ಯಾದ ವಿರೋಧ ಪಕ್ಷದ ನಾಯಕ ಅಲೆಕ್ಸಿ ನವಲ್ನಿ ಅವರು ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಕಳೆದ 3 ವರ್ಷಗಳಿಂದ ಸೆರೆವಾಸದಲ್ಲಿ ಅಲೆಕ್ಸಿ ನವಲ್ನಿ ಸಾವನ್ನಪ್ಪಿರೋದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.

47 ವರ್ಷದ ಅಲೆಕ್ಸಿ ನವಲ್ನಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ವಿರುದ್ಧ ತೀವ್ರ ಹೋರಾಟ ನಡೆಸಿದ್ದರು. ಬಹುಶಃ ರಷ್ಯಾ ದೇಶದಲ್ಲೇ ಪುಟಿನ್‌ ಅವರನ್ನು ಅಲೆಕ್ಸಿ ಅವರಷ್ಟು ಟೀಕಿಸಿದವರು ಮತ್ತೊಬ್ಬರಿಲ್ಲ. ಇತ್ತೀಚೆಗಷ್ಟೇ ಅಲೆಕ್ಸಿ ನವಲ್ನಿ ಅವರು ವ್ಲಾಡಿಮಿರ್ ಪುಟಿನ್ ಅವರು 2036ರವರೆಗೂ ರಷ್ಯಾದ ಅಧ್ಯಕ್ಷರಾಗುವ ಹುನ್ನಾರವನ್ನು ಖಂಡಿಸಿದ್ದರು. ಬಹಳ ತೀಕ್ಷ್ಣವಾದ ಶಬ್ಧಗಳಿಂದ ಅಲೆಕ್ಸಿ ವಾಗ್ದಾಳಿ ನಡೆಸಿದ್ದು ಭಾರೀ ಸುದ್ದಿಯಾಗಿತ್ತು.

ಅಲೆಕ್ಸಿ ನವಲ್ನಿ ಮೂಲತಃ ಭ್ರಷ್ಟಾಚಾರ ವಿರೋಧಿ ಚಳುವಳಿಯಲ್ಲಿ ಗುರುತಿಸಿಕೊಂಡವರು. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಎದುರಾಳಿಯಾಗಿದ್ದ ಇವರನ್ನು 2021ರಲ್ಲಿ ಜೈಲಿಗೆ ಕಳುಹಿಸಲಾಗಿತ್ತು. ಅಲೆಕ್ಸಿ ನವಲ್ನಿ ಅವರು ಜೈಲಿನಲ್ಲೇ ಸಾವನ್ನಪ್ಪಿದ್ದಾರೆ ಎನ್ನುವುದನ್ನ ಜೈಲಾಧಿಕಾರಿಗಳು ಖಚಿತಪಡಿಸಿದ್ದಾರೆ. ಜೈಲಿನಲ್ಲಿದ್ದ ರಷ್ಯಾದ ವಿಪಕ್ಷ ನಾಯಕ ಅಲೆಕ್ಸಿ ನವಲ್ನಿ ಅವರಿಗೆ ನರದ ಮೂಲಕ ವಿಷದಿಂದ ಸಾಯಿಸಿರಬಹುದು ಅನ್ನೋ ಅನುಮಾನವಿದೆ.

ಇದನ್ನೂ ಓದಿ: ರಾಯರ ಮಠಕ್ಕೆ ಭೇಟಿ ಕೊಟ್ಟ ಇನ್ಫೋಸಿಸ್ ನಾರಾಯಣ ಮೂರ್ತಿ ಕುಟುಂಬ

ಅಲೆಕ್ಸಿ ಸಾವಿಗೆ ಸಂತೋಷ್ ಮತ್ತು ಸಂತಾಪ!
ಅಲೆಕ್ಸಿ ನವಲ್ನಿ ಅವರ ನಿಗೂಢ ಸಾವಿಗೆ ಎರಡು ರೀತಿಯ ಅಭಿಪ್ರಾಯ ವ್ಯಕ್ತವಾಗಿದೆ. ರಷ್ಯಾ ಅಧ್ಯಕ್ಷ ಪುಟೀನ್ ಅವರ ಬೆಂಬಲಿಗರು ಅಲೆಕ್ಸಿ ಅವರ ಸಾವಿನ ಸುದ್ದಿಯನ್ನು ಬಹಳ ಸಂತೋಷದಿಂದ ಸ್ವಾಗತ ಮಾಡಿದ್ದಾರೆ. ಕೊನೆಯ ಬಾರಿಗೆ ಕೋರ್ಟ್ ವಿಚಾರಣೆಗೆ ಹಾಜರಾಗಿದ್ದ ಅಲೆಕ್ಸಿ ನವಲ್ನಿ ಅವರು ಕಂಬಿಯ ಹಿಂದೆ ನಿಂತಿದ್ದರೂ ವಿಡಿಯೋ ಕಾನ್ಫರೆನ್ಸ್‌ನಲ್ಲಿ ನಗುನಗುತ್ತಾ ವಿಚಾರಣೆಗೆ ಹಾಜರಾಗಿದ್ದರು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಲೆಕ್ಸಿ ನವಲ್ನಿ ಅವರ ಬೆಂಬಲಿಗರು, ಹಿಂಬಾಲಕರು ನಿಗೂಢ ಸಾವಿಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಷ್ಯಾ ಅಧ್ಯಕ್ಷ ಪುಟಿನ್ ಬದ್ಧ ವೈರಿ ಜೈಲಿನಲ್ಲಿ ನಿಗೂಢ ಸಾವು; ಯಾರಿವರು? ಅನುಮಾನಗಳೇನು?

https://newsfirstlive.com/wp-content/uploads/2024/02/Puttin-and-Alexey-Navalny.jpg

Load More