ಸಾನ್ಯ ಅಯ್ಯರ್ ಚೊಚ್ಚಲ ಸಿನಿಮಾ ರಿಲೀಸ್; ಫ್ಯಾನ್ಸ್​ ಗಮನ ಸೆಳೆದ ‘ಗೌರಿ‘ ರಿಂಗ್..!

author-image
Veena Gangani
Updated On
ಸಾನ್ಯ ಅಯ್ಯರ್ ಚೊಚ್ಚಲ ಸಿನಿಮಾ ರಿಲೀಸ್; ಫ್ಯಾನ್ಸ್​ ಗಮನ ಸೆಳೆದ ‘ಗೌರಿ‘ ರಿಂಗ್..!
Advertisment
  • ‘ಗೌರಿ‘ ಸಿನಿಮಾದ ಟ್ರೈಲರ್​ ಬಿಡುಗಡೆ ಮಾಡಿದ್ದ ನಟ ಕಿಚ್ಚ ಸುದೀಪ್‌
  • ಇಂದ್ರಜಿತ್‌ ಲಂಕೇಶ್‌ ಆಕ್ಷನ್‌ ಕಟ್‌ ಹೇಳಿರೋ ಚಿತ್ರ ಇಂದು ರಿಲೀಸ್
  • ಸಿನಿಮಾ ರಿಲೀಸ್​ ದಿನವೇ ಮಿರ ಮಿರ ಮಿಂಚಿದ ನಟಿ ಸಾನ್ಯಾ ಅಯ್ಯರ್

ಕನ್ನಡಿಗರ ಮನೆ ಮಾತಾದ ಪುಟ್ಟಗೌರಿ ಮದುವೆ ಹಾಗೂ ಬಿಗ್​ಬಾಸ್ ಖ್ಯಾತಿಯ ಸಾನ್ಯಾ ಅಯ್ಯರ್ ಅವರ ಚೊಚ್ಚಲ ಸಿನಿಮಾ ಇಂದು ರಿಲೀಸ್​ ಆಗುತ್ತಿದೆ. ಇಂದ್ರಜಿತ್‌ ಲಂಕೇಶ್‌ ಆಕ್ಷನ್‌ ಕಟ್‌ ಹೇಳಿರೋ ಗೌರಿ ಸಿನಿಮಾವು ಇಂದು ಥಿಯೇಟರ್​ಗೆ ಎಂಟ್ರಿ ಕೊಟ್ಟಿದೆ.

publive-image

ಇದನ್ನೂ ಓದಿ:ಕಲಾವಿದರ ಮೇಲೆ ನಾಗದೈವ ಕೆಂಡ.. ಸ್ಯಾಂಡಲ್‌ವುಡ್‌ನಲ್ಲಿ ಆಗಿರೋ ದೊಡ್ಡ ತಪ್ಪೇನು? ಪೂಜೆಯಲ್ಲಿ ಆಗಿದ್ದೇನು?

ಇಂದ್ರಜಿತ್‌ ಲಂಕೇಶ್‌ ಅವರ ಪುತ್ರ ಸಮರ್ಜಿತ್‌ ಲಂಕೇಶ್‌ ಹಾಗೂ ಸಾನ್ಯಾ ಅಯ್ಯರ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಗೌರಿ’ ಸಿನಿಮಾ ರಾಜ್ಯಾದ್ಯಂತ ರಿಲೀಸ್ ಆಗುತ್ತಿದೆ. ಈ ಸಿನಿಮಾದ ಟ್ರೈಲರ್​ ಅನ್ನು ನಟ ಕಿಚ್ಚ ಸುದೀಪ್‌ ಅವರು ಸೋಮವಾರ ಬಿಡುಗಡೆ ಮಾಡಿದ್ದರು. ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಗೌರಿ ಸಿನಿಮಾದ ಹಾಡುಗಳು ಭಾರಿ ಸದ್ದು ಮಾಡಿದ್ದವು.

publive-image

ಸಮರ್ಜಿತ್ ಲಂಕೇಶ್ ಮತ್ತು ಸಾನ್ಯಾ ಅಯ್ಯರ್ ನಟನೆಯ ‘ಗೌರಿ’ ಸಿನಿಮಾದ ರೊಮ್ಯಾಂಟಿಕ್ ಹಾಡಿನ ಟೀಸರ್ ಮೈಸೂರಿನಲ್ಲಿ ಅದ್ಧೂರಿಯಾಗಿ ರಿಲೀಸ್ ಆಗಿತ್ತು. ಟೀಸರ್ ಅನ್ನು ಕರ್ನಾಟಕದ ಹೆಮ್ಮೆಯ ಕ್ರಿಕೆಟ್ ಆಟಗಾರ್ತಿ ಶ್ರೆಯಾಂಕಾ ಪಾಟೀಲ್ ಅವರು ಬಿಡುಗಡೆ ಮಾಡಿದ್ದರು. ಜೊತೆಗೆ ಚಂದನ್ ಶೆಟ್ಟಿ ಸಂಗೀತ ಈ ಚಿತ್ರದ ಹಾಡುಗಳು ಗಮನ ಕೂಡ ಸೆಳೆದಿವೆ. ಈ ಚಿತ್ರಕ್ಕೆ ಉಪೇಂದ್ರ, ಕಿಚ್ಚ ಸುದೀಪ್ ಸೇರಿದಂತೆ ಅನೇಕರು ಸಪೋರ್ಟ್ ಮಾಡಿದ್ದಾರೆ.


ಸದ್ಯ ಗೌರಿ ಸಿನಿಮಾ ರಿಲೀಸ್​ ಪ್ರಯುಕ್ತ ನಟಿ ಸಾನ್ಯಾ ಅಯ್ಯರ್ ಅವರು ಇನ್​ಸ್ಟಾ​ ಖಾತೆಯಲ್ಲಿ ಹೊಸ ಹೊಸ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಇದೇ ಫೋಟೋದಲ್ಲಿ ನಟಿ ಸಾನ್ಯಾ ಅಯ್ಯರ್ ಮಿರ ಮಿರ ಮಿಂಚುತ್ತಿದ್ದಾರೆ. ಜೊತೆಗೆ ಸಾನ್ಯಾ ಅಯ್ಯರ್ ಕೈಯಲ್ಲಿ ಗೌರಿ ಎಂಬ ರಿಂಗ್​ ಅನ್ನು ಹಾಕಿಕೊಂಡು ಫೋಟೋಗೆ ಪೋಸ್​ ಕೊಟ್ಟಿದ್ದಾರೆ. ಇದೇ ಫೋಟೋ ನೋಡಿದ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment