ಭಾರತ-ಪಾಕ್ ವಿಶ್ವಕಪ್ ಪಂದ್ಯದಲ್ಲಿ ನಡೆದಿದ್ದು ಏನು ಗೊತ್ತಾ?
ನಾನ್ ಸ್ಟ್ರೈಕ್ ಎಂಡ್ನಲ್ಲಿ ನಿನ್ನ ಅಪ್ಪ ಸಚಿನ್ ಇದ್ದಾರೆ- ಸೆಹ್ವಾಗ್
ಸಿಕ್ಸ್ ಬಾರಿಸಿಕೊಂಡು ತೆಪ್ಪಗಾದ ಪಾಕಿಸ್ತಾನದ ಮಾಜಿ ವೇಗಿ
ಇಂಡೋ-ಪಾಕ್ ನಡುವೆ ಕ್ರಿಕೆಟ್ ಪಂದ್ಯ ಅಂದ್ರೆ ಅಲ್ಲಿ ಟಾಕ್ ವಾರ್ ಫಿಕ್ಸ್. ಪರಸ್ಪರ ಕಾಲೆಳೆಯೋದು ಮಾಮೂಲಿ ಅನ್ನಿಸುವಷ್ಟರ ಮಟ್ಟಿಗೆ ನಡೆಯುತ್ತದೆ. ಅತಿರೇಕದ ಹಂತ ತಲುಪಿದ ಘಟನೆಗಳೂ ಇವೆ. 2003ರ ವಿಶ್ವಕಪ್ ಪಂದ್ಯದಲ್ಲಿ ನಡೆದ ಸ್ಲೆಡ್ಜಿಂಗ್ನ ಒಂದು ಕಥೆ ಇಲ್ಲಿದೆ.
ಭಾರತ- ಪಾಕಿಸ್ತಾನ ನಡುವಿನ ಪಂದ್ಯ ಕುತೂಹಲ ಕೆರಳಿಸೋದೇ ಸ್ಲೆಡ್ಜಿಂಗ್ ಕಾರಣಕ್ಕೆ. ಅದ್ರಲ್ಲೂ ಈ ಹಿಂದೆ ಶೋಯೆಬ್ ಅಖ್ತರ್ ಆಡ್ತಿದ್ದ ಕಾಲದಲ್ಲಿ ಟಾಕ್ ವಾರ್ ಪಕ್ಕಾ ಆಗಿತ್ತು. ಸುಖಾಸುಮ್ಮನೆ ಟೀಮ್ ಇಂಡಿಯಾ ಬ್ಯಾಟ್ಸ್ಮನ್ಗಳನ್ನು ಕೆಣಕ್ತಿದ್ದ ಪಾಕ್ ವೇಗಿ, ಇರಲಾರದೆ ಇರುವೆ ಬಿಟ್ಟುಕೊಳ್ಳೋ ಕೆಲಸ ಮಾಡ್ತಿದ್ರು. 2003ರ ವಿಶ್ವಕಪ್ ಟೂರ್ನಿಯಲ್ಲೂ ಇಂತದ್ದೇ ಯಡವಟ್ಟನ್ನ ಅಖ್ತರ್ ಮಾಡಿಕೊಂಡಿದ್ರು.
ಸೆಹ್ವಾಗ್ರನ್ನ ಕೆಣಕಿದ ಅಖ್ತರ್
2003ರ ವಿಶ್ವಕಪ್ನ ಇಂಡೋ -ಪಾಕ್ ಪಂದ್ಯದ ವೇಳೆ ವಿರೇಂದ್ರ ಸೆಹ್ವಾಗ್ ಹಾಗೂ ಸಚಿನ್ ತೆಂಡೂಲ್ಕರ್ ಬ್ಯಾಟಿಂಗ್ ನಡೆಸ್ತಿದ್ದರಂತೆ. ಈ ವೇಳೆ ಬೌನ್ಸರ್ಗಳನ್ನು ಹಾಕ್ತಿದ್ದ ಅಖ್ತರ್, ಹುಕ್ ಶಾಟ್ ಹೊಡೆದು ತೋರಿಸು ಎಂದು ಸೆಹ್ವಾಗ್ರನ್ನ ಪದೇ ಪದೇ ಕೆಣಕ್ತಿದ್ರಂತೆ. ಇದಕ್ಕೆ ಆಗ ಉತ್ತರಿಸಿದ್ದ ಸೆಹ್ವಾಗ್, ನಾನ್ ಸ್ಟ್ರೈಕ್ ಎಂಡ್ನಲ್ಲಿ ನಿನ್ನ ಅಪ್ಪ ಸಚಿನ್ ತೆಂಡೂಲ್ಕರ್ ಇದ್ದಾರೆ. ಅವರಿಗೆ ಹೋಗಿ ಹೇಳು, ಅವರು ಹೊಡೆದು ತೋರಿಸ್ತಾರೆ ಎಂದಿದ್ರಂತೆ.
ಅದಾದ ನೆಕ್ಸ್ಟ್ ಓವರ್ನಲ್ಲೇ ಸಚಿನ್ ತೆಂಡುಲ್ಕರ್, ಅಖ್ತರ್ ಬೌನ್ಸರ್ಗೆ ಹುಕ್ ಶಾಟ್ ಬಾರಿಸಿ ಸಿಕ್ಸರ್ ಸಿಡಿಸಿದ್ರಂತೆ. ಆಗ ಮತ್ತೆ ಅಖ್ತರ್ ಬಳಿ ತೆರಳಿದ್ದ ಸೆಹ್ವಾಗ್, ಮಗ ಎಂದಿಗೂ ಮಗನೇ.. ಅಪ್ಪ ಅಪ್ಪನೇ ಎಂದು ಹೇಳಿದ್ರಂತೆ. ಈ ಸ್ಲೆಡ್ಜಿಂಗ್ ಘಟನೆಯನ್ನ ಸೆಹ್ವಾಗ್ ಹೇಳಿಕೊಂಡಿದ್ದಾರೆ. ಇನ್ನು, ಪಂದ್ಯದಲ್ಲಿ ಸಾಲಿಡ್ ಬ್ಯಾಟಿಂಗ್ ನಡೆಸಿದ್ದ ಸಚಿನ್ 98 ರನ್ ಸಿಡಿಸಿದ್ರೆ, ಟೀಮ್ ಇಂಡಿಯಾ 6 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿತ್ತು.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ