newsfirstkannada.com

ನಗು ನಗುತ್ತಾ ಇರು ಶಿಖರ್​.. ನಿವೃತ್ತಿ ಘೋಷಿಸಿದ ಗಬ್ಬರ್​ ಸಿಂಗ್​ಗೆ ಬೆನ್ನು ತಟ್ಟುವ ನುಡಿಗಳನ್ನಾಡಿದ ಸಚಿನ್​ ​​

Share :

Published August 25, 2024 at 10:59am

    ದೇಶೀಯ, ಅಂತರರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ

    ಶಿಖರ್​ ನಿವೃತ್ತಿ ಬೆನ್ನಲ್ಲೇ ಸಚಿನ್​, ಸೆಹ್ವಾಗ್​ ಟ್ವೀಟ್​

    ಟ್ವೀಟ್​ನಲ್ಲೇ ಬೆನ್ನು ತಟ್ಟುವ ನುಡಿಗಳನ್ನಾಡಿದ ದಿಗ್ಗಜರು

ಕ್ರಿಕೆಟ್​​ ಫ್ಯಾನ್ಸ್​​ಗಳಿಂದ ‘ಗಬ್ಬರ್​ ಸಿಂಗ್’ ಎಂದೇ ಖ್ಯಾತಿ ಪಡೆದಿದ್ದ ಶಿಖರ್​ ಧವನ್​ ನಿನ್ನೆ ನಿವೃತ್ತಿ ಘೋಷಿಸಿದ್ದರು. ದೇಶಿಯ ಮತ್ತು ಅಂತರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ದಾರೆ. ವಿಡಿಯೋ ಹಂಚುವ ಮೂಲಕ ನಿವೃತ್ತಿ ಮತ್ತು ತನಗೆ ಪ್ರೋತ್ಸಾಹ ನೀಡಿದವರಿಗೆ ಧನ್ಯವಾದ ಸಮರ್ಪಿಸಿದರು. ಆದರೆ ಇವರ ನಿವೃತ್ತಿ ಬೆನ್ನಲ್ಲೇ ಕ್ರಿಕೆಟ್​ ತಾರೆಯರು ಶಿಖರ್​ ಧವನ್​ಗೆ ಬೆನ್ನು ತಟ್ಟುವ ಮಾತುಗಳನ್ನಾಡಿದ್ದಾರೆ. ಕ್ರಿಕೆಟ್​ ದಂತಕತೆ ಸಚಿನ್​ ತೆಂಡೂಲ್ಕರ್​ ಕೂಡ ಟ್ವೀಟ್​ನಲ್ಲಿ ಶಿಖರ್​ಗೆ ಧನ್ಯವಾದ ಸಮರ್ಪಿಸಿದ್ದಾರೆ.

ಸಚಿನ್​ ತೆಂಡೂಲ್ಕರ್​, ‘ಶಿಖರ್​ ಧವನ್​, ಕ್ರಿಕೆಟ್​ ಕ್ಷೇತ್ರವು ಖಂಡಿತವಾಗಿಯೂ ನಿಮ್ಮ ಪ್ರತಿಭೆಯನ್ನು ಕಳೆದುಕೊಳ್ಳುತ್ತಿದೆ. ನಿಮ್ಮ ನಗು, ನಿಮ್ಮ ಶೈಲಿ ಮತ್ತು ಕ್ರೀಡೆ ಮೇಲಿನ ನಿಮ್ಮ ಪ್ರೀತಿ ಯಾವಾಗಲು ಪ್ರಜ್ವಲಿಸುತ್ತದೆ. ನಿಮ್ಮ ಕ್ರಿಕೆಟ್​ ವೃತ್ತಿ ಜೀವನದ ಪುಟವು ನೀವು ತಿರುಗಿಸಿದಂತೆ, ನಿಮ್ಮ ಪರಂಪರೆ, ಅಭಿಮಾನಿಗಳು, ತಂಡದ ಸಹ ಆಟಗಾರರ ಹೃದಯದಲ್ಲಿ ಶಾಶ್ವತವಾಗಿ ಉಳಿಯುತ್ತದೆ. ನಿಮ್ಮ ಭವಿಷ್ಯಕ್ಕೆ ಇಳ್ಳೆಯದಾಗಲಿ. ಯಾವಾಗಲೂ ನಗುತ್ತಾ ಇರಿ ಶಿಖರ್​’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಐಪಿಎಲ್​ಗೆ ಮತ್ತೆ ಮರಳಲು ಸಜ್ಜಾದ ಯುವರಾಜ್​ ಸಿಂಗ್​! ಆರ್​ಸಿಬಿ ಮಾಜಿ ಆಟಗಾರನಿಗೆ ಬೆನ್ನು ಬಿದ್ದಿದೆ ಈ ತಂಡ!

ಸೆಹ್ವಾಗ್​ ಕೂಡ ಟ್ವೀಟ್​ ಮಾಡಿದ್ದು, ‘ಅಭಿನಂದನೆಗಳು ಶಿಖರ್​. ಮೊಹಾಲಿಯಲ್ಲಿ ನೀವು ನನ್ನ ಸ್ಥಾನಕ್ಕೆ ಬಂದಾಗ ನೀವು ಹಿಂತಿರುಗಿ ನೋಡಲಿಲ್ಲ. ಕೆಲವು ಉತ್ತಮ ಪ್ರದರ್ಶನಗಳನ್ನು ನೀಡಿದ್ದೀರಿ. ಮೋಜು ಮಾಡುತ್ತೀರಿ. ನಿಮಗೆ ಒಳಿತಾಗಲಿ’ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Gold Rate: ಚಿನ್ನ, ಬೆಳ್ಳಿ ಬೆಲೆ ದಿಢೀರ್​​ ಏರಿಕೆ.. ಕೃಷ್ಣ ಜನ್ಮಾಷ್ಟಮಿಯಂದು ದುಬಾರಿಯಾದ ಬಂಗಾರ

ಗೌತಮ್​ ಗಂಭೀರ್​ ಕೂಡ ಟ್ವೀಟ್​ ಮಾಡಿದ್ದು, ‘ಅದ್ಭುತ ವೃತ್ತಿ ಜೀವನಕ್ಕಾಗಿ ಶಿಖರ್​ಗೆ ಅಭಿನಂದನೆಗಳು’ ಎಂದು ಬರೆದುಕೊಂಡಿದ್ದಾರೆ. ​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಗು ನಗುತ್ತಾ ಇರು ಶಿಖರ್​.. ನಿವೃತ್ತಿ ಘೋಷಿಸಿದ ಗಬ್ಬರ್​ ಸಿಂಗ್​ಗೆ ಬೆನ್ನು ತಟ್ಟುವ ನುಡಿಗಳನ್ನಾಡಿದ ಸಚಿನ್​ ​​

https://newsfirstlive.com/wp-content/uploads/2024/08/Shikar-dawan.jpg

Load More