ನಿವೃತ್ತಿ ಬಳಿಕ ಮತ್ತೆ ಐಪಿಎಲ್ಗೆ ಮರಳಬಹುದಾ?
ಯುವರಾಜ್ ಸಿಂಗ್ಗೆ ಬಂದಿದೆಯಂತೆ ಹೀಗೊಂದು ಆಫರ್
ಆರ್ಸಿಬಿ ಮಾಜಿ ಆಟಗಾರನಿಗೆ ಈಗ ಭಾರೀ ಡಿಮ್ಯಾಂಡ್
ಭಾರತದ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಕುರಿತಾಗಿ ಅಚ್ಚರಿಯ ಸುದ್ದಿಯೊಂದು ಹರಿದಾಡುತ್ತಿದೆ. ಯುವಿ ಮತ್ತೆ ಐಪಿಎಲ್ಗೆ ಮರಳಬಹುದು ಎಂದು ಹೇಳಲಾಗುತ್ತಿದೆ. ಆದರೆ ಈ ಬಾರಿ ಯುವರಾಜ್ ಸಿಂಗ್ ವಿಭಿನ್ನ ನಿರ್ವಹಣೆಯನ್ನು ಹೊರಲಿದ್ದಾರೆ ಎನ್ನಲಾಗುತ್ತಿದೆ.
ಯುವರಾಜ್ ಸಿಂಗ್ 2019ರಲ್ಲಿ ತಮ್ಮ ಕೊನೆಯ ಐಪಿಎಲ್ ಪಂದ್ಯವಾಡಿದರು. ಆ ಬಳಿಕ ಇಂಡಿಯನ್ ಪ್ರೀಮಿಯರ್ ಲೀಗ್ನತ್ತ ಮುಖ ಮಾಡಿರಲಿಲ್ಲ. ಆದರೀಗ 2025ರ ಐಪಿಎಲ್ನಲ್ಲಿ ಕೋಚ್ ಆಗಿ ಯುವಿ ಪಾದಾರ್ಪಣೆ ಮಾಡಲಿದ್ದಾರೆ ಎನ್ನಲಾಗುತ್ತಿದೆ. ತಂಡವೊಂದನ್ನು ನಿರ್ವಹಿಸಲಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ‘ನಮಗೆ ಈ ಆಟಗಾರರು ಬೇಕೇ ಬೇಕು’- ಮೆಗಾ ಆಕ್ಷನ್ ಮಾಸ್ಟರ್ ಪ್ಲಾನ್ ಬಿಚ್ಚಿಟ್ಟ RCB ಕೋಚ್
ಸದ್ಯ ಹರಿದಾಡುತ್ತಿರುವ ಮಾಹಿತಿ ಪ್ರಕಾರ ಯುವರಾಜ್ ಸಿಂಗ್ ದೆಹಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಸದ್ಯ ಈ ಕುರಿತಾಗಿ ಮಾತುಕತೆ ನಡೆಯುತ್ತಿದೆ ಎಂಬ ಮಾತುಗಳು ಕೇಳಿಬಂದಿವೆ.
ಐಪಿಎಲ್ನ ಕೊನೆಯ ಮೂರು ಸೀಸನ್ನಲ್ಲಿ ಡೆಲ್ಲಿ ತಂಡ ಪ್ಲೇಆಫ್ಗೆ ಹೋಗಲು ವಿಫಲವಾಯಿತು. ಕಳೆದ ತಿಂಗಳು ರಿಕಿ ಪಾಟಿಂಗ್ ತಂಡದಿಂದ ಹೊರಹೋದರು. 7 ವರ್ಷಗಳ ಸಂಬಂಧವನ್ನು ಕೊನೆಗೊಳಿಸಿ ಹೊರನಡೆದರು. ಇದೀಗ ರಿಕಿ ಪಾಟಿಂಗ್ ಹೋದ ಬಳಿಕ ಯುವರಾಜ್ಸಿಂಗ್ಗೆ ತಂಡವನ್ನು ಕೋಚ್ ಆಗಿ ನಿರ್ವಹಿಸುವ ಜವಾಬ್ದಾರಿಯನ್ನು ನೀಡಲು ಮುಂದಾಗಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: IPL 2025: ಭಾರತದ T20 ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ಗೆ ಆರ್ಸಿಬಿಯಿಂದ ಬಿಗ್ ಆಫರ್
ಯುವರಾಜ್ ಸಿಂಗ್ 2007ರ ಮತ್ತು 2011ರ ವಿಶ್ವಕಪ್ನಲ್ಲಿ ಭಾರತ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಐಪಿಎಲ್ನಲ್ಲಿ ಸಾಧನೆ ಬರೆದು ಬಳಿಕ ನಿವೃತ್ತರಾದರು. 2019ರಲ್ಲಿ ಮುಂಬೈ ಇಂಡಿಯನ್ಸ್ ತಂಡದ ಭಾಗವಾಗಿದ್ದರು. ಅದೇ ವರ್ಷ ಸಿಎಸ್ಕೆ ತಂಡವನ್ನು ಸೋಲಿಸುವ ಮೂಲಕ ಫೈನಲ್ನಲ್ಲಿ 4ನೇ ಪ್ರಶಸ್ತಿ ಪಡೆದರು.
ಇದನ್ನೂ ಓದಿ: ಸುನೀತಾ ವಿಲಿಯಮ್ಸ್ ವಾಪಾಸಾತಿ ಸದ್ಯ ಭಾರೀ ಅಪಾಯಕಾರಿ.. ನಾಸಾದಿಂದ ಅಚ್ಚರಿಯ ಹೇಳಿಕೆ!
ಐಪಿಎಲ್ನಲ್ಲಿ 12 ವರ್ಷ ಯುವಿ ಹೆಜ್ಜೆ ಹಾಕಿದ್ದಾರೆ. ಪಂಜಾಬ್ ಕಿಂಗ್ಸ್, ಪುಣೆ ವಾರಿಯರ್ಸ್ ಇಂಡಿಯಾ, ಡೆಲ್ಲಿ ಕ್ಯಾಪಿಟಲ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಸನ್ರೈಸರ್ಸ್ ಹೈದರಾಬಾದ್ ಮತ್ತು ಮುಂಬೈ ಇಂಡಿಯನ್ಸ್ ತಂಡದಲ್ಲೂ ಆಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ