newsfirstkannada.com

‘ಕುಮಾರಿ ಆಂಟಿ’ ಅಭಿಮಾನಿಗಳಿಗೆ ಗುಡ್‌ನ್ಯೂಸ್ ಕೊಟ್ಟ ತೆಲಂಗಾಣ ಸಿಎಂ ರೇವಂತ್ ರೆಡ್ಡಿ; ಏನದು?

Share :

Published February 1, 2024 at 7:59pm

    ಸೋಷಿಯಲ್ ಮೀಡಿಯಾದಲ್ಲಿ ಸ್ಟಾರ್ ಆಗಿದ್ದ 'ಸಾಯಿಕುಮಾರಿ ಆಂಟಿ'

    ಪೊಲೀಸರಿಂದ ಮುಚ್ಚಲಾಗಿದ್ದ ಫುಡ್ ಸ್ಟಾಲ್ ರೀ ಓಪನ್ ಆಗಲು ರೆಡಿ

    ಕುಮಾರಿ ಆಂಟಿ ಹೋಟೆಲ್‌ಗೆ ಹೋಗ್ತಾರಾ ಸಿಎಂ ರೇವಂತ್ ರೆಡ್ಡಿ?

ಹೈದರಾಬಾದ್​:  ಸಾಮಾಜಿಕ ಜಾಲತಾಣದಲ್ಲಿ ‘ಕುಮಾರಿ ಆಂಟಿ’ ಎಂದೇ ಪ್ರಸಿದ್ಧರಾಗಿರುವ ಸಾಯಿ ಕುಮಾರಿ ಯಾರಿಗೆ ಗೊತ್ತಿಲ್ಲ ಹೇಳಿ. ರಸ್ತೆ ಬದಿ ಬಗೆ ಬಗೆಯ ರೀತಿಯಲ್ಲಿ ಅಡುಗೆ ಮಾಡಿ ವ್ಯಾಪಾರ ಮಾಡುತ್ತಿದ್ದ ಮಹಿಳೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು. ರುಚಿ ರುಚಿಯ ಅಡುಗೆ, ಒಂದು ಒಳ್ಳೆಯ ಊಟ ಸಿಗುತ್ತೆ ಅಂದ್ರೆ ತಿಂಡಿ ಪ್ರಿಯರು ಹುಡುಕಿಕೊಂಡು ಹೋಗುತ್ತಾರೆ. ಅದೇ ರೀತಿ ಸಾಮಾಜಿಕ ಜಾಲತಾಣದ ಮೂಲಕವೇ ಹೆಚ್ಚು ಪ್ರಸಿದ್ಧಿ ಪಡೆದ ಸಾಯಿಕುಮಾರಿ ಆಂಟಿಯ ಫುಡ್ ಸ್ಟಾಲ್ ಅನ್ನು ಪೊಲೀಸರು ಮುಚ್ಚುವಂತೆ ಆದೇಶ ಹೊರಡಿಸಿದ್ದರು.

ಸಾಯಿಕುಮಾರಿ ಅವರು ಹೈದರಾಬಾದ್‌ನಲ್ಲಿನ ಬೀದಿ ಬದಿಯಲ್ಲಿ ಸಣ್ಣ ಸ್ಟಾಲ್​ ಅನ್ನು ನಿರ್ಮಿಸಿ ಅಡುಗೆ ಮಾಡುತ್ತಿದ್ದರು. ಅಲ್ಲಿಗೆ ಬಂದ ತಿಂಡಿ ಪ್ರಿಯರಿಗೆ ಸಾಯಿಕುಮಾರಿ ಌಂಟಿ ಮಾಡುವ ಅಡುಗೆ ಇಷ್ಟವಾಗಿತ್ತು. ಕುಮಾರಿ ಆಂಟಿ ಮಾಡುವ ವಿಧ ವಿಧವಾದ ಅಡುಗೆಗಳನ್ನು ಸಾಕಷ್ಟು ಜನರು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದರು. ಆ ವಿಡಿಯೋಗಳು ವೈರಲ್​ ಆದ ಬಳಿಕ ತೆಲುಗು ರಾಜ್ಯಗಳಲ್ಲಿ ಸಾಯಿಕುಮಾರಿ ಬಹಳ ಜನಪ್ರಿಯರಾದರು. ಬಳಿಕ ಸಾಯಿಕುಮಾರಿ ಮಾಡುವ ಅಡುಗೆ ಕೈ ರುಚಿಗೆ ಅನೇಕ ಚಿತ್ರರಂಗದ ಗಣ್ಯರು ಅವರ ಸ್ಟಾಲ್‌ಗೆ ಭೇಟಿ ನೀಡುತ್ತಿದ್ದರು.

ಇದನ್ನು ಓದಿ: BBK10: ಸಣ್ಣ ಅವಕಾಶಕ್ಕಾಗಿ ಸೈಕಲ್ ಹೊಡೆಯುತ್ತಿದ್ದ.. ಕಷ್ಟದಲ್ಲೂ ಕಾರ್ತಿಕ್‌ ಲೈಫ್ ಚೇಂಚ್ ಆಗಿದ್ದು ಹೇಗೆ?

ಆದರೆ ಕೆಲ ದಿನಗಳ ಹಿಂದೆ ಹೈದರಾಬಾದ್‌ನ ಐಟಿಸಿ ಕೊಹಿನೂರ್ ಸರ್ಕಲ್‌ಗೆ ಬಂದ ಹೈದರಾಬಾದ್ ಪೊಲೀಸರು ಹೈಟೆಕ್ ಸಿಟಿ ಮಾರ್ಗದಲ್ಲಿ ಸ್ಟ್ರೀಟ್ ಫುಡ್ ಸ್ಟಾಲ್‌ನಿಂದ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಈ ಜಾಗವನ್ನು ಕೂಡಲೇ ಖಾಲಿ ಮಾಡುವಂತೆ ಆದೇಶ ನೀಡಿದ್ದರಂತೆ. ಇದಾದ ಬಳಿಕ ಸಾಯಿಕುಮಾರಿ ಅವರು ವಾಹನ ದಟ್ಟಣೆಯನ್ನು ಸೃಷ್ಟಿಸಬೇಡಿ ಎಂದು ನಾನು ಗ್ರಾಹಕರನ್ನು ವಿನಂತಿಸುತ್ತಿದ್ದೇನೆ. ಆದರೆ ಅವರು ನನ್ನ ಮಾತನ್ನು ಕೇಳುತ್ತಿಲ್ಲ. ಇಲ್ಲಿ ಅನೇಕ ಆಹಾರ ಮಳಿಗೆಗಳಿದ್ದರೂ ಪೊಲೀಸರು ನನ್ನ ಸ್ಟಾಲ್ ಅನ್ನು ಮಾತ್ರ ಮುಚ್ಚಿದರು. ಅಂಗಡಿಯೇ ನನ್ನ ಜೀವನಾಧಾರ. ದಯವಿಟ್ಟು ನನಗೆ ನ್ಯಾಯ ಒದಗಿಸಿ ಎಂದು ಕುಮಾರಿ ಅಳಲು ತೋಡಿಕೊಂಡಿದ್ದರು.

ಕುಮಾರಿ ಆಂಟಿ ವಿಡಿಯೋಗಳು ಸಾಕಷ್ಟು ವೈರಲ್​​ ಆಗಿದ್ದವು. ಈ ವಿಡಿಯೋ ನೋಡಿದ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಆ ಸ್ಟಾಲ್ ಅನ್ನು ಮತ್ತೆ ತೆರೆಯುವಂತೆ ಡಿಜಿಪಿಗೆ ಆದೇಶಿಸಿದ್ದಾರೆ. ಹೌದು, ಸಾಕಷ್ಟು ಜನಪ್ರಿಯತೆ ಪಡೆದುಕೊಂಡ ಸ್ಟಾಲ್​ ಅನ್ನು ಮತ್ತೆ ತೆರೆಯುವಂತೆ ಆದೇಶ ಹೊರಡಿಸಿದ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರಿಗೆ ಕುಮಾರಿ ಅವರು ಧನ್ಯವಾದಗಳನ್ನು ತಿಳಿಸಿದ್ದಾರೆ. ಇನ್ನೂ ಈ ಬಗ್ಗೆ ಸೋಷಿಯಲ್​ ಮಿಡಿಯಾದಲ್ಲಿ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಮಾಹಿತಿ ಪ್ರಕಾರ ಮುಖ್ಯಮಂತ್ರಿಗಳು ಶೀಘ್ರದಲ್ಲೇ ಸ್ಟಾಲ್‌ಗೆ ಭೇಟಿ ನೀಡಲಿದ್ದು, ಜನಪ್ರಿಯ ಬೀದಿ ಆಹಾರ ಮಳಿಗೆಯಲ್ಲಿ ಊಟ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಕುಮಾರಿ ಆಂಟಿ’ ಅಭಿಮಾನಿಗಳಿಗೆ ಗುಡ್‌ನ್ಯೂಸ್ ಕೊಟ್ಟ ತೆಲಂಗಾಣ ಸಿಎಂ ರೇವಂತ್ ರೆಡ್ಡಿ; ಏನದು?

https://newsfirstlive.com/wp-content/uploads/2024/02/aunty-2.jpg

Load More