newsfirstkannada.com

ಸ್ತ್ರೀ ದ್ವೇಷಿ ಶಾಮನೂರು ಶಿವಶಂಕರಪ್ಪ.. ಕಾಂಗ್ರೆಸ್ ನಾಯಕನ ಮೇಲೆ ಸೈನಾ ನೆಹ್ವಾಲ್ ಕೆಂಡಾಮಂಡಲ; ಯಾಕೆ?

Share :

Published March 30, 2024 at 8:54pm

Update March 30, 2024 at 9:04pm

  ದಾವಣಗೆರೆ ಬಿಜೆಪಿ ಮಹಿಳಾ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ್ ಬಗ್ಗೆ ಮಾತು

  ಕಾಂಗ್ರೆಸ್ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪಗೆ ತಿರುಗೇಟು

  ನಾರಿ ಶಕ್ತಿಗೆ ಅಪಮಾನ ಮತ್ತು ಸ್ತ್ರೀ ದ್ವೇಷಿ ಹೇಳಿಕೆ ಎಂದ ಸೈನಾ ನೆಹ್ವಾಲ್

ದಾವಣಗೆರೆ ಬಿಜೆಪಿ ಮಹಿಳಾ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ್ ಅವರು ಅಡುಗೆ ಮಾಡೋದಕ್ಕೆ ಲಾಯಕ್ಕೂ. ಕಾಂಗ್ರೆಸ್ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ನೀಡಿರೋ ಈ ವಿವಾದಾತ್ಮಕ ಹೇಳಿಕೆ ಅತಿ ದೊಡ್ಡ ಸಂಚಲನ ಸೃಷ್ಟಿಸಿದೆ. ಬಿಜೆಪಿ ನಾಯಕರು ಕಾಂಗ್ರೆಸ್ ಶಾಸಕ ಲೇವಡಿಯನ್ನು ಖಂಡಿಸಿದ್ದಾರೆ. ಇದೀಗ ಮಾಜಿ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಅವರು ಶಾಮನೂರು ಶಿವಶಂಕರಪ್ಪ ಅವರಿಗೆ ತಿರುಗೇಟು ಕೊಟ್ಟಿದ್ದಾರೆ.

ಲೋಕಸಭಾ ಚುನಾವಣೆಗೆ ಸ್ಪರ್ಧಿಸಿರುವ ಮಹಿಳಾ ಅಭ್ಯರ್ಥಿ ಬಗ್ಗೆ ಶಾಮನೂರು ಶಿವಶಂಕರಪ್ಪ ನೀಡಿರೋ ಹೇಳಿಕೆಯನ್ನ ಸೈನಾ ನೆಹ್ವಾಲ್ ಅವರು ತೀವ್ರವಾಗಿ ಖಂಡಿಸಿದ್ದಾರೆ. ಕಾಂಗ್ರೆಸ್ ನಾಯಕನ ಮಾತು ಸ್ತ್ರೀ ವಿರೋಧಿ ಧೋರಣೆಯಾಗಿದೆ. ಈ ಹೇಳಿಕೆ ಮಹಿಳಾ ಸಬಲೀಕರಣವನ್ನೇ ಅವಮಾನಿಸಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ‘BJP ಅಭ್ಯರ್ಥಿ ಅಡುಗೆ ಮಾಡೋದಕ್ಕೆ ಮಾತ್ರ ಲಾಯಕ್ಕು’- ಶಾಮನೂರು ಶಿವಶಂಕರಪ್ಪ ಲೇವಡಿ

ಸೋಷಿಯಲ್ ಮೀಡಿಯಾ X ನಲ್ಲಿ ಪ್ರತಿಕ್ರಿಯಿಸಿರುವ ಸೈನಾ ನೆಹ್ವಾಲ್ ಅವರು ನಾನು ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಪರ ಆಡುವಾಗ ನನಗೆ ಆದ್ಯತೆ ನೀಡಿದೆ. ನನಗೆ ಅವಕಾಶ ಸಿಕ್ಕ ಮೇಲೆ ಭಾರತಕ್ಕಾಗಿ ಪದಕ ಗೆಲ್ಲಲು ಸಾಧ್ಯವಾಯಿತು. ಮಹಿಳೆಯರು ದೊಡ್ಡ ಸಾಧನೆ ಮಾಡಬೇಕು ಅಂತ ಕನಸು ಕಾಣುವಾಗ ನಾರಿ ಶಕ್ತಿಯನ್ನು ಸಂಹಾರ ಮಾಡಲಾಗುತ್ತಾ ಇದ್ಯಾ. ಪ್ರಧಾನಿ ನರೇಂದ್ರ ಮೋದಿ ಅವರು ಮಹಿಳೆಯರಿಗಾಗಿ ಮಹಿಳಾ ಮೀಸಲಾತಿ ಬಿಲ್ ಜಾರಿಗೆ ತಂದಿದ್ದಾರೆ. ಇಂತಹ ಸಂದರ್ಭದಲ್ಲಿ ನಾರಿ ಶಕ್ತಿಗೆ ಅಪಮಾನ ಮತ್ತು ಸ್ತ್ರೀ ದ್ವೇಷಿ ಹೇಳಿಕೆ ನೀಡುವುದು ಬೇಸರದ ಸಂಗತಿ ಎಂದಿದ್ದಾರೆ.

ಶಾಮನೂರು ಶಿವಶಂಕರಪ್ಪ ಹೇಳಿದ್ದೇನು?
ದಾವಣಗೆರೆಯಲ್ಲಿ ಕಾಂಗ್ರೆಸ್ ಸಭೆಯಲ್ಲಿ ಮಾತನಾಡಿದ್ದ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಅವರು ಬಿಜೆಪಿ ಮಹಿಳಾ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ್ ಅವರು ಅಡುಗೆ ಮಾಡಲಿಕ್ಕೆ ಲಾಯಕ್ಕು. ಆಕೆಗೆ ಸರಿಯಾಗಿ ಮಾತನಾಡಲು ಬರಲ್ಲ. ದಾವಣಗೆರೆ ಜಿಲ್ಲೆಯ ಸಮಸ್ಯೆಗಳು ಏನು ಅನ್ನೋದೇ ಆ ಅಭ್ಯರ್ಥಿಗೆ ಗೊತ್ತಿಲ್ಲ ಎಂದಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸ್ತ್ರೀ ದ್ವೇಷಿ ಶಾಮನೂರು ಶಿವಶಂಕರಪ್ಪ.. ಕಾಂಗ್ರೆಸ್ ನಾಯಕನ ಮೇಲೆ ಸೈನಾ ನೆಹ್ವಾಲ್ ಕೆಂಡಾಮಂಡಲ; ಯಾಕೆ?

https://newsfirstlive.com/wp-content/uploads/2024/03/Saina-Shamanur-Shivashankarappa.jpg

Load More