ಸಲ್ಮಾನ್​ ಖಾನ್​​ಗೆ ಇನ್ನೂ ಕಾಡುತ್ತಿದೆ ನೋವು.. ಬಾಬಾ ಸಿದ್ಧಿಕಿ ಸಾವಿನ ಬಳಿಕ ಪ್ರತಿ ದಿನ ರಾತ್ರಿ ಮಾಡ್ತಿರೋದೇನು?

author-image
Gopal Kulkarni
Updated On
ಸಲ್ಮಾನ್​ ಖಾನ್​​ಗೆ ಇನ್ನೂ ಕಾಡುತ್ತಿದೆ ನೋವು.. ಬಾಬಾ ಸಿದ್ಧಿಕಿ ಸಾವಿನ ಬಳಿಕ ಪ್ರತಿ ದಿನ ರಾತ್ರಿ ಮಾಡ್ತಿರೋದೇನು?
Advertisment
  • ಬಾಬಾ ಸಿದ್ಧಿಕಿ ಹತ್ಯೆಯ ನೋವಿನಲ್ಲಿ ಇನ್ನೂ ಇರುವ ಸಲ್ಲು ಭಾಯ್​
  • ಸಲ್ಮಾನ್​ ಖಾನ್ ಮತ್ತು ತಮ್ಮ ಕುಟುಂಬದ ಬಗ್ಗೆ ಸಿದ್ಧಿಕಿ ಪುತ್ರ ಹೇಳಿದ್ದೇನು
  • ಸಲ್ಮಾನ್ ಖಾನ್ ಬಗ್ಗೆ ಬಾಬಾ ಸಿದ್ಧಿಕಿ ಪುತ್ರ ಹೇಳಿರುವ ಆ ಸಂಗತಿ ಏನು?

ಎನ್​ಸಿಪಿ ನಾಯಕ ಹಾಗೂ ಮಹಾರಾಷ್ಟ್ರ ಮಾಜಿ ಸಚಿವ ಬಾಬಾ ಸಿದ್ಧಿಕಿ ಇತ್ತೀಚೆಗಷ್ಟೇ ಮುಂಬೈನಲ್ಲಿ ಭೀಕರವಾಗಿ ಕೊಲೆಯಾಗಿ ಹೋದರು. ಈ ಹತ್ಯೆಯ ಹೊಣೆಯನ್ನು ಗ್ಯಾಂಗ್​ಸ್ಟಾರ್​ ಲಾರೆನ್ಸ್ ಬಿಷ್ಣೋಯಿ ಪಡೆ ಹೊತ್ತುಕೊಂಡಿತ್ತು. ಸಲ್ಮಾನ್ ಖಾನ್​ಗೆ ಆಪ್ತನಾಗಿದ್ದ ಕಾರಣಕ್ಕೆನೇ ಬಾಬಾ ಸಿದ್ಧಿಕಿಯನ್ನು ಹೊಡೆದು ಹಾಕಿದ್ದು ಎಂದು ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಹೇಳಿಕೊಂಡಿತ್ತು. ದಸರಾ ಸಮಯದಲ್ಲಿ ಜನರು ಪಟಾಕಿ ಹೊಡೆಯುತ್ತಿದ್ದ ಸಮಯದಲ್ಲಿ ಪುತ್ರನ ಆಫೀಸ್​ನಿಂದ ಆಚೆ ಬರುವಾಗ ಹೊಂಚು ಹಾಕಿ ಗುಂಡು ಹೊಡೆದು 66 ವರ್ಷದ ಬಾಬ ಸಿದ್ಧಿಕಿಯನ್ನು ಭೀಕರವಾಗಿ ಮುಗಿಸಿ ಹಾಕಿತ್ತು ಬಿಷ್ಣೋಯಿ ಗ್ಯಾಂಗ್.

ಇದನ್ನೂ ಓದಿ:ದೃಶ್ಯಂ ಸಿನಿಮಾ ರೀತಿಯಲ್ಲಿ ಕೊ*ಲೆ! ಪ್ರೇಯಸಿಯನ್ನು ಕೊಂದು ಜಿಲ್ಲಾಧಿಕಾರಿ ಬಂಗಲೆಯಲ್ಲೇ ಹೂತಿಟ್ಟಿದ್ದ ಲವ್ವರ್​!

ಸದ್ಯ ಇದೇ ವಿಚಾರವಾಗಿ ಬಾಬಾ ಸಿದ್ಧಿಕಿ ಪುತ್ರ ಒಂದು ಸಂದರ್ಶನದಲ್ಲಿ ತಮ್ಮ ಕುಟುಂಬದೊಂದಿಗೆ ಸಲ್ಮಾನ್​ ಖಾನ್ ಹೊಂದಿದ್ದ ಬಾಂಧವ್ಯವನ್ನು ಬಿಡಿಸಿಟ್ಟಿದ್ದಾರೆ. 32 ವರ್ಷದ ಜೀಷಾನ್ ಸಿದ್ಧಿಕಿ ಖಾಸಗಿ ಸುದ್ದಿವಾಹಿನಿಗೆ ಸಂದರ್ಶನ ನೀಡುವ ವೇಳೆಯಲ್ಲಿ ಅವರ ತಂದೆ ಹಾಗೂ ಸಲ್ಮಾನ್ ಖಾನ್ ನಡುವಿನ ಸಂಬಂಧವನ್ನು ಎಳೆ ಎಳೆಯಾಗಿ ತೆರೆದಿಟ್ಟಿದ್ದಾರೆ. ಸಲ್ಲಾನ್ ಖಾನ್ ಹಾಗೂ ನನ್ನ ತಂದೆ ಒಡಹುಟ್ಟಿದವರಂತೆ ಇದ್ದರು. ತಂದೆಯ ಅಗಲಿಕೆಯ ನಂತರವೂ ಕೂಡ ಸಲ್ಮಾನ್ ಖಾನ್ ನಮ್ಮ ಕುಟುಂಬಕ್ಕೆ ಬೆಂಬಲವಾಗಿ ನಿಂತಿದ್ದಾರೆ. ನಿತ್ಯ ರಾತ್ರಿ ನನ್ನನ್ನು ವಿಚಾರಿಸುತ್ತಾರೆ. ನಿದ್ದೆ ಬಂದಿಲ್ಲ ಅಂತ ಹೇಳಿದ್ರೆ ನನ್ನೊಂದಿಗೆ ಮಾತನಾಡಿ ಬಲ ತುಂಬುತ್ತಾರೆ. ಯಾವಾಗಲೂ ನಮ್ಮ ಕುಟುಂಬಕ್ಕೆ ಅವರು ಶಕ್ತಿಯಾಗಿ ನಿಲ್ಲುತ್ತಲೇ ಬಂದಿದ್ದಾರೆ ಎಂದು ಜೀಷಾನ್ ಸಿದ್ಧಿಕಿ ಹೇಳಿದ್ದಾರೆ.

publive-image

ಜೀಷಾನ್ ಸಿದ್ಧಿಕಿ ಸದ್ಯ ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿರುವ ಅಜಿತ್ ಪವಾರ್ ಅವರ ಎನ್​ಸಿಪಿ ಪಕ್ಷವನ್ನು ಸೇರಿಕೊಂಡಿದ್ದು ಇತ್ತೀಚೆಗಷ್ಟೇ ಅವರಿಗೆ ಪೂರ್ವ ವಾಂದ್ರೆ ವಿಧಾನಸಭಾ ಕ್ಷೇತ್ರದ ಟಿಕೆಟ್​ನನ್ನು ಕೂಡ ನೀಡಲಾಗಿದೆ. ಕೆಲವು ತಿಂಗಳುಗಳ ಹಿಂದಷ್ಟೇ ವಿಧಾನ ಪರಿಷತ್ ಚುನಾವಣೆಯಲ್ಲಿ ಕ್ರಾಸ್ ವೋಟ್ ಹಾಕಿದ್ದಕ್ಕಾಗಿ ಅವರನ್ನು ಕಾಂಗ್ರೆಸ್​ನಿಂದ ಉಚ್ಛಾಟಿಸಲಾಗಿತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment