Advertisment

ಸಲ್ಮಾನ್ ಖಾನ್ ಮನೆ ಮೇಲೆ ಗುಂಡಿನ ದಾಳಿ; ಭಯಾನಕ ಕ್ರಿಮಿನಲ್​​, ಶೂಟರ್​ ವಿಶಾಲ್ ಅಲಿಯಾಸ್ ಕಾಲು ಯಾರು?

author-image
Ganesh
Updated On
ಸಲ್ಮಾನ್ ಖಾನ್ ಮನೆ ಮೇಲೆ ಗುಂಡಿನ ದಾಳಿ; ಭಯಾನಕ ಕ್ರಿಮಿನಲ್​​, ಶೂಟರ್​ ವಿಶಾಲ್ ಅಲಿಯಾಸ್ ಕಾಲು ಯಾರು?
Advertisment
  • ಭಾನುವಾರ ಬೆಳಗ್ಗೆ ಸಲ್ಮಾನ್ ಖಾನ್ ನಿವಾಸದ ಮೇಲೆ ಫೈರಿಂಗ್
  • ದ್ವಿಚಕ್ರ ಬೈಕ್​ನಲ್ಲಿ ಬಂದು ಸಲ್ಮಾನ್ ಖಾನ್ ಮನೆ ಮೇಲೆ ಗುಂಡಿನ ದಾಳಿ
  • ಗುಜರಾತ್​ನಲ್ಲಿ ಇಬ್ಬರು ಆರೋಪಿಗಳ ಬಂಧಿಸಿದ ಪೊಲೀಸರು

ಸಲ್ಮಾನ್ ಖಾನ್ ನಿವಾಸದ ಮೇಲೆ ಗುಂಡಿನ ದಾಳಿ ನಡೆಸಿದ ಪ್ರಕರಣದ ತನಿಖೆಯನ್ನು ಮುಂಬೈ ಪೊಲೀಸರು ತೀವ್ರಗೊಳಿಸಿದ್ದಾರೆ. ಗುಜರಾತ್​ನಲ್ಲಿ ಇಬ್ಬರನ್ನು ಬಂಧಿಸಿ, ಮುಂಬೈಗೆ ಕರೆದುಕೊಂಡು ಬಂದಿದ್ದಾರೆ. ವಿಕ್ಕಿ ಗುಪ್ತ (24), ಸಾಗರ್ ಪಾಲ್ (21) ಬಂಧಿತ ಆರೋಪಿಗಳು. ಸದ್ಯ ಇಬ್ಬರನ್ನು ತೀವ್ರ ತನಿಖೆಗೆ ಒಳಪಡಿಸಲಾಗಿದ್ದು, ಲಾರೆನ್ಸ್​ ಬಿಷ್ಣೋಯ್ ಗ್ಯಾಂಗ್​ ಜೊತೆ ಸಂಪರ್ಕದಲ್ಲಿರೋದು ದೃಢವಾಗಿದೆ.

Advertisment

ಇದನ್ನೂ ಓದಿ:ಆರ್​ಸಿಬಿಗೆ ಬಿಗ್ ಶಾಕ್; 2024ರ ಟೂರ್ನಿಯಿಂದಲೇ ಬ್ರೇಕ್ ತೆಗೆದುಕೊಂಡ ಸ್ಟಾರ್​​ ಆಲ್​​ರೌಂಡರ್​..!

ಇನ್ನು, ಗುಂಡಿನ ದಾಳಿಗೆ ಸಂಬಂಧಿಸಿದಂತೆ ಸಿಸಿಟಿವಿಯಲ್ಲಿ ಪತ್ತೆಯಾದ ವಿಡಿಯೋ ಪರಿಶೀಲನೆ ವೇಳೆ ವಿಶಾಲ್ ಅಲಿಯಾಸ್ ಕಾಲು ಕೂಡ ಇದರಲ್ಲಿ ಭಾಗಿಯಾಗಿದ್ದಾನೆ ಎಂಬ ಅನುಮಾನ ಮುಂಬೈ ಪೊಲೀಸರನ್ನು ಕಾಡಿದೆ. ಇನ್ನು ವಿಶಾಲ್ ಅಲಿಯಾಸ್ ಕಾಲು ಯಾರು ಅನ್ನೋ ಮಾಹಿತಿ ಇಲ್ಲಿದೆ.

ಮೊದಲ ಬಾರಿಗೆ ಕಳ್ಳತನ ಪ್ರಕರಣದಲ್ಲಿ ಕಾಲು ಜೈಲು ಸೇರಿದ್ದ. ಮೋಟಾರ್ ಸೈಕಲ್ ಕಳ್ಳತನ ಪ್ರಕರಣದಲ್ಲಿ ಮೊದಲ ಬಾರಿಗೆ ವಿಶಾಲ್​ ಜೈಲು ಸೇರಿದ್ದ. 2020ರಲ್ಲಿ ಆತನನ್ನು ಬಂಧಿಸಿ ತಿಹಾರ್ ಜೈಲಿಗೆ ಕಳುಹಿಸಲಾಗಿತ್ತು. ವರದಿಗಳ ಪ್ರಕಾರ ಈತನಿಗೂ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್​​ ಜೊತೆ ಲಿಂಕ್ ಇದೆ.

Advertisment

ಇದನ್ನೂ ಓದಿ:ಸಲ್ಮಾನ್ ಖಾನ್ ಮನೆ ಮೇಲೆ ಗುಂಡಿನ ದಾಳಿ; ನಟನ ಕೊಲೆ ಮಾಡಲು ಬಂದವರು ಅಂತಿಂಥ ಜನ ಅಲ್ಲ..!

publive-image

ವಿಶಾಲ್, ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್​​ನ ಸದಸ್ಯನಾಗಿದ್ದು, ದರೋಡೆಕೋರರನ ಸಹಚರ ಎಂಬ ವರದಿ ಇದೆ. ರೋಹಿತ್ ಗೋದಾರ ಜೊತೆ ಸೇರಿ ಗುರುಗಾಂವ್ ಮೂಲದ ಬುಕ್ಕಿ ಸಚಿನ್ ಹತ್ಯೆ ಮಾಡಿರುವ ಆರೋಪ ಈತನ ಮೇಲಿದೆ. ಇನ್ನು ರೋಹಿತ್ ಗೋದಾರ ಯಾರು ಎಂದು ನೋಡೋದಾದ್ರೆ, ಕುಖ್ಯಾತ ದರೋಡೆಕೋರ, ಲಾರೆನ್ಸ್ ಸಹೋದರ ಅನ್ಮೋಲ್ ಮತ್ತು ಗೋಲ್ಡಿ ಬ್ರಾರ್​​ ಜೊತೆ ನಿಕಟ ಸಂಪರ್ಕದಲ್ಲಿ ಇದ್ದಾನೆ.

ಇದನ್ನೂ ಓದಿ:ಅಯ್ಯೋ ಪಾಪ.. 25 ದಿನಗಳಿಂದ ಅಮ್ಮನಿಗಾಗಿ ದುಃಖಿಸಿ, ದುಃಖಿಸಿ ಪ್ರಾಣಬಿಟ್ಟ ಮರಿಯಾನೆ

Advertisment

ವಿಶಾಲ್ 2023 ರಿಂದ ಕ್ರಿಮಿನಲ್ ಚಟುವಟಿಕೆ ಕೇಸ್​ನಲ್ಲಿ ದರೋಡೆ, ಶಸ್ತ್ರಾಸ್ತ್ರ ಬಳಕೆ, ಕಳ್ಳತನ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದಾನೆ. ಮೊದ ಮೊದಲು ಕಳ್ಳತನ ಪ್ರಕರಣದಲ್ಲಿ ಬಾಗಿಯಾಗುತ್ತಿದ್ದ ಈತ, ಇದೀಗ ಕುಖ್ಯಾತ ದರೋಡೆಕೋರನಾಗುತ್ತಿದ್ದಾನೆ. ತಿಹಾರ್ ಜೈಲಿನಲ್ಲಿದ್ದಾಗ ವಿಶಾಲ್​ಗೆ ಗೋದಾರ ಗ್ಯಾಂಗ್​ನ ಸಂಪರ್ಕ ಆಗಿದೆ. ಅಲ್ಲಿಯೇ ಈತ, ದರೋಡೆಕೋರರ ಸದಸ್ಯನಾಗಲು ಒಪ್ಪಿಕೊಂಡಿದ್ದ ಎಂದು ತಿಳಿದುಬಂದಿದೆ.

ಇದನ್ನೂ ಓದಿ:ಯುವಕನಿಂದ ನಿರಂತರ ಕಿರುಕುಳ; ನೊಂದು ವಿಷ ಸೇವಿಸಿ ಪ್ರಾಣಬಿಟ್ಟ ಬಾಲಕಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment