/newsfirstlive-kannada/media/post_attachments/wp-content/uploads/2024/10/SALMAN-KHAN-SIDDAQUE-2-1.jpg)
NCP ನಾಯಕ ಬಾಬಾ ಸಿದ್ದಿಕಿ ಹತ್ಯೆಯು ದೇಶದಲ್ಲಿ ಆತಂಕ ಸೃಷ್ಟಿಸಿದೆ. ರಾಜಕೀಯ ವಲಯದಿಂದ ಬಾಲಿವುಡ್ ಇಂಡಸ್ಟ್ರಿಯವರೆಗೂ ಎಲ್ಲರೂ ಗಾಬರಿಯಾಗಿದ್ದಾರೆ. ಬಾಬಾ ಸಿದ್ದಿಕಿ ಅವರ ಆತ್ಮೀಯ ಗೆಳೆಯನೆಂದು ಪರಿಗಣಿಸಲ್ಪಟ್ಟಿರುವ ನಟ ಸಲ್ಮಾನ್ ಖಾನ್ ಕೂಡ ಶಾಕ್ ಆಗಿದ್ದಾರೆ. ಅಕ್ಟೋಬರ್ 12 ರಂದು, ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಬಾಬಾನನ್ನು ಗುಂಡಿಕ್ಕಿ ಕೊಂದಿತು. ಅಪಾಯದ ಹಿನ್ನೆಲೆಯಲ್ಲಿ ಸಲ್ಮಾನ್ ಖಾನ್ಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ.
ವರದಿಗಳ ಪ್ರಕಾರ.. ಸಲ್ಮಾನ್ ಖಾನ್ ಅವರ ಗ್ಯಾಲಕ್ಸಿ ಅಪಾರ್ಟ್‌ಮೆಂಟ್ ಸುತ್ತಮುತ್ತಲಿನ ಪ್ರದೇಶವು ಈಗ ನಿರ್ಜನವಾಗಿದೆ. ಅಲ್ಲಿ ಜನರು ಸೆಲ್ಫಿ ಅಥವಾ ವೀಡಿಯೋ ತೆಗೆದುಕೊಳ್ಳಲು ಕೂಡ ಅವಕಾಶ ಇಲ್ಲ. ಸಲ್ಮಾನ್‌ಗೆ Y+ ಭದ್ರತೆ ನವೀಕರಿಸಲಾಗಿದೆ.
ಇದನ್ನೂ ಓದಿ:ಸಲ್ಮಾನ್ ಖಾನನ್ನು ಕೊಲ್ಲುವುದೇ ಲಾರೆನ್ಸ್ ಬಿಷ್ಣೋಯ್ ಗುರಿ! ಖ್ಯಾತ ನಿರ್ದೇಶಕ ಹೀಗಂದಿದ್ಯಾಕೆ?
ಹೇಗಿದೆ ಭದ್ರತೆ..?
- ಗ್ಯಾಲಕ್ಸಿ ಅಪಾರ್ಟ್‌ಮೆಂಟ್ ಬಳಿ 60 ಪೊಲೀಸರ ನಿಯೋಜನೆ
- 24 ಗಂಟೆಗಳ ಕಾಲ ಸಲ್ಮಾನ್ ಖಾನ್ ನಿವಾಸದ ಸುತ್ತುಮುತ್ತ ನಿಗಾ
- ಅನುಮಾನಾಸ್ಪದ ವ್ಯಕ್ತಿಗಳು, ಘಟನೆಗಳ ಬಗ್ಗೆ ಹದ್ದಿನ ಕಣ್ಣು
- AI ಹೊಂದಿರುವ ಹೆಚ್ಚಿನ ರೆಸ್ಯುಲೇಷನ್ ಕ್ಯಾಮೆರಾ ಅಳವಡಿಕೆ
- ವ್ಯಕ್ತಿ ಎಷ್ಟೇ ದೂರದಲ್ಲಿದ್ದರೂ ಆತನ ಮುಖವನ್ನು ಸೆರೆ ಹಿಡಿಯತ್ತದೆ
- ಮುಖ ಗುರುತಿಸುವ ವಿಶಿಷ್ಟ ತಂತ್ರಜ್ಞಾನ ಈ ಕ್ಯಾಮೆರಾದಲ್ಲಿದೆ
- ಕ್ಯಾಮೆರಾ ಯಾರನ್ನಾದರೂ ಮೂರು ಬಾರಿ ಸೆರೆ ಹಿಡಿದರೆ, ಕೂಡಲೇ ಸಂದೇಶ
- ತನಿಖಾಧಿಕಾರಿಗಳಿಗೆ ಎಚ್ಚರಿಕೆ ಸಂದೇಶವನ್ನು ಕಳುಹಿಸುತ್ತದೆ
- ಅಂತಹ ಸಂದರ್ಭದಲ್ಲಿ ಆ ವ್ಯಕ್ತಿಯ ವಿಚಾರಣೆಯನ್ನು ಪೊಲೀಸರು ಮಾಡಲಿದ್ದಾರೆ
- ಈ ಕ್ಯಾಮೆರಾಗಳು 24 ಗಂಟೆಗಳ ಕಾಲ ನಿರಂತರವಾಗಿ ಕೆಲಸ ಮಾಡ್ತಿವೆ
- ಸಲ್ಮಾನ್ ಖಾನ್ ಮನೆಯ ಹೊರಗಿನ ಪ್ರದೇಶ ಪೊಲೀಸ್ ಕೋಟೆಯಂತೆ ಕಾಣ್ತಿದೆ
- ಕಟ್ಟಡದ ಹೊರಗೆ ನಾಲ್ಕು ಪ್ರತ್ಯೇಕ ಚೆಕ್ ಪೋಸ್ಟ್ಗಳನ್ನು ನಿರ್ಮಾಣ ಮಾಡಲಾಗಿದೆ
- ಆರು ಮಂದಿ ಸಮವಸ್ತ್ರಧಾರಿ ಪೊಲೀಸರು ಚೆಕ್ ಪೋಸ್ಟ್ನಲ್ಲಿ ಇರುತ್ತಾರೆ
- ಆ ಸ್ಥಳದಲ್ಲಿ ಒಟ್ಟು ಮೂರು ಪೊಲೀಸ್ ವ್ಯಾನ್ ನಿಂತಿರುತ್ತವೆ
- ಇವರು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಆಗಾಗ ಮಾಹಿತಿ ನೀಡ್ತಾ ಇದ್ದಾರೆ
- ಕಟ್ಟಡಕ್ಕೆ ಬರುವ ಪ್ರತಿಯೊಬ್ಬರ ವ್ಯಕ್ತಿಯ ದಾಖಲೆಗಳ ಪರಿಶೀಲನೆ
- ಗುರುತಿನ ದಾಖಲೆ ಇಲ್ಲದ ವ್ಯಕ್ತಿಗಳಿಗೆ ಪ್ರವೇಶ ಇಲ್ಲ, ಅಭಿಮಾನಿಗಳಿಗೂ ಇಲ್ಲ ಅವಕಾಶ
ಇದನ್ನೂ ಓದಿ:ಬಾಬಾ ಸಿದ್ದಿಕಿ ಕೇಸ್ ಬೆನ್ನಲ್ಲೇ ಸಲ್ಮಾನ್ ಖಾನ್ ನಿವಾಸಕ್ಕೆ ಭಾರೀ ಭದ್ರತೆ; ಏನಿದು ಲಿಂಕ್..?
ವೈ-ಪ್ಲಸ್ ಸೆಕ್ಯೂರಿಟಿ
- ವೈ ಪ್ಲಸ್ ವಿಭಾಗದಲ್ಲಿ 10 ಪೊಲೀಸರು ಒಳಗೊಂಡಿದ್ದಾರೆ
- ಇವರಲ್ಲಿ ಐವರು ಟ್ರೈನಿಂಗ್ನಲ್ಲಿರುವ ಕಮಾಂಡೋಗಳು
- ಕೆಲವು ಪೊಲೀಸರು ಸಲ್ಮಾನ್ ಖಾನ್ ಕಾರಿನಲ್ಲಿ ಪ್ರಯಾಣ
- ಕೆಲವರು ಸಲ್ಮಾನ್ ಖಾನ್ ಜೊತೆ ಪೊಲೀಸ್ ಕಾರಿನಲ್ಲಿ ಪ್ರಯಾಣ
- ಸಲ್ಮಾನ್ ಖಾನ್ ಬೇರೆ ಸ್ಥಳಗಳಿಗೆ ಹೋದರೆ ಅಲ್ಲಿನ ಪೊಲೀಸರಿಗೆ ಮೊದಲೇ ಮಾಹಿತಿ
- ಅಲ್ಲಿನ ಪೊಲೀಸರು ಮೊದಲೇ ಹೋಗಿ ಭದ್ರತೆಯನ್ನು ಪರಿಶೀಲಿಸಿಕೊಂಡು ಬರ್ತಾರೆ
- ಸಲ್ಮಾನ್ ಖಾನ್ ಮನೆಯಲ್ಲಿದ್ದಾಗ ಈ ಭದ್ರತಾ ಪಡೆ ಮನೆಯನ್ನು ಸುತ್ತುವರಿಯುತ್ತದೆ
- ಪೊಲೀಸರ ಹೊರತಾಗಿಯೂ ಸಲ್ಮಾನ್ ಖಾನ್ ತಮ್ಮದೇಯಾದ ಭದ್ರತಾ ಪಡೆ ಹೊಂದಿದ್ದಾರೆ
- ಹೊರಗೆ ಹೋದಾಗಲೆಲ್ಲ ಅಂಗರಕ್ಷಕ ಶೇರ್ ನೇತೃತ್ವದ ತಂಡ ಭದ್ರತೆ ನೀಡ್ತದೆ
- ಶೇರ್ ಜೊತೆ ಐದರಿಂದ 6 ಮಂದಿ ಅಂಗ ರಕ್ಷಕರು ಇರ್ತಾರೆ
ಸಲ್ಮಾನ್ ಖಾನ್ ಮೇಲೆ ರೊಚ್ಚಿಗೆದ್ದ ಸ್ಥಳೀಯರು..?
ಹೆಚ್ಚಿನ ಭದ್ರತೆಯಿಂದ ಅಲ್ಲಿನ ಸ್ಥಳೀಯರಿಗೆ ಭಾರೀ ತೊಂದರೆ ಆಗ್ತಿದೆ. ಸಲ್ಮಾನ್ ಖಾನ್ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದು, ಸಮಸ್ಯೆಗೆ ಪರಿಹಾರ ನೀಡಿ ಎಂದು ಒತ್ತಾಯಿಸಿದ್ದಾರೆ. ಕಳೆದ ಹಲವು ದಿನಗಳಿಂದ ಸಲ್ಮಾನ್‌ಗೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ಬೆದರಿಕೆಗಳು ಬರುತ್ತಿದೆ. ನಂತರ ಅವರಿಗೆ ಈ ಭದ್ರತೆಯನ್ನು ಏರ್ಪಡಿಸಲಾಗಿದೆ.
ಇದನ್ನೂ ಓದಿ: ಸಲ್ಮಾನ್ ಹಾಗೂ ಶಾರುಖ್ ನಡುವೆ ಸೇತುವೆಯಂತಿದ್ದ ಬಾಬಾ ಸಿದ್ಧಕಿ; ಇಫ್ತಾರ್ಕೂಟದಲ್ಲಿಯೇ ಆಗುತ್ತಿತ್ತು ಸಂಧಾನ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ