newsfirstkannada.com

×

ಸೌಂದರ್ಯ ರಾಶಿ ಸಮಂತಾ ಚರ್ಮದ ಕಾಂತಿಯ ಗುಟ್ಟೇನು? ತ್ವಚೆ ಆರೋಗ್ಯಕ್ಕೆ ಟಿಪ್ಸ್​ ಕೊಟ್ಟಿರುವ ಟಾಲಿವುಡ್ ನಾಯಕಿ

Share :

Published September 20, 2024 at 5:05pm

Update September 20, 2024 at 5:28pm

    ಮಿರಿಮಿರಿ ಮಿಂಚುವ ಸಮಂತಾ ತ್ವಚೆಯ ಸೌಂದರ್ಯದ ಗುಟ್ಟೇನು

    ಅಭಿಮಾನಿಗಳಿಗೆ ಚರ್ಮದ ಕಾಂತಿಯ ಬಗ್ಗೆ ಟಿಪ್ಸ್ ಕೊಟ್ಟ ಸಮಂತಾ

    ಸಮಂತಾ ಆಗಾಗ ತೆಗೆದುಕೊಳ್ಳುವ ಚಿಕಿತ್ಸೆಗಳು ಯಾವುವು ಗೊತ್ತಾ

ಸೌಂದರ್ಯಕ್ಕೆ ಇನ್ನೊಂದು ಹೆಸರೇ ಇವರೇನಾ ಎಂಬಂತೆ ಸದಾ ಕಂಗೊಳಿಸುವ ರೂಪಸಿ ಖ್ಯಾತ ನಟಿ ಸಮಂತಾ. ಬೆಳದಿಂಗಳೊಂದು ಹೆಣ್ಣಿನ ರೂಪ ಪಡೆದಿದೆಯೇನೋ ಅಂತ ರತಿರೂಪವೂ ನಾಚುವಂತ ಚೆಲುವು. ಕಡೆದಿಟ್ಟ ಶಿಲಾಬಾಲಿಕೆಯಂತಹ ನಿಲುವು. ಎಲ್ಲ ಹುಡುಗಿಯರಿಗೂ ಕೂಡ ಸಮಂತಾಳ ರೀತಿಯೇ ಫಳಫಳ ಹೊಳೆಯುವ ತ್ವಚೆ ತಮ್ಮದಾಬೇಕು ಎಂಬ ಆಸೆಹುಟ್ಟಿಸುವಂತ ಮಿನುಗುವ ತ್ವಚೆ ಸಮಂತಾರದ್ದು. ಸಮಂತಾರಿಂದ ಬ್ಯೂಟಿ ಟಿಪ್ಸ್ ಪಡೆಯೋಕೆ. ಅವರ ಸೌಂದರ್ಯ ರಾಶಿಯ ಹಿಂದಿನ ಗುಟ್ಟೇನು ಅಂತ ತಿಳಿದುಕೊಳ್ಳುವುದಕ್ಕೆ ಯಾರಿಗೆ ತಾನೆ ಆಸೆ ಇರೋದಿಲ್ಲ ಹೇಳಿ? ಈಗ ತ್ವಚೆಯನ್ನು ಸದಾ ಫಳಫಳ ಹೊಳೆಯುವಂತೆ ಹೇಗೆ ನೋಡಿಕೊಳ್ಳಬೇಕು ಅಂತ ಸಮಂತಾ ತಮ್ಮದೇ ಇನ್​ಸ್ಟಾಗ್ರಾಮ್​​ನಲ್ಲಿ ಒಂದು ಟಿಪ್ಸ್ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ನಿಮ್ಮ ಮುಖದ ಮೇಲೆ ಪದೇ ಪದೇ ಮೊಡವೆ ಹುಟ್ಟಿಕೊಳ್ಳಲು ಇದೇ ಮುಖ್ಯ ಕಾರಣ ನೋಡಿ.. ಏನದು?
ಸಮಂತಾ ತಮ್ಮ ತ್ವಚೆಯನ್ನು ಹೇಗೆ ಕಾಪಾಡಿಕೊಳ್ಳುತ್ತಾರೆ. ಅಪಾಯಕಾರಿಯಲ್ಲದ ಮಾರ್ಗದಲ್ಲಿ ಹೇಗೆ ತ್ವಚೆಯನ್ನು ಹೊಳೆಯುವಂತೆ ಇಟ್ಟುಕೊಳ್ಳುತ್ತಾರೆ ಎಂಬುದನ್ನು ಸಮಂತಾ ಹೇಳಿದ್ದಾರೆ. ಅವರು ತೆಗೆದುಕೊಳ್ಳುವ ಚಿಕಿತ್ಸೆಗಳು ಯಾವವು ಎಂಬುದನ್ನು ಕೂಡ ವಿವರಿಸಿದ್ದಾರೆ

View this post on Instagram

A post shared by Samantha (@samantharuthprabhuoffl)

ಪಿಕೋ ಲೇಸರ್: ಸಮಂತಾ ತ್ವಚೆಯ ಮೇಲಿನ ಬ್ರೌನ್ ಸ್ಪಾಟ್​ಗಳನ್ನು ತೊಡೆದು ಹಾಕಲು ಆಗಾಗ ಪಿಕೋ ಲೇಸರ್ ಚಿಕಿತ್ಸೆಯನ್ನು ತೆಗೆದುಕೊಳ್ಳುತ್ತಾರೆ ಇದರ ಸಹಾಯದಿಂದ ಮುಖದ ಮೇಲಿರುವ ಕಂದು ಬಣ್ಣದ ಸ್ಪಾಟ್​ಗಳನ್ನು ಸರಳವಾಗಿ ಅತ್ಯಂತ ಸುಲಭವಾಗಿ ತೆಗೆಯಬಹುದು ಎಂದು ಅವರು ಹೇಳುತ್ತಾರೆ.

ಇದನ್ನೂ ಓದಿ: ನಿಮಗಿದು ಗೊತ್ತಾ..? ಮಹಿಳೆಯರು ಏಕೆ ಮೂಗು ಚುಚ್ಚಿಸಿಕೊಳ್ಳುತ್ತಾರೆ; ಇದರ ಹಿಂದಿನ ಲಾಭವೇನು?

ರೆಡ್​ ಲೈಟ್ ಥೆರಪಿ: ರೆಡ್​ ಲೈಟ್ ಥೆರಪಿಯೂ ಕೂಡ ಒಂದು ತ್ವಚೆಯ ಮೇಲಿ ನೀರಿಗೆಗಳನ್ನು ತಡೆಯುವಲ್ಲಿ ಪ್ರಮುಖವಾದ ಚಿಕಿತ್ಸೆ ಈ ಚಿಕಿತ್ಸೆಯ ಮೂಲಕ ನಮ್ಮ ಚರ್ಮದ ಕಾಂತಿಯನ್ನು ಮತ್ತಷ್ಟು ವೃದ್ಧಿಸಬಹುದು. ರೆಡ್​​ಲೈಟ್ ಥೆರಪಿ ಅಥವಾ ಆರ್​ಎಲ್​ಟಿ ಥೆರಪಿಯನ್ನು ಕೂಡ ಸಮಂತಾ ಆಗಾಗ ತೆಗೆದುಕೊಳ್ಳುತ್ತಾರೆ.

ಈ ರೀತಿಯಾಗಿ ಹಲವು ಚಿಕಿತ್ಸೆಗಳನ್ನು ಸಮಂತಾ ತಾವು ತೆಗೆದುಕೊಳ್ಳುತ್ತಿರುವುದರ ಬಗ್ಗೆ ಇನ್​​ಸ್ಟಾದಲ್ಲಿ ಬರೆದುಕೊಂಡಿದ್ದಾರೆ. ಇಷ್ಟು ಮಾತ್ರವಲ್ಲ. ನನ್ನ ತ್ವಚೆಯ ಬಗ್ಗೆ ನಾನು ಅತ್ಯಂತ ಕಾಳಜಿವಹಿಸುತ್ತೇನೆ ಅದನ್ನು ಟೆಕನ್ ಫಾರ್ ಗ್ರ್ಯಾಂಟೆಂಡ್ ಅನ್ನುವಂತೆ ನಾನು ನೋಡಿಕೊಳ್ಳುವುದಿಲ್ಲ. ಚರ್ಮದ ಆರೋಗ್ಯ ಕೇವಲ ಸೌಂದರ್ಯಕ್ಕೆ ಸಂಬಂಧಿಸಿದ್ದಲ್ಲ. ಅದು ಬದುಕಿನ ಒಂದು ಭಾಗ ಕೂಡ ಹೌದು ಎಂದು ನಾನು ನಂಬಿದ್ದೇನೆ ಎಂದು ಸಮಂತಾ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸೌಂದರ್ಯ ರಾಶಿ ಸಮಂತಾ ಚರ್ಮದ ಕಾಂತಿಯ ಗುಟ್ಟೇನು? ತ್ವಚೆ ಆರೋಗ್ಯಕ್ಕೆ ಟಿಪ್ಸ್​ ಕೊಟ್ಟಿರುವ ಟಾಲಿವುಡ್ ನಾಯಕಿ

https://newsfirstlive.com/wp-content/uploads/2024/09/SAMANTHA.jpg

Load More