Advertisment

ಸಮೋಸಾ ತಿಂದ ಅನಾಥಾಶ್ರಮದ ಮೂವರು ವಿದ್ಯಾರ್ಥಿಗಳು ಸಾವು.. ಅಸ್ವಸ್ಥಗೊಂಡ ಮಕ್ಕಳು ಆಸ್ಪತ್ರೆಗೆ ದಾಖಲು

author-image
Bheemappa
Updated On
ಸಮೋಸಾ ತಿಂದ ಅನಾಥಾಶ್ರಮದ ಮೂವರು ವಿದ್ಯಾರ್ಥಿಗಳು ಸಾವು.. ಅಸ್ವಸ್ಥಗೊಂಡ ಮಕ್ಕಳು ಆಸ್ಪತ್ರೆಗೆ ದಾಖಲು
Advertisment
  • ಮಕ್ಕಳ ಸಾವಿನಿಂದ ತೀವ್ರ ದುಃಖಿತರಾಗಿರುವ ಗೃಹ ಸಚಿವೆ
  • ಸಮೋಸಾ ವಿಷವಾಗಲು ಕಾರಣದ ಬಗ್ಗೆ ಸಿಬ್ಬಂದಿಯಿಂದ ತನಿಖೆ
  • ಈ ಮಾಹಿತಿ ತಿಳಿದು ಆಸ್ಪತ್ರೆಗೆ ದೌಡಾಯಿಸಿದ ಜಿಲ್ಲಾಧಿಕಾರಿ

ಹೈದರಾಬಾದ್: ಸಮೋಸಾ ತಿಂದು ಮೂವರು ವಿದ್ಯಾರ್ಥಿಗಳು ಮೃತಪಟ್ಟಿದ್ದು 24 ವಿದ್ಯಾರ್ಥಿಗಳು ತೀವ್ರ ಅಸ್ವಸ್ಥರಾಗಿರುವ ಘಟನೆ ಆಂಧ್ರಪ್ರದೇಶದ ಅನಕಪಲ್ಲಿ ಜಿಲ್ಲೆಯ ಕೈಲಾಸಪಟ್ಟಣದ ಅನಾಥಾಶ್ರಮದಲ್ಲಿ ಈ ಘಟನೆ ನಡೆದಿದೆ.

Advertisment

ಇದನ್ನೂ ಓದಿ:ವಿನೇಶ್ ಫೋಗಟ್​ಗೆ ಗೋಲ್ಡ್​ ಮೆಡಲ್​.. ಸಾವಿರ ಪದಕಗಳಿಗೆ ಇದೊಂದೇ ಸಮವೆಂದ ಕುಸ್ತಿಪಟು, ಭಾವುಕ

ಕೈಲಾಸಪಟ್ಟಣದ ಅನಾಥಶ್ರಮದಲ್ಲಿ ಎಂದಿನಂತೆ ಮಕ್ಕಳಿಗೆ ತಿಂಡಿಯನ್ನು ನೀಡಲಾಗುತ್ತಿತ್ತು. ತಿಂಡಿ ಜೊತೆ ಸಮೋಸಾಗಳನ್ನು ನೀಡಲಾಗಿದೆ. ಆದರೆ ಸಮೋಸಾ ತಿಂದಂತ ಕೆಲವೇ ಗಂಟೆಗಳಲ್ಲಿ ಫುಡ್​ ಪಾಯಿಸನ್​ನಿಂದ ವಿದ್ಯಾರ್ಥಿಗಳಲ್ಲಿ ವಾಂತಿಯಾಗಲು ಪ್ರಾರಂಭಿಸಿ ತೀವ್ರ ಅಸ್ವಸ್ಥರಾಗಿದ್ದಾರೆ. ಒಟ್ಟು 27 ವಿದ್ಯಾರ್ಥಿಗಳು ಅಸ್ವಸ್ಥರಾದ ಕಾರಣ ತಕ್ಷಣ ಅವರನ್ನು ನರಸೀಪಟ್ಟಣಂ, ಅನಕಪಲ್ಲಿ ಹಾಗೂ ವಿಶಾಖಪಟ್ಟಣಂನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಸಮೋಸಾ ವಿಷಕಾರಿಯಾಗಿದ್ದರಿಂದ ಮೂವರು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಐಫೋನ್​ಗಾಗಿ 3 ದಿನ ಮಗ ಉಪವಾಸ.. ಮಿಡಿದ ಮಾತೃ ಹೃದಯ, ಯುವಕನ ಹಠಕ್ಕೆ ಭಾರೀ ಆಕ್ರೋಶ

Advertisment

publive-image

ಮಾಹಿತಿ ತಿಳಿಯುತ್ತಿದ್ದಂತೆ ಅನಕಪಲ್ಲಿ ಜಿಲ್ಲಾಧಿಕಾರಿ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರೊಂದಿಗೆ ಚರ್ಚೆ ನಡೆಸಿದ್ದಾರೆ. ಅಲ್ಲದೇ ಉಳಿದ ವಿದ್ಯಾರ್ಥಿಗಳ ಆರೋಗ್ಯವನ್ನು ವಿಚಾರಿಸಿದ್ದಾರೆ. ಇನ್ನು ಆಹಾರ ವಿಷವಾಗಲು ಕಾರಣವೇನು ಎಂಬುದನ್ನು ಸಂಪೂರ್ಣವಾಗಿ ತನಿಖೆ ನಡೆಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ ಎನ್ನಲಾಗಿದೆ. ಮಕ್ಕಳು ಸಾವನ್ನಪ್ಪಿದ್ದಕ್ಕೆ ಗೃಹ ಸಚಿವೆ ಅನಿತಾ ಅವರು ತೀವ್ರ ದುಃಖಿತರಾಗಿದ್ದು ಉಳಿದ ವಿದ್ಯಾರ್ಥಿಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಹೇಳಿದ್ದಾರೆ ಎಂದು ತಿಳಿದು ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment