/newsfirstlive-kannada/media/post_attachments/wp-content/uploads/2024/10/Samsung-F55.jpg)
ದೀಪಾವಳಿ ಹತ್ತಿರ ಬರುತ್ತಿದೆ ಈ ಸಮಯದಲ್ಲಿ ಇ-ಕಾಮರ್ಸ್ ಮಳಿಗೆಯಾದ ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ ಸ್ಮಾರ್ಟ್ಫೋನ್ಗಳ ಮೇಲೆ ವಿಶೇಷವಾದ ಕೊಡುಗೆ ನೀಡುತ್ತಿದೆ. ಅದರಲ್ಲೂ ಸ್ಯಾಮ್ಸಂಗ್ ಗ್ರಾಹಕರಿಗಾಗಿ ಸ್ಯಾಮ್ಸಂಗ್ ಗ್ಯಾಲಕ್ಸಿ F55 5G ಮೇಲೆ ಗಮನಾರ್ಹವಾಗಿ ಬೆಲೆ ಇಳಿಕೆ ಮಾಡಿದೆ.
ಸ್ಯಾಮ್ಸಂಗ್ ಗ್ಯಾಲಕ್ಸಿ F55 5G ಸ್ಮಾರ್ಟ್ಫೋನ್ ಮೂಲ ಬೆಲೆ 30 ಸಾವಿರ ರೂಪಾಯಿಯಾಗಿದೆ. ದೀಪಾವಳಿ ಸೀಸನ್ನಲ್ಲಿ ಇದರ ಮೇಲಿನ ಬೆಲೆಯನ್ನು ಗಣನೀಯವಾಗಿ ಇಳಿಕೆ ಮಾಡಿದೆ. ಅಂದರೆ 8,700 ರೂಪಾಯಿಯಷ್ಟು ಬೆಲೆ ಇಳಿಕೆ ಮಾಡಿ ಮಾರಾಟ ಮಾಡುತ್ತಿದೆ.
ಅಮೆಜಾನ್ನಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ F55 5G ಸ್ಮಾರ್ಟ್ಫೋನ್ 129GB ರೂಪಾಂತರವನ್ನು 28,999 ರೂಪಾಯಿಗೆ ಮಾರಾಟ ಮಾಡುತ್ತಿದೆ. ಹಬ್ಬದ ಋತುವಿನಲ್ಲಿ 34 ಪ್ರತಿಶತದಷ್ಟು ಇದರ ಮೇಲೆ ರಿಯಾಯಿತಿ ನೀಡಿದೆ. ಹಾಗಾಗಿ 19,078 ರೂಪಾಯಿಗೆ ಸಿಗುತ್ತಿದೆ.
ಇದನ್ನೂ ಓದಿ: Ambrane Solar 10K: ಸೂರ್ಯನ ಬಿಸಿಲು ಸಾಕು.. ಒಂದು ಬಾರಿ ರೀಚಾರ್ಜ್ ಆದ್ರೆ 5 ದಿನ ಬರುತ್ತೆ ಈ ಪವರ್ ಬ್ಯಾಂಕ್!
ಅಮೆಜಾನ್ ಗ್ರಾಹಕರಿಕೆ ಬ್ಯಾಂಕ್ ಕೊಡುಗೆಯನ್ನು ನೀಡುತ್ತಿದೆ. ಜೊತೆಗೆ ವಿನಿಮಯ ಆಯ್ಕೆಯೂ ಇದೆ. ಆಯ್ದ ಕಾರ್ಡ್ ಬಳಕೆದಾರರು ಖರೀದಿ ಸಮಯದಲ್ಲಿ 1 ಸಾವಿರ ತ್ವರಿತ ರಿಯಾಯಿತಿ ಪಡೆಯಬಹುದಾಗಿದೆ. ಮಾತ್ರವಲ್ಲದೆ ಇಎಮ್ಐ ಆಯ್ಕೆಯೂ ಇದೆ. ಬರೀ 859 ರೂಪಾಯಿಗಳ ಮಾಸಿಕ ಆಯ್ಕೆಯನ್ನು ನೀಡುತ್ತಿದೆ. ಎಕ್ಸ್ಚೇಂಜ್ ಅವಕಾಶವನ್ನು ನೀಡಿದೆ. ಬೇರೆ ಸ್ಮಾರ್ಟ್ಫೋನ್ ಜೊತೆಗೆ ವಿನಿಯಮ ಮಾಡುವಾಗ 17 ಸಾವಿರ ರೂಪಾಯಿಯಷ್ಟು ಆಯ್ಕೆ ನೀಡಿದೆ.
ವಿಶೇಷತೆ
ಸ್ಯಾಮ್ಸಂಗ್ ಗ್ಯಾಲಕ್ಸಿ F55 5G ಸ್ಮಾರ್ಟ್ಫೋನ್ ಇದೇ ವರ್ಷ ಮೇ ತಿಂಗಳಿನಲ್ಲಿ ಬಿಡುಗಡೆಗೊಂಡಿತ್ತು. ಇದರಲ್ಲಿ ಪ್ಲಾಸ್ಟಿಕ್ ಫ್ರೇಮ್‌ನೊಂದಿಗೆ ಇಕೋ ಲೆದರ್ ಬ್ಯಾಕ್ ಫಿನಿಶ್ ನೀಡಲಾಗಿದೆ. 120Hz ರಿಫ್ರೆಶ್ ದರದೊಂದಿಗೆ 6.7-ಇಂಚಿನ ಸೂಪರ್ AMOLED ಡಿಸ್ಪ್ಲೇಯನ್ನು ಹೊಂದಿದೆ. ಇದು UI 6.1 ನೊಂದಿಗೆ Android 14 ನಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು Snapdragon 7 Gen 1 ಪ್ರೊಸೆಸರ್‌ನಿಂದ ಚಾಲಿತವಾಗಿದೆ.
ಇದನ್ನೂ ಓದಿ: Tissue Sarees: ಟಿಶ್ಯೂ ಸೀರೆಗಳ ಹಿಂದೆ ಬಿದ್ದ ಸ್ಟಾರ್ಸ್! ಬಣ್ಣದ ಲೋಕದಲ್ಲಿ ಇದಕ್ಕೆ ಭಾರೀ ಡಿಮ್ಯಾಂಡ್
ಸ್ಮಾರ್ಟ್ಫೋನ್ 12GB RAM ಅನ್ನು ಬೆಂಬಲಿಸುತ್ತದೆ ಮತ್ತು 256GB ವರೆಗೆ ಸಂಗ್ರಹಣೆಯನ್ನು ಹೊಂದಿದೆ. ತ್ರಿವಳಿ ಕ್ಯಾಮೆರಾ ಸೆಟಪ್ ಫೋಟೊಗ್ರಫಿಗಾಗಿ 50+8+2 ಮೆಗಾಪಿಕ್ಸೆಲ್ ಲೆನ್ಸ್‌ಗಳನ್ನು ಒಳಗೊಂಡಿದೆ, ಜೊತೆಗೆ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 50-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾ ನೀಡಲಾಗಿದೆ. ಇದು 45W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುವ ದೊಡ್ಡ 5000mAh ಬ್ಯಾಟರಿಯನ್ನು ಹೊಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ