ಟಿಶ್ಯೂ ಸೀರೆ ಎಲ್ಲಿಯದ್ದು? ಇದರ ಇತಿಹಾಸ ನಿಮಗೆ ಗೊತ್ತಾ?
ನಟಿಯರಿಗೆ ಟಿಶ್ಯೂ ಸೀರೆಯೆಂದರೆ ಯಾಕೆ ಅಷ್ಟು ಇಷ್ಟ
ಟಿಶ್ಯೂ ಸೀರೆ ತಯಾರಿಸುವುದು ಹೇಗೆ? ಯಾಕಷ್ಟು ಡಿಮ್ಯಾಂಡ್
ಸೀರೆಗಳಲ್ಲಿ ಹಲವು ವಿಧಗಳಿವೆ. ಭಾರತದ ಆಯಾಯ ಭಾಗಗಳಲ್ಲಿ ಸಂಸ್ಕೃತಿಯ ಭಾಗವಾಗಿ ಸೀರೆಗಳನ್ನು ಕಾಣಬಹುದು. ಮೈಸೂರು ಸಿಲ್ಕ್, ಕಾಂಚಿವರಂ, ಇಲಕಲ್ ಸೀರೆ ಹೀಗೆ ಹಲವು ವಿಧದ ಸಾರಿಗಳಿವೆ. ಪ್ರಸ್ತುತ ಸಮಾಜದಲ್ಲಿ ಹೊಸ ಹೊಸ ಸಾರಿಗಳು ಮಾರುಕಟ್ಟೆಗೆ ಬರುತ್ತಿವೆ. ಆದರೀಗ ಅದರ ಪೈಕಿ ‘ಟಿಶ್ಯೂ ಸೀರೆ’ ಜನಪ್ರಿಯವಾಗಿವೆ.
ಟಿಶ್ಯೂ ಸೀರೆ ಸದ್ಯ ಟ್ರೆಂಡಿಂಗ್ನಲ್ಲಿರುವ ಸಾರಿ. ಸಿನಿಮಾ ತಾರೆಯರೂ ಕೂಡ ಇದರ ಹಿಂದೆ ಬಿದ್ದಿದ್ದು, ಫ್ಯಾಷನ್ ಮೇಳಗಳಲ್ಲಿ ಇದನ್ನು ಧರಿಸಿ ಗಮನ ಸೆಳೆಯುತ್ತಿರುತ್ತಾರೆ. ಅಂದಹಾಗೆಯೇ, ಈ ಸೀರೆಯ ಇತಿಹಾಸ ಮತ್ತು ಕರಕುಶಲತೆಯ ಬಗ್ಗೆ ತಿಳಿಯೋಣ.
ಇದನ್ನೂ ಓದಿ: VIDEO: ಹೇರ್ ಕಲರ್ ಮಾಡಿಕೊಳ್ಳುವ ಬರದಲ್ಲಿ ಸಂಗೀತಾ ಶೃಂಗೇರಿ ಯಡವಟ್ಟು.. ಬಣ್ಣ ಬದಲಾಗಿ ಸಿಟ್ಟಿಗೆದ್ದ ಚಾರ್ಲಿ ನಟಿ
ಟಿಶ್ಯೂ ಸೀರೆ ಭಾರತೀಯ ಮೂಲದ್ದು ಎಂಬುದು ಹೆಮ್ಮೆಯ ವಿಚಾರ. ಇದಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಆದರೀಗ ಪ್ರಸ್ತುತ ಟ್ರೆಂಡಿಂಗ್ನಲ್ಲಿ ಕಾಣಿಸಿಕೊಂಡಿದೆ. ಟಿಶ್ಯೂ ಸೀರೆ ದಕ್ಷಿಣ ಏಷ್ಯಾದಾದ್ಯಂತ ಹಳೆಯ ಉಡುಪುಗಳಲ್ಲಿ ಒಂದಾಗಿ ಕಾಣಿಸಿದೆ.
ಸೀರೆ ಎಂದ ಪದ ಎಲ್ಲಿಂದ ಬಂತು?
ಸೀರೆ ಎಂದ ಪದ ಸಂಸ್ಕೃತದಿಂದ ಬಂದಿದೆ. ‘‘ಸತ್ತಿಕಾ’’ ಎಂಬ ಪದದಿಂದ ಇದು ಬಂದಿದೆ. ಶತಮಾನಗಳಿಂದ ಸೀರೆಯ ವಿನ್ಯಾಸ ಮತ್ತು ಫ್ಯಾಬ್ರಿಕ್, ಡ್ರಾಪಿಂಗ್ ಶೈಲಿ ವಿಕಸನಗೊಂಡಿದೆ.
ಟಿಶ್ಯೂ ಸೀರೆ ಹೇಗೆ ತಯಾರಿಸಲಾಗುತ್ತದೆ?
ಟಿಶ್ಯೂ ಸೀರೆಯನ್ನು ಹಗುರವಾದ ಬಟ್ಟೆಯಿಂದ ತಯಾರಿಸಲಾಗುತ್ತದೆ. ರೇಷ್ಮೆ ಅಥವಾ ರೇಷ್ಮೆ ಮಿಶ್ರಣದ ಬೇಸ್ ಬಳಸಿ ಮತ್ತು ಚಿನ್ನ ಅಥವಾ ಬೆಳ್ಳಿಯ ಬಣ್ಣದ ಲೋಹದ ಎಲೆಗಳಿಂದ ಇದನ್ನು ನೇಯಲಾಗುತ್ತದೆ. ಇದರಿಂದ ಸೀರೆ ಮೇಲ್ಮೈ ಹೊಳೆಯುತ್ತದೆ. ಮಿನುಗುವ ಕಾರಣಕ್ಕೆ ಇದು ಐಷಾರಾಮಿ ಸೀರೆಯಂತೆ ಕಾಣುತ್ತದೆ. ಮದುವೆ, ದೀಪಾವಳಿ ಹಬ್ಬದ ಸಂದರ್ಭದಲ್ಲಿ ಇದನ್ನು ಮಹಿಳೆಯರು ಬಳಸಲು ಮುಂದಾಗುತ್ತಾರೆ.
ಇದನ್ನೂ ಓದಿ: ವಿಷಸರ್ಪ ಕಚ್ಚಿ ಮೂವರು ಸಾ*ವು.. ಪುಂಗಿದಾಸನನ್ನು ಕರೆಸಿ ಹಾವು ಹಿಡಿಯಲು ಮುಂದಾದ ಅರಣ್ಯ ಇಲಾಖೆ
ಬನಾರಸ್ನಂತರ ಪ್ರದೇಶಗಳಲ್ಲಿ ಇಂತಹ ಟಿಶ್ಯೂ ಸೀರೆಗಳನ್ನು ತಯಾರಿಸುತ್ತಾರೆ. ಕುಶಲಕರ್ಮಿಗಳು ಸಾಂಪ್ರದಾಯಿಕ ಕೈಮಗ್ಗ ಬಳಸಿ ಸೀರೆಯನ್ನು ನೇಯುತ್ತಾರೆ.
ರೇಷ್ಮೆ ಸೀರೆಗಳಿಗೆ ಹೋಲಿಸಿದರೆ ಟಿಶ್ಯೂ ಸೀರೆ ತುಂಬಾ ಹಗುರವಾಗಿದೆ. ದಿನನಿತ್ಯ ಧರಿಸಲು ಆರಾಮದಾಯಕವಾಗಿದೆ. ಸದ್ಯ ಮಾರುಕಟ್ಟೆಯಲ್ಲಿ ಈ ಸೀರೆ ಯುವತಿಯರನ್ನು ಸೆಳೆದಿದೆ. ಫ್ಯಾಷನ್ ಲೋಕದಲ್ಲಿ ಈ ಸೀರೆ ಜನಪ್ರಿಯತೆ ಪಡೆಯುತ್ತಿದೆ. ಸಿನಿ ತಾರೆಯರಂತೂ ಟಿಶ್ಯೂ ಸೀರೆಯನ್ನು ಹೆಚ್ಚಾಗಿ ಧರಿಸುತ್ತಿದ್ದಾರೆ. ಸುಲಭವಾಗಿ ಧರಿಸಬಹುದಾದ ಮತ್ತು ಹೆಚ್ಚು ಸಮಯ ಧರಿಸಲು ಯೋಗ್ಯವಾಗಿದೆ. ಹೀಗಾಗಿ ಈ ಸೀರೆಗೆ ಡಿಮ್ಯಾಂಡ್ ಹೆಚ್ಚಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ