/newsfirstlive-kannada/media/post_attachments/wp-content/uploads/2024/06/darshan36.jpg)
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ ಹಾಗೂ ಮೂವರು ಆರೋಪಿಗಳಿಗೆ ಇಂದು 14 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿಗಳನ್ನ ಪೊಲೀಸರು ಇಂದು 24ನೇ ಎಸಿಎಂಎಂ ಕೋರ್ಟ್ಗೆ ಹಾಜರುಪಡಿಸಿದ್ದರು. ಈ ವೇಳೆ ಆರೋಪಿಗಳಿಗೆ ನ್ಯಾಯಾಧೀಶರು ಜುಲೈ 4ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿದ್ದಾರೆ.
ಇದನ್ನೂ ಓದಿ: ಬಂಧನದ ಬಳಿಕ ಸರಿಯಾಗಿ ಆಹಾರ ತಿನ್ನದ ದರ್ಶನ್.. ಇಳಿಕೆ ಕಂಡ ತೂಕ! ಸದ್ಯ ಎಷ್ಟು KG ಇದ್ದಾರೆ ಗೊತ್ತಾ?
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಬಂಧಿತ ಆರೋಪಿಗಳನ್ನು ಪೊಲೀಸರು ಮತ್ತೆ ಕಸ್ಟಡಿಗೆ ಪಡೆದುಕೊಳ್ಳುತ್ತಾರಾ ಅಥವಾ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುತ್ತಾರಾ ಎಂಬ ಕುತೂಹಲ ಮೂಡಿತ್ತು. ಈ ಕೇಸ್ ಸಂಬಂಧ ನ್ಯಾಯಾಧೀಶರ ಮುಂದೆ ಸರ್ಕಾರದ ಪರ ಎಸ್ಪಿಪಿ ಪ್ರಸನ್ನ ಕುಮಾರ್ ಅವರು ಆರೋಪಿಗಳನ್ನು ಜೆಸಿಗೆ ನೀಡಲು ಮನವಿ ಮಾಡಿದ್ದರು.
ಪೊಲೀಸರು ಕೃತ್ಯದಲ್ಲಿ ಆರೋಪಿ ಭಾಗಿಯಾಗಿರೋದಕ್ಕೆ ಸೂಕ್ತ ಸಾಕ್ಷಿಗಳಿವೆ. ಈ ನಾಲ್ಕು ಮಂದಿ ರೇಣುಕಾಸ್ವಾಮಿ ಕೊಲೆಯಲ್ಲಿ ಭಾಗಿಯಾಗಿದ್ದಾರೆ. ತೀರಾ ಅಮಾನುಷವಾಗಿ ರೇಣುಕಾಸ್ವಾಮಿಯ ಕೊಲೆ ಮಾಡಿದ್ದಾರೆ. ಇವರಿಗೆ ನೆಲದ ಕಾನೂನಿನ ಮೇಲೆ ಕಿಂಚಿತ್ತು ಗೌರವ ಇಲ್ಲ. ಎ1 ಪ್ರಚೋದನೆಗೆ ದರ್ಶನ್ ಅಂಡ್ ಟೀಂ ಒಳಗಾಗಿ ಕೃತ್ಯ ಮಾಡಿದೆ. ಕೊಲೆ ಮಾಡಲು ಒಳಸಂಚು ರೂಪಿಸಿ ಬಳಿಕ ಕಿಡ್ನಾಪ್ ಮಾಡಿಸಿದ್ದಾರೆ. ಆನಂತರ ಕಾನೂನು ದುರುಪಯೋಗ ಮಾಡಿಕೊಂಡು ಕೃತ್ಯ ಎಸಗಿದ್ದಾರೆ. ಎಲ್ಲರಿಗೂ ಕೊಲ್ಲುವ ಸಮಾನ ಉದ್ದೇಶವೂ ಕಂಡು ಬಂದಿದೆ. ಸಾಕ್ಷಿ ನಾಶ ಯತ್ನಿಸಿರೋದು ಸಹ ತನಿಖೆಯಲ್ಲಿ ದೃಢವಾಗಿದೆ. ಅದಕ್ಕಾಗಿ ಲಕ್ಷಾಂತರ ರೂಪಾಯಿನ್ನು ಬಳಕೆ ಮಾಡಿದ್ದಾರೆ. ಅದು ಸಹ ನಮ್ಮ ತನಿಖೆಯಲ್ಲಿ ದೃಢವಾಗಿದೆ. ಕೃತ್ಯದಲ್ಲಿ ಭಾಗಿಯಾಗಿದ್ದಕ್ಕೆ ತಾಂತ್ರಿಕ, ಭೌತಿಕ ಮತ್ತು ವೈಜ್ಞಾನಿಕ ಸಾಕ್ಷಿ ಇದೆ. ಆರೋಪಿಗೆ ಅಭಿಮಾನಿಗಳ ಬಳಗ ಇದ್ದು ಬೆದರಿಕೆ ಬರ್ತಾ ಇದೆ. ಹೀಗಾಗಿ ದರ್ಶನ್ ಅಂಡ್ ಸಹಚರರನ್ನು ಜೆಸಿಗೆ ನೀಡಲು ಸರ್ಕಾರ ಮನವಿ ಮಾಡಿತ್ತು. ಈಗ ಎಸ್ಪಿಪಿ ಪ್ರಸನ್ನ ಕುಮಾರ್ ಅವರ ಮನವಿ ಮೇರೆಗೆ ದರ್ಶನ್ ಮತ್ತು ನಾಲ್ಕು ಆರೋಪಿಗಳನ್ನು 14 ನ್ಯಾಯಾಂಗ ಬಂಧನ ವಿಧಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ