ಕಿರುತೆರೆಯಲ್ಲಿ ಸೆನ್ಸೇಷನ್ ಸೃಷ್ಟಿಸಿರೋ ಧಾರಾವಾಹಿ ಎಂದರೆ ಅದು ನಿನಗಾಗಿ
ಬಿಗ್ಬಾಸ್ ಬೆಡಗಿ ದಿವ್ಯಾ ಉರುಡುಗ ಜತೆ ಕಾಣಿಸಿಕೊಂಡ ಸ್ಯಾಂಡಲ್ವುಡ್ ನಟಿ
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ ನಟಿ ಪೂಜಾ ಗಾಂಧಿ ಫೋಟೋಸ್
ಕಿರುತೆರೆಯಲ್ಲಿ ಸೆನ್ಸೇಷನ್ ಸೃಷ್ಟಿಸಿರೋ ಧಾರಾವಾಹಿ ಎಂದರೆ ಅದು ನಿನಗಾಗಿ. ಸಿನಿಮಾ ನಾಯಕಿಯ ಕಥೆ ಇದಾಗಿದ್ದು, ಹೀರೋಯಿನ್ ಬದುಕು ಯಾವಾಗಲು ಬಿಂದಾಸ್ ಆಗಿರುತ್ತೆ. ಅವ್ರಿಗೇನು ಕಮ್ಮಿ ಅನ್ನೋ ಮಾತುಗಳು ಕೇಳಿ ಬರುವುದು ಸಹಜ. ಅಸಲಿಯಲ್ಲಿ ಅವ್ರಿಗೂ ನೋವಿರುತ್ತೆ. ಬಣ್ಣ ಹಚ್ಚಿ ಕಣ್ಣಿಗೆ ಕಲರ್ಫುಲ್ ಆಗಿ ಕಾಣಿಸುವಷ್ಟು ಕಲಾವಿದರ ಬದುಕು ಇರೋದಿಲ್ಲ. ಇದೇ ಎಳೆಯನ್ನು ಇಟ್ಕೊಂಡು ಬಂದಿರೋ ನಿನಗಾಗಿ ಸೀರಿಯಲ್ ಮೊನ್ನೆಯಷ್ಟೆ ಅದ್ಧೂರಿಯಾಗಿ ಲಾಂಚ್ ಆಗಿತ್ತು.
ಇದನ್ನೂ ಓದಿ: ಅಮಿತಾಬ್ ಬಚ್ಚನ್ ಮಗನನ್ನ ಬಿಟ್ರಾ ಐಶ್ವರ್ಯ ರೈ..? ಅಂಬಾನಿ ಸಂಭ್ರಮದಲ್ಲಿ ಬಿಗ್ ಬಿ ಫ್ಯಾಮಿಲಿ ಬೇರೆ ಬೇರೆ!
ಪ್ರತಿ ಎಪಿಸೋಡ್ನಲ್ಲೂ ಬಿಗ್ಬಾಸ್ ಬೆಡಗಿ ದಿವ್ಯಾ ಉರುಡುಗ ಅವರ ಅಭಿನಯಕ್ಕೆ ಫ್ಯಾನ್ಸ್ ಮನಸೋತಿದ್ದಾರೆ. ಇದೀಗ ದಿವ್ಯಾ ಉರುಡುಗ ಇರೋ ಈ ಸೀರಿಯಲ್ನಲ್ಲಿ ಮಳೆ ಹುಡುಗಿ ಪೂಜಾ ಗಾಂಧಿ ಅವರು ಗೆಸ್ಟ್ ರೋಲ್ನಲ್ಲಿ ಕಾಣಿಸಿಕೊಂಡಿದ್ದಾರೆ. ನಿನಗಾಗಿ ಸೀರಿಯಲ್ಗೆ ಎಂಟ್ರಿ ಕೊಟ್ಟಿರೋ ಪ್ರೋಮೋ ರಿಲೀಸ್ ಆಗಿದೆ. ಇದರಲ್ಲಿ ನಟಿ ಪೂಜಾ ಗಾಂಧಿ ಅವರು ಗೆಸ್ಟ್ ರೋಲ್ನಲ್ಲಿ ಕಾಣಿಸಿಕೊಂಡಿದ್ದಾರೆ.
View this post on Instagram
ನಿನಗಾಗಿ ಸೀರಿಯಲ್ ಸೆಟ್ಗೆ ನಟಿ ಎಂಟ್ರಿ ಕೊಟ್ಟಿರೋ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇದೇ ಫೋಟೋಗಳನ್ನು ನಟಿ ದಿವ್ಯಾ ಉರುಡುಗ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದೇ ಫೋಟೋವನ್ನು ನೋಡಿದ ಪೂಜಾ ಗಾಂಧಿ ಅವರು ಹೊಸ ಅವತಾರಕ್ಕೆ ಫ್ಯಾನ್ಸ್ ಶಾಕ್ ಆಗಿದ್ದಾರೆ. ಇನ್ನು ಕೆಲವರು ಅರೇ ಮಳೆ ಹುಡುಗಿಗೇ ಇಲ್ಲೇನು ಕೆಲಸ, ನಮ್ಮ ಮುದ್ದು ಕನ್ನಡತಿ ಅಂತಾ ಕಾಮೆಂಟ್ಸ್ ಮಾಡಿದ್ದಾರೆ. ಸದ್ಯ ಸಿನಿಮಾದಿಂದ ದೂರ ಇರುವ ನಟಿ ಯಾವ ನಿರ್ಮಾಣದಲ್ಲೂ ಕೈ ಹಾಕಿಲ್ಲ. ಮದುವೆ ಆಗಿ ಸುಖ ಸಂಸಾರ ನಡೆಸುತ್ತಿದ್ದಾರೆ ನಟಿ ಪೂಜಾ ಗಾಂಧಿ. ಜೊತೆಗೆ ಕನ್ನಡ ಕಲಿಕೆ ಮತ್ತು ಕನ್ನಡ ಪ್ರೀತಿಯನ್ನ ಮುಂದುವರೆಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ