newsfirstkannada.com

₹30 ಲಕ್ಷಕ್ಕೆ ಡಿಮ್ಯಾಂಡ್‌.. ಭಯಾನಕ ಮೋಸದ ಜಾಲಕ್ಕೆ ಸಿಲುಕಿದ್ದ ನಟಿ ರೂಪಾ ಅಯ್ಯರ್‌; ಆಮೇಲೇನಾಯ್ತು?

Share :

Published May 10, 2024 at 4:06pm

    24 ಗಂಟೆಗಳ ಕಾಲ ಡಿಜಿಟಲ್ ಅರೆಸ್ಟ್ ಮಾಡಿದ್ದ ಸೈಬರ್ ಕಳ್ಳರು

    ವಿಡಿಯೋ ಕಾಲ್ ಮಾಡಿ ಹಣ ದೋಚೋಕೆ ಪ್ಲಾನ್ ಮಾಡಿದ್ದರು

    ಸ್ಯಾಂಡಲ್‌ವುಡ್ ನಟಿ, ನಿರ್ದೇಶಕಿ ರೂಪಾ ಅಯ್ಯರ್‌ ಸ್ಫೋಟಕ ಮಾಹಿತಿ

ಬೆಂಗಳೂರು: ಸ್ಯಾಂಡಲ್‌ವುಡ್ ನಟಿ, ನಿರ್ದೇಶಕಿ ರೂಪಾ ಅಯ್ಯರ್‌ ಅವರು ಆನ್‌ಲೈನ್‌ನಲ್ಲಿ ಅತಿ ದೊಡ್ಡ ಮೋಸಗಾರರ ಜಾಲಕ್ಕೆ ಸಿಲುಕಿದ್ದು, ಸ್ವಲ್ಪದರಲ್ಲೇ ಬಚಾವ್ ಆಗಿದ್ದಾರೆ. ಸೈಬರ್ ಖದೀಮರ ವಂಚನೆಯ ಸುಳಿವು ಗೊತ್ತಾಗುತ್ತಿದ್ದಂತೆ ರೂಪಾ ಅಯ್ಯರ್ ಅವರು ತ್ಯಾಗರಾಜನಗರ ಸೈಬರ್ ಕ್ರೈಂ ವಿಭಾಗಕ್ಕೆ ದೂರು ನೀಡಿದ್ದಾರೆ.

ಕಳೆದ 2 ದಿನದ ಹಿಂದಷ್ಟೇ ನಟಿ, ನಿರ್ದೇಶಕಿ ರೂಪಾ ಅಯ್ಯರ್‌ಗೆ ಆನ್ ಲೈನ್ ಕಳ್ಳರು ಕಾಟ ಕೊಟ್ಟಿದ್ದಾರೆ. ನಾವು ಸಿಸಿಬಿ ಅಧಿಕಾರಿಗಳು ಅಂತ ಹೇಳಿ ರೂಪಾ ಅವರಿಗೆ ಕರೆ ಮಾಡಿದ್ರಂತೆ. ನಂತರ ಮಾತನಾಡುತ್ತಾ ಮನಿ ಲ್ಯಾಂಡ್ರಿಂಗ್‌ನಲ್ಲಿ ನಿಮ್ಮ ಫೋನ್ ನಂಬರ್‌, ಹೆಸರು ಕೇಳಿ ಬರುತ್ತಿದೆ ಅಂತ ಹೇಳಿದ್ರಂತೆ.

ಇದನ್ನೂ ಓದಿ: ಬಿಗ್​ಬಾಸ್​ ಬೆಡಗಿ ಹಾಟ್​ ಫೋಟೋ ಶೂಟ್ ವೈರಲ್‌; ನಮ್ರತಾ ಗೌಡ ಹೋಗಿದ್ದು ಎಲ್ಲಿಗೆ? 

ರೂಪಾ ಅಯ್ಯರ್‌ ಅವರನ್ನು ಬೆದರಿಸಿರುವ ಸೈಬರ್ ಕಳ್ಳರು, ವಿಡಿಯೋ ಕಾಲ್ ಮಾಡಿ ಹಣ ದೋಚೋಕೆ ಮುಂದಾಗಿದ್ದಾರೆ. ಮುಂಬೈ ಪೊಲೀಸ್ ಠಾಣೆಯಿಂದ ಕರೆ ಮಾಡುತ್ತಿದ್ದೇವೆ ಎನ್ನುತ್ತಾ 24 ಗಂಟೆಗಳ ಕಾಲ ಡಿಜಿಟಲ್ ಅರೆಸ್ಟ್ ಮಾಡಿದ್ದಾರೆ. 24 ಗಂಟೆಗಳ ಕಾಲ ವಿಡಿಯೋ ಕಾಲ್‌ನಲ್ಲೇ ಇದ್ದು ಮನೆಯಿಂದ ಹೊರಗೆ ಬರದಂತೆ ತಡೆ ಹಿಡಿದಿದ್ದಾರೆ.

ನರೇಶ್ ಗೋಯಲ್ ಮನಿ ಲ್ಯಾಂಡ್ರಿಂಗ್ ಕೇಸ್‌ನಲ್ಲಿ ನಿಮ್ಮ ಹೆಸರು ಕೇಳಿದೆ. ದೇಶದಲ್ಲಿ 247 ಜನರನ್ನು ಗುರುತಿಸಲಾಗಿದೆ. ನಿಮ್ಮ ಸಿಮ್ ಬಳಸಿ ದೇಶದ್ರೋಹಿ ದಂಧೆ ಮಾಡ್ತಿದ್ದಾರೆ ಅಂತ ಹೇಳಿದ್ರಂತೆ. ವಿಡಿಯೋ ಕಾಲ್‌ನಲ್ಲಿ ಕಾಟ ಕೊಟ್ಟ ಫೇಕ್ ಅಧಿಕಾರಿಗಳು ರೂಪಾ ಅಯ್ಯರ್‌ಗೆ 30 ಲಕ್ಷ ರೂಪಾಯಿ ನೀಡುವಂತೆ ಹಣಕ್ಕೆ ಬೇಡಿಕೆ ಇಟ್ಟಿದ್ದರಂತೆ. ನಂತರ ಎಚ್ಚೆತ್ತುಕೊಂಡ ರೂಪಾ ಅಯ್ಯರ್ ಅವರು ಸೈಬರ್ ಕ್ರೈಂಗೆ ದೂರು ನೀಡಿದ್ದಾರೆ.

ರೂಪಾ ಅಯ್ಯರ್ ಅವರು ಇದು ಫೇಕ್ ಅಂತ ತಿಳಿದು ಸೈಬರ್ ಕ್ರೈಂಗೆ ದೂರು ನೀಡಿದ್ದಾರೆ. ಇದು ಆನ್‌ಲೈನ್‌ ಖದೀಮರ ನಯಾ ವೇಷ. ದಿನಕ್ಕೊಂದು ಖತರ್ನಾಕ್ ಐಡಿಯಾ ಜೊತೆಗೆ ಖದೀಮರು ಮೋಸ ಮಾಡಲು ಜಾಲ ಬೀಸುತ್ತಿದ್ದಾರೆ. ನಾನೇ ಸಿಸಿಬಿ ಸೋಗಿನಲ್ಲಿ ಒಂದು ದಿನ ಡಿಜಿಟಲ್ ಅರೆಸ್ಟ್ ಆಗಿದ್ದೆ. ಆನ್‌ಲೈನ್ ಕಳ್ಳರ ಅಸಲಿ ದಂಧೆ ಪ್ರಭಾವಿಗಳನ್ನ ಯಾಮಾರಿಸೋಕೆ ಮುಂದಾಗಿದೆ ಅಂತ ರೂಪಾ ಅಯ್ಯರ್ ಆರೋಪಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

₹30 ಲಕ್ಷಕ್ಕೆ ಡಿಮ್ಯಾಂಡ್‌.. ಭಯಾನಕ ಮೋಸದ ಜಾಲಕ್ಕೆ ಸಿಲುಕಿದ್ದ ನಟಿ ರೂಪಾ ಅಯ್ಯರ್‌; ಆಮೇಲೇನಾಯ್ತು?

https://newsfirstlive.com/wp-content/uploads/2024/05/Roopa-Ayir-on-Cyber-Crime.jpg

Load More