ನಟಿಯಾಗಿಯೂ ಗುರುತಿಸಿಕೊಂಡಿದ್ದರು ಸ್ಪಂದನಾ
ಚಿನ್ನಾರಿ ಮುತ್ತನ ಪತ್ನಿ ಸ್ಪಂದನಾಗೆ ಹೃದಯಾಘಾತ
ಲೋ ಬಿಪಿ ಜೊತೆಗೆ ಹೃದಯಾಘಾತ ಆಗಿರುವ ಮಾಹಿತಿ
ಸ್ಯಾಂಡಲ್ವುಡ್ ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ವಿದೇಶದಲ್ಲಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ವಿಜಯ ರಾಘವೇಂದ್ರ ಕುಟುಂಬ ಬ್ಯಾಂಕಾಕ್ನತ್ತ ಹೊರಟಿದೆ. ಬ್ಯಾಂಕಾಕ್ನಿಂದ ಅವರ ಪಾರ್ಥಿವ ಶರೀರವನ್ನು ನಾಳೆ ಬೆಂಗಳೂರಿಗೆ ತರಬಹುದು ಎಂದು ಹೇಳಲಾಗುತ್ತಿದೆ.
ನಟ ವಿಜಯಯ್ ರಾಘವೇಂದ್ರ ಅವರು ಬೆಂಗಳೂರಿನಲ್ಲಿದ್ದು ಶೀಘ್ರದಲ್ಲೇ ಕುಟುಂಬ ಸದಸ್ಯರೊಂದಿಗೆ ಬ್ಯಾಂಕಾಕ್ಗೆ ತೆರಳಲಿದ್ದಾರೆ. ಬಳಿಕ ಅಲ್ಲಿಂದ ಮೃತದೇಹವನ್ನು ತರಲಾಗುತ್ತದೆ.
ಸ್ಪಂದನಾ ಅವರು ವಿ.ರವಿಚಂದ್ರನ್ ನಿರ್ದೇಶನದ ‘ಅಪೂರ್ವ’ ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರದಲ್ಲಿ ವಿಜಯ್ ರಾಘವೇಂದ್ರ ಅವರ ಹೆಂಡತಿಯಾಗಿ ನಟಿಸಿದ್ದರು. ಸ್ಪಂದನಾ 2007ರಲ್ಲಿ ವಿಜಯ ರಾಘವೇಂದ್ರ ಅವರನ್ನು ವಿವಾಹವಾದರು. ಇವರಿಗೆ ಶೌರ್ಯ ಎಂಬ ಮುದ್ದಾದ ಮಗನಿದ್ದಾನೆ. ಸ್ಪಂದನಾ ಅವರ ನಿಧನದ ಸುದ್ದಿ ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ