ಇಂದು ಸೌಂದರ್ಯ ಜಗದೀಶ್ ಅಂತ್ಯಕ್ರಿಯೆ.. ಹತ್ತಾರು ಅನುಮಾನಕ್ಕೆ ಕಾರಣವಾಯ್ತು ನಿರ್ಮಾಪಕನ ಸಾವು

author-image
AS Harshith
Updated On
ಸ್ಯಾಂಡಲ್‌ವುಡ್‌ ನಿರ್ಮಾಪಕ ಸೌಂದರ್ಯ ಜಗದೀಶ್ ಆತ್ಮಹತ್ಯೆ ಕೇಸ್‌ಗೆ ಹೊಸ ಟ್ವಿಸ್ಟ್; ಅಸಲಿ ಕಾರಣವೇನು?
Advertisment
  • ನಿರ್ಮಾಪಕ ಸೌಂದರ್ಯ ಜಗದೀಶ್ ಚಿತ್ರರಂಗ ಕಂಬನಿ
  • ಇಂದು ಅಂತಿಮ ವಿಧಿವಿಧಾನಗಳೊಂದಿಗೆ ನಡೆಯಲಿದೆ ಅಂತ್ಯಕ್ರಿಯೆ
  • ತಮ್ಮ ವ್ಯಕ್ತಿತ್ವದಿಂದ ಎಲ್ಲರ ಮನಸ್ಸು ಗೆದ್ದಿದ್ರು ಸೌಂದರ್ಯ ಜಗದೀಶ್

ನಿರ್ಮಾಪಕ ಸೌಂದರ್ಯ ಜಗದೀಶ್ ಆತ್ಮಹತ್ಯೆಯ ಶಾಕಿಂಗ್ ಸುದ್ದಿಯಿಂದ ಚಿತ್ರರಂಗ ಕಂಬನಿ ಮಿಡಿಯುತ್ತಿದೆ. ನಿನ್ನೆ ಬೆಳಗ್ಗೆ ವಿಷಯ ಗೊತ್ತಾದಮೇಲಿಂದ ಮಧ್ಯರಾತ್ರಿಯವರಿಗೂ ಮಿತ್ರರು, ಚಿತ್ರರಂಗ ಹಾಗೂ ಅಭಿಮಾನಿಗಳು ಸೇರಿದಂತೆ ಅಪಾರ ಮಂದಿ ಅಂತಿಮ ದರ್ಶನ ಪಡೆದರು. ಇಂದು ಅಂತಿಮ ವಿಧಿವಿಧಾನಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ.

ಸೌಂದರ್ಯ ಜಗದೀಶ್. ಉದ್ಯಮಿಯಾಗಿ, ನಿರ್ಮಾಪಕನಾಗಿ ದೊಡ್ಡ ಹೆಸರು ಗಳಿಸಿದ ವ್ಯಕ್ತಿ. ಉದ್ಯಮಿ, ನಿರ್ಮಾಪಕ ಅನ್ನೋದ್ರ ಆಚೆಗೆ ತಮ್ಮ ವ್ಯಕ್ತಿತ್ವದಿಂದ ಎಲ್ಲರ ಮನಸ್ಸು ಗೆದ್ದಿದ್ರು. ಹೀಗಾಗಿ ಸೌಂದರ್ಯ ಜಗದೀಶ್​​ಗೆ ಗೆಳೆಯರ ಬಳಗ ತುಂಬಾ ದೊಡ್ಡದು. ಇಂಡಸ್ಟ್ರಿಯವ್ರ ಯಾವುದೇ ಕಾರ್ಯಕ್ರಮವಾದ್ರೂ ಅಲ್ಲಿ ಜಗದೀಶ್ ಹಾಜರಿ ಇದ್ದೇ ಇರ್ತಿತ್ತು. ಅವ್ರಿಗೆ ಕುಟುಂಬವೆಂದರೇ ಎಲ್ಲಿಲ್ಲದ ಪ್ರೀತಿ. ಪತ್ನಿ-ಮಕ್ಕಳನ್ನು ಬಿಟ್ಟು ಇರುತ್ತಿರಲಿಲ್ಲ. ಇದೇ ಕಾರಣಕ್ಕಾಗಿಯೇ ಸೌಂದರ್ಯ ಜಗದೀಶ್ ಆತ್ಮಹತ್ಯೆ ಸುದ್ದಿಯನ್ನ ಯಾರೂ ನಂಬಿರಲಿಲ್ಲ. ಕುಟುಂಬವನ್ನ ಅನಾಥ ಮಾಡಿ, ಜಗದೀಶ್ ಆತ್ಮಹತ್ಯೆ ಮಾಡಿಕೊಳ್ಳೋಕೆ ಸಾಧ್ಯನಾ..? ಅಂತ ಎಲ್ಲರ ಮನಸ್ಸಲ್ಲೂ ಪ್ರಶ್ನೆ ಹುಟ್ಟಿತ್ತು.

publive-image

ಸೌಂದರ್ಯ ಜಗದೀಶ್ ಸಾವಿನ ನಿಗೂಢತೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಅವ್ರಿಗೆ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಸಂಕಷ್ಟ ಏನಿತ್ತು ಅನ್ನೋದು ಎಲ್ಲರಿಗೂ ಯಕ್ಷ ಪ್ರಶ್ನೆ ಆಗಿದೆ. ಯಾವುದೇ ಡೆತ್ ನೋಟ್ ಪತ್ತೆ ಆಗಿಲ್ಲದಿರೋದ್ರಿಂದ ಹತ್ತಾರು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

ಇದನ್ನೂ ಓದಿ: ದೈನಂದಿನ ಕೆಲಸಗಳಲ್ಲಿ ಅಡ್ಡಿ, ಆತುರದ ನಿರ್ಧಾರ ಬೇಡ; ಇಲ್ಲಿದೆ ನಿಮ್ಮ ರಾಶಿ ಭವಿಷ್ಯ

publive-image

ಇನ್ನು ಜಗದೀಶ್ ಸಾವಿನ ಸುದ್ದಿ ತಿಳಿದ ಬಳಿಕ ಸಾಕಷ್ಟು ಆಪ್ತರು, ಕಲಾವಿದರು ಜಗದೀಶ್ ನಿವಾಸದತ್ತ ದೌಡಾಯಿಸಿದ್ರು. ಅದರಲ್ಲೂ ನಟರಾದ ದರ್ಶನ್ ಮತ್ತು ಉಪೇಂದ್ರ ಜಗದೀಶ್ ಕುಟುಂಬಕ್ಕೆ ತುಂಬಾ ಆಪ್ತರಾಗಿದ್ರು. ಗೆಳೆಯನ ಸಾವಿನ ಸುದ್ದಿಯಿಂದ ಮನನೊಂದಿದ್ದ ಇಬ್ಬರು ಕೂಡ ಆಗಮಿಸಿ ಕುಟುಂಬಕ್ಕೆ ಸಾಂತ್ವಾನ ಹೇಳಿ, ಧೈರ್ಯ ತುಂಬಿದ್ರು.

publive-image

ಸದ್ಯ ಜಗದೀಶ್ ಅಂತಿಮ ಕಾರ್ಯಕ್ಕೆ ಸಕಲ ಸಿದ್ಧತೆ ನಡೆದಿದ್ದು, ಇಂದು ಬೆಳಗ್ಗೆ 11 ಗಂಟೆಗೆ ಅಂತಿಮ ಸಂಸ್ಕಾರ ನಡೆಯುವ ಸಾಧ್ಯತೆಯಿದೆ. ಹಾಸನ ಜಿಲ್ಲೆ ಸಮೀಪದ ಹಿರೀಸಾವೆ ಬಳಿಯ ಫಾರ್ಮ್ ಹೌಸ್ನಲ್ಲಿ ವಿಧಿ ವಿಧಾನಗಳು ನಡೆಯಲಿದ್ದು, ಪೂರ್ವ ತಯಾರಿಗಳು ನಡೆಯುತ್ತಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment