Advertisment

ಸೌಂದರ್ಯ ಜಗದೀಶ್​, ದರ್ಶನ್​, ಪವಿತ್ರಾ ಮಧ್ಯೆ ಕೋಟಿ, ಕೋಟಿ ವ್ಯವಹಾರ? ಆತ್ಮಹತ್ಯೆ ಕೇಸ್‌ಗೆ ಬಿಗ್​ ಟ್ವಿಸ್ಟ್!

author-image
admin
Updated On
ಸೌಂದರ್ಯ ಜಗದೀಶ್​, ದರ್ಶನ್​, ಪವಿತ್ರಾ ಮಧ್ಯೆ ಕೋಟಿ, ಕೋಟಿ ವ್ಯವಹಾರ? ಆತ್ಮಹತ್ಯೆ ಕೇಸ್‌ಗೆ ಬಿಗ್​ ಟ್ವಿಸ್ಟ್!
Advertisment
  • ಸೌಂದರ್ಯ ಜಗದೀಶ್ ಅವರ ಆತ್ಮಹತ್ಯೆಗೆ ಕೇಸ್​ಗೆ ಬಿಗ್​ ಟ್ವಿಸ್ಟ್
  • ಕಳೆದ ಏಪ್ರಿಲ್ 14ರಂದು ಆತ್ಮಹತ್ಯೆಗೆ ಶರಣಾಗಿದ್ದ ನಿರ್ಮಾಪಕರು
  • ಪವಿತ್ರಾಗೌಡಗೆ ನಿರ್ಮಾಪಕ ಸೌಂದರ್ಯ ಜಗದೀಶ್ ದುಡ್ಡು ಕೊಟ್ಟಿದ್ರಾ?

ಬೆಂಗಳೂರು: ಸ್ಯಾಂಡಲ್‌ವುಡ್ ನಿರ್ಮಾಪಕ ಸೌಂದರ್ಯ ಜಗದೀಶ್ ಅವರು ಇತ್ತೀಚೆಗೆ ಆತ್ಮಹತ್ಯೆಗೆ ಶರಣಾಗಿದ್ದರು. ಕಳೆದ ಏಪ್ರಿಲ್ 14ರಂದು ನಿರ್ಮಾಪಕರ ಸಾವಿನ ಸುದ್ದಿ ಕೇಳಿ ಇಡೀ ಕನ್ನಡ ಚಿತ್ರರಂಗವೇ ಬೆಚ್ಚಿ ಬಿದ್ದಿತ್ತು. ಇದೀಗ ನಿರ್ಮಾಪಕ ಸೌಂದರ್ಯ ಜಗದೀಶ್ ಅವರ ಆತ್ಮಹತ್ಯೆಗೆ ಕೇಸ್​ಗೆ ಬಿಗ್​ ಟ್ವಿಸ್ಟ್ ಸಿಕ್ಕಿದೆ.

Advertisment

ಇದನ್ನೂ ಓದಿ: EXCLUSIVE: ಪವಿತ್ರಾ ಗೌಡ ಮನೆ ಖರೀದಿಗೆ ₹2 ಕೋಟಿ ಕೊಟ್ಟಿದ್ರಾ ಸೌಂದರ್ಯ ಜಗದೀಶ್? 

ಇದನ್ನೂ ಓದಿ: ಚಾಪೆ ಮೇಲೆ ನಿದ್ದೆ, ಸೊಳ್ಳೆ ಕಾಟದಿಂದ ಪರದಾಟ.. ಜೈಲಲ್ಲಿ ಪವಿತ್ರಾ ಗೌಡಗೆ ಕರಾಳ ರಾತ್ರಿ 

ನಿರ್ಮಾಪಕ ಸೌಂದರ್ಯ ಜಗದೀಶ್ ಅವರ ಆತ್ಮಹತ್ಯೆ ಬಳಿಕ ಅವರ ಪಾಲುದಾರರ ಮೇಲೆ ಆರೋಪಗಳು ಕೇಳಿ ಬಂದಿದೆ. ಪಾಲುದಾರರ ಮೇಲೆ ಸೌಂದರ್ಯ ಜಗದೀಶ್ ಪತ್ನಿ ರೇಖಾ ಅವರು 60 ಕೋಟಿ ರೂಪಾಯಿ ನಷ್ಟದ ಆರೋಪ ಮಾಡಿ ದೂರು ಕೂಡ ದಾಖಲಿಸಿದ್ದರು. ರೇಖಾ ಜಗದೀಶ್ ಅವರ​ ದೂರಿನ ಬೆನ್ನಲ್ಲೇ ಪಾಲುದಾರರು ಅಲರ್ಟ್ ಆಗಿದ್ದರು.

Advertisment

publive-image

ದರ್ಶನ್​, ಪವಿತ್ರಾಗೌಡ ನಡುವೆ ವ್ಯವಹಾರ?
ಸೌಂದರ್ಯ ಜಗದೀಶ್ ಅವರು ನಟ ದರ್ಶನ್​ ಹಾಗೂ ಪವಿತ್ರಾಗೌಡ ಅವರ ಮಧ್ಯೆ ಕೋಟಿ, ಕೋಟಿ ವ್ಯವಹಾರ ನಡೆದಿದೆ ಎನ್ನಲಾದ ಮಾಹಿತಿ ನ್ಯೂಸ್‌ ಫಸ್ಟ್‌ಗೆ ಲಭ್ಯವಾಗಿದೆ. ಈ ಎಕ್ಸ್‌ಕ್ಲೂಸಿವ್‌ ದಾಖಲಾತಿಗಳಲ್ಲಿ ಸೌಂದರ್ಯ ಜಗದೀಶ್ ಅವರು ದರ್ಶನ್​, ಪವಿತ್ರಾಗೌಡಗೆ ದುಡ್ಡು ಕೊಟ್ಟಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಜೈಲಲ್ಲಿ 2ನೇ ರಾತ್ರಿ ಕಳೆದ ದರ್ಶನ್​.. ಸರಿಯಾಗಿ ಊಟ, ನಿದ್ದೆ ಇಲ್ಲದ ‘ಕಾಟೇರ’ನ ಕತೆ-ವ್ಯಥೆ ಹೀಗಿದೆ 

ಸೌಂದರ್ಯ ಜಗದೀಶ್ ಅವರ ಪಾಲುದಾರ ಸುರೇಶ್ ಎಂಬುವವರು ಹಣಕಾಸು ವ್ಯವಹಾರದ ದಾಖಲೆಯನ್ನು ಪೊಲೀಸರಿಗೆ ನೀಡಿದ್ದಾರೆ. ಅದರಲ್ಲಿ ಸೌಂದರ್ಯ ಜಗದೀಶ್​ ಹಾಗೂ ನಟ ದರ್ಶನ್​, ಪವಿತ್ರಾಗೌಡ ಅವರ ಮಧ್ಯೆ ಹಣದ ವ್ಯವಹಾರ ನಡೆದಿದೆ ಎನ್ನಲಾಗಿದೆ. ಸೌಂದರ್ಯ ಜಗದೀಶ್ ಹಾಗೂ ಪವಿತ್ರಾ ಗೌಡ ಅವರ ಮಧ್ಯೆ ನಡೆದಿರುವ ಹಣಕಾಸಿನ ವ್ಯವಹಾರದ ದಾಖಲೆಗಳು ನ್ಯೂಸ್​ ಫಸ್ಟ್‌ಗೆ ಲಭ್ಯವಾಗಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment