newsfirstkannada.com

ಸೌಂದರ್ಯ ಜಗದೀಶ್‌ ಆತ್ಮಹತ್ಯೆ ಮಾಡಿಕೊಂಡಿದ್ದು ಸತ್ಯ.. ಆಪ್ತ ಸ್ನೇಹಿತ ಶ್ರೇಯಸ್‌ ಬಿಚ್ಚಿಟ್ರು ಅಸಲಿ ವಿಷಯ

Share :

Published April 14, 2024 at 12:50pm

Update April 14, 2024 at 12:51pm

  ಸೌಂದರ್ಯ ಜಗದೀಶ್ ಆತ್ಮಹತ್ಯೆ ಸುದ್ದಿ ಖಚಿತ ಪಡಿಸಿದ ಆಸ್ಪತ್ರೆ ವೈದ್ಯರು

  ಎರಡು ಕಾರಣದಿಂದ ಸೌಂದರ್ಯ ಜಗದೀಶ್ ಆತ್ಮಹತ್ಯೆಗೆ ಶರಣಾದ ಸಾಧ್ಯತೆ

  ದಿಲ್ದಾರ್ ಮನುಷ್ಯ ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ಆಘಾತ ವ್ಯಕ್ತಪಡಿಸಿದ ಸ್ನೇಹಿತರು

ಕನ್ನಡ ಚಿತ್ರರಂಗದ ನಿರ್ಮಾಪಕ ಸೌಂದರ್ಯ ಜಗದೀಶ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೌಂದರ್ಯ ಜಗದೀಶ್ ಅವರ ಸಾವಿನ ಸುದ್ದಿಯನ್ನ ಅವರ ಕುಟುಂಬಸ್ಥರು, ಸ್ನೇಹಿತರು ಖಚಿತಪಡಿಸಿದ್ದಾರೆ.
ಇಂದು ಬೆಳಗ್ಗೆ ಸೌಂದರ್ಯ ಜಗದೀಶ್ ಅವರು ತಮ್ಮ ಮಹಾಲಕ್ಷ್ಮಿ ಲೇಔಟ್‌ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೂಡಲೇ ಅವರನ್ನು ರಾಜಾಜಿನಗರದ ಸುಗುಣ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.

ಸದ್ಯದ ಮಾಹಿತಿ ಪ್ರಕಾರ ನಿರ್ಮಾಪಕ ಸೌಂದರ್ಯ ಜಗದೀಶ್ ಅವರು ಇತ್ತೀಚೆಗೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಆರೋಗ್ಯದ ಸಮಸ್ಯೆ ಜೊತೆಗೆ ಬಿಸಿನೆಸ್ ಕೂಡ ಲಾಸ್ ಆಗಿತ್ತು. ಈ ಎರಡು ಕಾರಣದಿಂದ ಸೌಂದರ್ಯ ಜಗದೀಶ್ ಅವರು ಖಿನ್ನತೆಗೆ ಒಳಗಾಗಿದ್ದರು. ಈ ಹಿನ್ನೆಲೆಯಲ್ಲಿ ಸೌಂದರ್ಯ ಜಗದೀಶ್ ಅವರು ಆತ್ಮಹತ್ಯೆಗೆ ಶರಣಾಗಿರಬಹುದು ಎನ್ನಲಾಗಿದೆ.

ಇದನ್ನೂ ಓದಿ: ನಿರ್ಮಾಪಕ ಸೌಂದರ್ಯ ಜಗದೀಶ್‌ ಆತ್ಮಹತ್ಯೆಗೆ ಶರಣು; ಪೊಲೀಸರಿಂದ ಸ್ಫೋಟಕ ಮಾಹಿತಿ

ಸುಗುಣಾ ಆಸ್ಪತ್ರೆ ಬಳಿ ಸೌಂದರ್ಯ ಜಗದೀಶ್ ಸ್ನೇಹಿತ ಶ್ರೇಯಸ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ದಿಲ್ದಾರ್ ಮನುಷ್ಯ ಅವರು ಆತ್ಮಹತ್ಯೆ ಮಾಡಿಕೊಂಡಿದ್ದೇಕೆ ಅನ್ನೋದು ಈಗ ಗೊತ್ತಿಲ್ಲ. ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಅನ್ನೋದು ಮುಂದೆ ಗೊತ್ತಾಗಲಿದೆ. ಇದು ನಿಜಕ್ಕೂ ದುಃಖದ ಸಂಗತಿ ಎಂದು ಶ್ರೇಯಸ್ ಹೇಳಿದ್ದಾರೆ.

ಸುಗುಣ ಆಸ್ಪತ್ರೆ ವೈದ್ಯರ ಮಾಹಿತಿ ಪ್ರಕಾರ ಸೌಂದರ್ಯ ಜಗದೀಶ್ ಅವರು ಆತ್ಮಹತ್ಯೆ ಮಾಡಿಕೊಂಡಿರುವುದು ಖಚಿತವಾಗಿದೆ. ಮೃತದೇಹವನ್ನು ಪೊಲೀಸರು ಎಂ.ಎಸ್‌ ರಾಮಯ್ಯ ಆಸ್ಪತ್ರೆಗೆ ಶಿಫ್ಟ್ ಮಾಡಲಾಗುತ್ತಿದ್ದು, ಅಲ್ಲಿ ಪೋಸ್ಟ್ ಮಾರ್ಟಮ್ ಮಾಡಿದ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸೌಂದರ್ಯ ಜಗದೀಶ್‌ ಆತ್ಮಹತ್ಯೆ ಮಾಡಿಕೊಂಡಿದ್ದು ಸತ್ಯ.. ಆಪ್ತ ಸ್ನೇಹಿತ ಶ್ರೇಯಸ್‌ ಬಿಚ್ಚಿಟ್ರು ಅಸಲಿ ವಿಷಯ

https://newsfirstlive.com/wp-content/uploads/2024/04/BNG_SOUNDARY_CASE.jpg

Load More