ಪ್ರೀತಿಯ ಅಕ್ಕ ಸಂಗೀತಾರಿಂದ ಮುತ್ತು ಪಡೆದುಕೊಂಡು ಜೈಲಿಗೆ!
ಬಿಗ್ಬಾಸ್ ಸೀಸನ್ 10 ಗ್ರ್ಯಾಂಡ್ ಫಿನಾಲೆಗೆ ದಿನಗಣನೆ ಶುರು
ಬಿಗ್ಬಾಸ್ ಕೊನೆಯ ವಾರದ ಕಳಪೆ ಪಟ್ಟ ಡ್ರೋನ್ ಪ್ರತಾಪ್ಗೆ
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 10 ಇರೋದು ಇನ್ನು ಕೇವಲ ಒಂದು ವಾರವಷ್ಟೇ. ಇದೇ ಹೊತ್ತಲ್ಲಿ ಬಿಗ್ಬಾಸ್ ಮನೆಯಲ್ಲಿ ಒಟ್ಟು 6 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಬಿಗ್ಬಾಸ್ ಸೀಸನ್ 10 ಕೊನೆಯ ವಾರದ ಕಳಪೆ ಪಟ್ಟ ಯಾರಿಗೆ ಸಿಕ್ಕಿದೆ ಎಂದು ಗೊತ್ತಾಗಿದೆ. ಹೌದು ಡ್ರೋನ್ ಪ್ರತಾಪ್ಗೆ ಕಳಪೆ ಪಟ್ಟ ಸಿಕ್ಕಿದೆ. ಬಿಗ್ಬಾಸ್ ಕೊನೆಯ ವಾರದ ಕ್ಯಾಪ್ಟನ್ ಆಗಿ ಸಂಗೀತಾ ಶೃಂಗೇರಿ ಹೊರ ಹೊಮ್ಮಿದ್ದರು. ಆದರೆ ಈಗ ಕೊನೆಯ ವಾರದ ಕಳಪೆ ಪಟ್ಟ ಡ್ರೋನ್ ಪ್ರತಾಪ್ ಪಡೆದುಕೊಂಡಿದ್ದಾರೆ.
ರಿಲೀಸ್ ಆದ ಪ್ರೋಮೋದಲ್ಲಿ ಬಿಗ್ ಬಾಸ್ ಮನೆಯ ಇಡೀ ಜರ್ನಿಯನ್ನು ಕಂಪ್ಲೀಟ್ ಆಗಿ ತೆಗೆದುಕೊಂಡರೆ ಕಳಪೆಯನ್ನು ಪ್ರತಾಪ್ಗೆ ಕೊಡುವುದಕ್ಕೆ ಇಷ್ಟಪಡುತ್ತೇನೆ ಎಂದು ವಿನಯ್ ಗೌಡ ಹೇಳಿದ್ದಾರೆ. ಪ್ರತಾಪ್ದು ಜೀರೋ ಪರ್ಫಾಮೆನ್ಸ್. ಎಲ್ಲೋ ಒಂದು ಕಡೆ ಮಾತ್ರ ಪ್ರತಾಪ್ ಪರ್ಫಾರ್ಮ್ ಮಾಡಿದ್ದು ನಾನು ನೋಡಿದ್ದೇನೆ ಅಷ್ಟೇ ಎಂದು ಕಾರ್ತಿಕ್ ಹೇಳಿದ್ದಾರೆ. ತುಕಾಲಿ ಸಂತು ಕೂಡ ಪ್ರತಾಪ್ಗೆ ಕಳಪೆ ಎಂದು ವೋಟ್ ಹಾಕಿದ್ದಾರೆ.
View this post on Instagram
ಇದೇ ವೇಳೆ ನನ್ನ ಪ್ರಕಾರ, ಇಲ್ಲಿ ಯಾರೂ ಕಳಪೆ ಇಲ್ಲ ಎಂದು ಕ್ಯಾಪ್ಟನ್ ಸಂಗೀತಾ ಶೃಂಗೇರಿ ಹೇಳಿದ್ದಾರೆ. ಬಳಿಕ ಪ್ರತಾಪ್ಗೆ ಕಳಪೆ ಪಟ್ಟ ಸಿಕ್ಕಿದ್ದಕ್ಕೆ ಕಣ್ಣೀರು ಹಾಕಿದ್ದಾರೆ.ತಮಗೆ ಕಳಪೆ ಪಟ್ಟ ಸಿಕ್ಕಿದ್ದಕ್ಕೆ ಪ್ರತಿಕ್ರಿಯೆ ನೀಡಿರುವ ಡ್ರೋನ್ ಪ್ರತಾಪ್, ಸಂಗೀತಾ ದೀದಿ ಇಷ್ಟೊಂದು ವಾರಗಳು ನನ್ನ ಪರವಾಗಿ ನಿಂತಿದ್ದರು. ಅದಕ್ಕೆ ನಾನು ತುಂಬ ಚಿರಋಣಿ ಆಗಿದ್ದೇನೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ