6,6,6,6,6.. ಒಂದೇ ಓವರ್​ನಲ್ಲಿ 5 ಸಿಕ್ಸ್‌ ಬಾರಿಸಿದ ಸಂಜು ಸ್ಯಾಮ್ಸನ್; ಬಾಂಗ್ಲಾ ವಿರುದ್ಧ ಹೇಗಿತ್ತು ಆರ್ಭಟ?

author-image
Gopal Kulkarni
Updated On
ಸಂಜು ಸ್ಯಾಮ್ಸನ್ ಸೆಂಚುರಿ, ಸೂರ್ಯ ಕುಮಾರ್‌ ಅಬ್ಬರ.. ಬಾಂಗ್ಲಾಗೆ ಟೀಂ ಇಂಡಿಯಾ ಬಿಗ್ ಟಾರ್ಗೆಟ್‌!
Advertisment
  • ಬಾಂಗ್ಲಾದೇಶದ ಬೌಲರ್​ಗಳ ಬೆಂಡೆತ್ತಿದ ಸಂಜು ಸ್ಯಾಮ್ಸನ್​
  • ಒಂದೇ ಓವರ್​ನಲ್ಲಿ 5 ಸಿಕ್ಸರ್ ಸಿಡಿಸಿ ಯುವ ಆಟಗಾರ ಸಂಜು
  • 40 ಬೌಲ್​​ಗಳಲ್ಲಿ ಶತಕ ಸಿಡಿಸಿ ಹೊಸ ದಾಖಲೆ ಬರೆದ ಸ್ಯಾಮ್ಸನ್

ಭಾರತ ಬಾಂಗ್ಲಾದೇಶದ ಮೂರನೇ ಟಿ20 ಪಂದ್ಯದಲ್ಲಿ ಆರಂಭಿಕ ಆಟಗಾರ ಸಂಜು ಸ್ಯಾಮ್ಸನ್ ಬಾಂಗ್ಲಾ ಬೌಲರ್​ಗಳನ್ನು ಅಕ್ಷರಶಃ ಚೆಂಡಾಡಿದ್ದಾರೆ. ಈ ಪಂದ್ಯದಲ್ಲಿ ತಮ್ಮ ಚೊಚ್ಚಲ ಟಿ20 ಶತಕ ಸಿಡಿಸಿದ ಸ್ಯಾಮ್ಸನ್ ಒಂದೇ ಓವರ್​ನಲ್ಲಿ ಐದು ಸಿಕ್ಸರ್ ಸಿಡಿಸುವ ಮೂಲಕ ಹೊಸದೊಂದು ದಾಖಲೆ ಬರೆದಿದ್ದಾರೆ.

ಇದನ್ನೂ ಓದಿ:ಟಾಸ್ ಗೆದ್ದ ಕ್ಯಾಪ್ಟನ್ ಸೂರ್ಯಕುಮಾರ್.. ಟೀಮ್ ಇಂಡಿಯಾದ ಪ್ಲೇಯಿಂಗ್-11 ಹೇಗಿದೆ?

ಹೈದ್ರಾಬಾದ್​​ನಲ್ಲಿ ನಡೆದ ಪಂದ್ಯದಲ್ಲಿ ಕೇವಲ 40 ಬೌಲ್​ಗಳಿಗೆ ಸೆಂಚುರಿ ಹೊಡೆದ ಸಂಜು ಸ್ಯಾಮ್ಸನ್ ಟಿ20 ಇತಿಹಾಸದಲ್ಲಿ ಅತಿಕಡಿಮೆ ಬೌಲ್​ಗೆ ಸೆಂಚುರಿ ಸಿಡಿಸಿದ ವಿಶ್ವದ ಎರಡನೇ ಬ್ಯಾಟ್ಸಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅದು ಮಾತ್ರವಲ್ಲ ಬಾಂಗ್ಲಾದೇಶದ ಸ್ಪಿನ್ನರ್ ರಿಶದ್ ಹುಸೇನಿಯ ಎಸೆದ ಓವರ್​ನಲ್ಲಿ ಐದು ಸಿಕ್ಸರ್ ಸಿಡಿಸುವ ಮೂಲಕ ಬಾಂಗ್ಲಾದೇಶದ ಬೌಲರ್​ಗಳ ಮೇಲೆ ಸಂಜು ಸ್ಯಾಮ್ಸನ್ ಅಕ್ಷರಶಃ ಸವಾರಿ ಮಾಡಿದ್ದಾರೆ.

47 ಬಾಲ್​ಗೆ 117 ರನ್ ಸಿಡಿಸಿದ ಸಂಜು ಸ್ಯಾಮನ್ಸ್​ 14ನೇ ಓವರ್​ನಲ್ಲಿ ಮುಸ್ತಾಫೀರ್ ರೆಹಮಾನ್ ಎಸೆದ ಬೌಲಿಂಗ್​ನಲ್ಲಿ ಔಟ್ ಆದ್ರೂ . ಈಗಾಗಲೇ ಭಾರತ ಮೂರು ಟಿ20 ಪಂದ್ಯಗಳಲ್ಲಿ 2 ರಲ್ಲಿ ಗೆಲುವನ್ನು ಸಾಧಿಸಿದೆ. ಇದನ್ನು ಗೆದ್ದಲ್ಲಿ ಇಡೀ ಸರಣಿ ಕ್ಲೀನ್ ಸ್ವೀಪ್ ಮಾಡಿದಂತೆಯೇ ಸರಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment