newsfirstkannada.com

ಟಿ20 ವಿಶ್ವಕಪ್.. ಕೊನೆಗೂ ಟೀಮ್​ ಇಂಡಿಯಾಗೆ ಪವರ್​ ಹಿಟ್ಟರ್​ ಎಂಟ್ರಿ; ಎದುರಾಳಿಗಳಿಗೆ ನಡುಕ!

Share :

Published April 30, 2024 at 7:32pm

    2024ರ ಇಂಡಿಯನ್ ಪ್ರೀಮಿಯರ್ ಲೀಗ್‌ ಬೆಸ್ಟ್​ ಕ್ಯಾಪ್ಟನ್​ ಎಂದರೆ ಸಂಜು ಸ್ಯಾಮ್ಸನ್​​

    ಬೆಸ್ಟ್​ ಕ್ಯಾಪ್ಟನ್ಸಿ ಜತೆಗೆ ಅತ್ಯುತ್ತಮ ಪ್ರದರ್ಶನ ನೀಡುತ್ತಿರೋ ಸಂಜು ಟಿ20 ವಿಶ್ವಕಪ್​ಗೆ!

    ಐಸಿಸಿ ಮೆಗಾ ಟೂರ್ನಿ ಟಿ20 ವಿಶ್ವಕಪ್​ ತಂಡದಲ್ಲಿ ಸಂಜು ಸ್ಯಾಮ್ಸನ್​​ ಅವರಿಗೆ ಸ್ಥಾನ

2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಬೆಸ್ಟ್​ ಕ್ಯಾಪ್ಟನ್​ ಎಂದರೆ ಸಂಜು ಸ್ಯಾಮ್ಸನ್​​. ಒಳ್ಳೆ ಕ್ಯಾಪ್ಟನ್ಸಿ ಜತೆಗೆ ಅತ್ಯುತ್ತಮ ಪ್ರದರ್ಶನ ನೀಡಿರೋ ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಅವರಿಗೆ ಟೀಮ್​ ಇಂಡಿಯಾದಲ್ಲಿ ಸ್ಥಾನ ಸಿಕ್ಕಿದೆ. ಅದು ಜೂನ್​ನಲ್ಲಿ ನಡೆಯಲಿರೋ ಐಸಿಸಿ ಮೆಗಾ ಟೂರ್ನಿ ಟಿ20 ವಿಶ್ವಕಪ್​ ತಂಡದಲ್ಲಿ ಸಂಜು ಸ್ಯಾಮ್ಸನ್​​ ಅವರಿಗೆ ಸ್ಥಾನ ಸಿಕ್ಕಿರುವುದು ಎಲ್ಲರಿಗೂ ಖುಷಿ ತಂದಿದೆ.

ಜೂನ್​ನಲ್ಲಿ ಯುಎಸ್ಎ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ನಡೆಯಲಿರೋ 2024ರ ಟಿ20 ವಿಶ್ವಕಪ್​ಗೆ ಬಲಿಷ್ಠ ಟೀಮ್​ ಇಂಡಿಯಾ ಅನೌನ್ಸ್​ ಆಗಿದೆ. ಇಂದು ಮಹತ್ವದ ಸಭೆ ನಡೆಸಿದ ಬಳಿಕ ಬಿಸಿಸಿಐ ತಂಡ ಘೋಷಿಸಿದೆ. ಐಪಿಎಲ್ 2024ರಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರೋ ಸಂಜು ಟಿ20 ವಿಶ್ವಕಪ್‌ ಭಾರತ ತಂಡದಲ್ಲಿ 2ನೇ ವಿಕೆಟ್ ಕೀಪರ್ ಸ್ಥಾನಕ್ಕೆ ಕೆಎಲ್ ರಾಹುಲ್ ಅವರನ್ನೇ ಹಿಂದಿಕ್ಕಿ ಸ್ಥಾನ ಪಡೆದಿದ್ದಾರೆ.

ಸಂಜು ಸ್ಯಾಮ್ಸನ್​ ನಾಯಕತ್ವದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಮೊದಲ 9 ಪಂದ್ಯಗಳಲ್ಲಿ 8 ಗೆಲುವು ಸಾಧಿಸಿದೆ. ಈ ಸೀಸನ್​ನಲ್ಲಿ ಸಂಜು ಆಡಿದ 9 ಪಂದ್ಯಗಳಿಂದ 385 ರನ್ ಗಳಿಸಿ ಆರೆಂಜ್ ಕ್ಯಾಪ್ ರೇಸ್​ನಲ್ಲಿ ಇದ್ದಾರೆ. ಇವರ ಆವರೇಜ್​​​ 77 ಮತ್ತು ಸ್ಟ್ರೈಕ್​ ರೇಟ್​​ 161ಕ್ಕೂ ಹೆಚ್ಚಿದೆ. ಇವರ ಶ್ರಮಕ್ಕೆ ತಕ್ಕ ಪ್ರತಿಫಲ ಇದಾಗಿದೆ.

2024ರ ಟಿ20 ವಿಶ್ವಕಪ್‌ಗೆ ಭಾರತ ತಂಡ ಪ್ರಕಟ

ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಯುಜ್ವೇಂದ್ರ ಚಾಹಲ್, ಅರ್ಶ್‌ದೀಪ್ ಸಿಂಗ್, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ.

ಇದನ್ನೂ ಓದಿ: ಟೀಮ್​ ಇಂಡಿಯಾದಲ್ಲಿ ರಿಂಕು ಸಿಂಗ್​ಗೂ ಭಾರೀ ಅನ್ಯಾಯ; ಆಕ್ರೋಶ ಹೊರಹಾಕಿದ ಫ್ಯಾನ್ಸ್​

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಟಿ20 ವಿಶ್ವಕಪ್.. ಕೊನೆಗೂ ಟೀಮ್​ ಇಂಡಿಯಾಗೆ ಪವರ್​ ಹಿಟ್ಟರ್​ ಎಂಟ್ರಿ; ಎದುರಾಳಿಗಳಿಗೆ ನಡುಕ!

https://newsfirstlive.com/wp-content/uploads/2024/04/Sanju-Samson_1.jpg

Load More