Advertisment

ಸಾರಾ ಮಾಡಿದ ಕೆಲಸ ಎಂಥದ್ದು ನೋಡಿದ್ರಾ! ವಿಡಿಯೋ ಮಾಡಬೇಡಿ ಎಂದಿದ್ಯಾಕೆ ಬಾಲಿವುಡ್​ ನಟಿ?

author-image
AS Harshith
Updated On
ಸಾರಾ ಮಾಡಿದ ಕೆಲಸ ಎಂಥದ್ದು ನೋಡಿದ್ರಾ! ವಿಡಿಯೋ ಮಾಡಬೇಡಿ ಎಂದಿದ್ಯಾಕೆ ಬಾಲಿವುಡ್​ ನಟಿ?
Advertisment
  • ನಟಿ ಸಾರಾ ಅಲಿ ಖಾನ್ ಕೆಲಸ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ ಫ್ಯಾನ್ಸ್​
  • ಶನಿ ದೇವಸ್ಥಾನದ ಹೊರಗೆ ಕುಳಿತ್ತಿದ್ದ ಬಡ ಜನರಿಗೆ ಆಹಾರ ವಿತರಿಸಿದ ನಟಿ
  • ವಿಡಿಯೋ ರೆಕಾರ್ಡ್​ ಮಾಡಬೇಡಿ ಎಂದು ಮನವಿ ಮಾಡಿದ ಸಾರಾ ಅಲಿ ಖಾನ್

ಬಾಲಿವುಡ್ ನಟಿ ಸಾರಾ ಅಲಿ ಖಾನ್ ಆಗಾಗ ಒಂದಲ್ಲಾ ಒಂದು ರೀತಿ ಜನರಿಗೆ ಸೇವೆ ಮಾಡುವಲ್ಲಿ ಹೆಸರಾಗಿದ್ದಾರೆ. ಅದರಂತೆ ಶನಿ ದೇವಸ್ಥಾನದ ಹೊರಗೆ ಕುಳಿತ್ತಿದ್ದ ಬಡ ಜನರಿಗೆ ನಟಿ ಸಾರಾ ಆಹಾರವನ್ನು ವಿತರಿಸಿದ್ದಾರೆ.

Advertisment

ಆಹಾರವನ್ನು ನೀಡುವಾಗ ವಿಡಿಯೋ ಮಾಡಲು ಬಂದ ಸಾರ್ವಜನಿಕರಿಗೆ ವಿಡಿಯೋ ಸೆರೆಹಿಡಿಯದಂತೆ ಮನವಿ ಮಾಡಿದ್ದಾರೆ. ಇನ್ನು ಹೀಗೆ ಆಹಾರವನ್ನು ನೀಡಿರುವ ದೃಶ್ಯ ಎಲ್ಲೆಡೆ ವೈರಲ್​ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗ್ತಿದೆ.

ಸಾರಾ ಮಹಾತ್ಕಾರ್ಯ ನೋಡಿ ಅನೇಕ ಅಭಿಮಾನಿಗಳು ಬಗೆ ಬಗೆಯ ಕಾಮೆಂಟ್​ ಬರೆದಿದ್ದಾರೆ. ನಟಿಯನ್ನು ಹಾಡಿ ಹೊಗಳಿದ್ದಾರೆ.

ಇದನ್ನೂ ಓದಿ: ದೇವರ ಹೆಸರಲ್ಲಿ ಹಣ ವಸೂಲಿ.. ₹10, ₹20 ನಡಿಯೋಲ್ಲ.. ಇವ್ರ ಡಿಮ್ಯಾಂಡ್​​ ಕೇಳಿದ್ರೆ ನೀವೂ ಶಾಕ್​ ಆಗ್ತೀರಾ!

Advertisment

ಇನ್ನು ಸಾರಾ ಸಿನಿಮಾ ವಿಚಾರಕ್ಕೆ ಬರೋದಾದ್ರೆ. ಇತ್ತೀಚೆಗರ ಈ ನಟಿ ‘ಮರ್ಡರ್​ ಮುಬಾರಕ್’​ ಮತ್ತು ‘ಏ ವತನ್​ ಮೇರೆ ವತನ್’​ ಸಿನಿಮಾದಲ್ಲಿ ಕಾಣಿಸಿಕೊಂಡರು. ಅನುರಾಗ್​ ಬಸು ಅವರ ಮೆಟ್ರೋ ಸಿನಿಮಾದಲ್ಲಿ ಸಾರಾ ಕಾಣಿಸಿಕೊಳ್ಳಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment