VIDEO: ಸರಿಗಮಪ ಸೀಸನ್ 20ರ ವಿನ್ನರ್ ದರ್ಶನ್ ನಾರಾಯಣ್; ರನ್ನರ್​ ಯಾರು?

author-image
Veena Gangani
Updated On
Sa Re Ga Ma Pa ಪ್ರಿಯರಿಗೆ ಗುಡ್​ನ್ಯೂಸ್​; ಜಬರ್ದಸ್ತ್ ಮನರಂಜನೆ ನೀಡಲು ಸಜ್ಜಾದ ಹೊಸ ಸೀಸನ್..!
Advertisment
  • ದರ್ಶನ್​ನ ಕೈ ಎತ್ತುವ ಮೂಲಕ ವಿನ್ನರ್ ಘೋಷಿಸಿದ ಹಂಸಲೇಖ
  • ದರ್ಶನ್, ರಮೇಶ್ ಹಾಗೂ ಶ್ರಾವ್ಯ ಮಧ್ಯೆ ನಡೆದಿತು ತೀವ್ರ ಪೈಪೋಟಿ
  • ಕನ್ನಡದ ದೊಡ್ಡ ರಿಯಾಲಿಟಿ ಶೋ ಸರಿಗಮಪ ಗ್ರ್ಯಾಂಡ್ ಫಿನಾಲೆ

ಕನ್ನಡ ಕಿರುತೆರೆಯ ದೊಡ್ಡ ರಿಯಾಲಿಟಿ ಶೋ ಸರಿಗಮಪ ಗ್ರ್ಯಾಂಡ್ ಫಿನಾಲೆ ಅದ್ಧೂರಿಯಾಗಿ ನಡೆದಿದೆ. ಸರಿಗಮಪ ಸೀಸನ್​ 20ರ ಟ್ರೋಫಿಯನ್ನು ಮೆಂಟರ್​ ಹೇಮಂತ್​ ಅವರ ತಂಡದ ದರ್ಶನ್ ನಾರಾಯಣ್ ಅವರು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

publive-image

ಇದನ್ನು ಓದಿ: ರಸ್ತೆಯಲ್ಲಿ ಮಲಗಿದ್ದ ಕರುವಿನ ಮೇಲೆ ಕಾರು ಹತ್ತಿಸಿ ವಿಕೃತಿ ಮೆರೆದ ಚಾಲಕ.. ಮೂಕ ಪ್ರಾಣಿ ನರಳಾಟ!

ಅದ್ಧೂರಿಯಾಗಿ ಜರುಗಿದ ಫಿನಾಲೆಗೆ ರಾಜೇಶ್​ ಕೃಷ್ಣನ್​ ಅವರು ಕಾರ್ಯಕ್ರಮಕ್ಕೆ ಮತ್ತೆ ಮರಳಿದ್ದರು. ಈ ಅದ್ಭುತ ಕ್ಷಣಗಳಿಗೆ ಸರಿಗಮಪ ವೇದಿಕೆ ಸಾಕ್ಷಿಯಾಗಿದೆ. ಮೊದಲ ರನ್ನರ್ ಅ​ಪ್​ ಸ್ಥಾನವನ್ನ ಸುಚೇತನ್​ ಅವರ ತಂಡದ ರಮೇಶ್​ ಲಂಬಾಣಿ ಅವರು ಅಲಂಕರಿಸಿದ್ದರು. ಸರಿಗಮಪ ಸೀಸನ್​ 20ರ ಎರಡನೇ ರನ್ನರ್‌ ಅಪ್​ ಆಗಿ ನಂದಿತಾ ಅವರ ಟೀಮ್​ನ ಡಾ. ಶ್ರಾವ್ಯ ಅವರು ಹೊರ ಹೊಮ್ಮಿದರು. ದರ್ಶನ್, ರಮೇಶ್ ಲಮಾಣಿ ಹಾಗೂ ಶ್ರಾವ್ಯ ನಡುವೆ ತೀವ್ರ ಪೈಪೋಟಿ ನಡೆದಿತ್ತು.

ಆದರೆ ಕೊನೆಗೆ ಸೀಸನ್​ 20ರ ಫಿನಾಲೆ ಟ್ರೋಫಿಯನ್ನು ದರ್ಶನ್ ಅವರ ಪಾಲಾಯಿತು. ರಮೇಶ್ ಮತ್ತು ದರ್ಶನ್ ಪಕ್ಕದಲ್ಲಿ ನಿಲ್ಲಿಸಿಕೊಂಡಿದ್ದ ಹಂಸಲೇಖ ದರ್ಶನ್​ ಅವರ ಕೈ ಎತ್ತುವ ಮೂಲಕ ಘೋಷಣೆ ಮಾಡಿದರು. ಒಟ್ಟಿನಲ್ಲಿ ಸರಿಗಮ ಫಿನಾಲೆ ಯಶಸ್ವಿಯಾಗಿ ಮುಕ್ತಾಯ ಕಂಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment