newsfirstkannada.com

VIDEO: ಸರಿಗಮಪ ಸೀಸನ್ 20ರ ವಿನ್ನರ್ ದರ್ಶನ್ ನಾರಾಯಣ್; ರನ್ನರ್​ ಯಾರು?

Share :

Published March 18, 2024 at 5:13pm

  ದರ್ಶನ್​ನ ಕೈ ಎತ್ತುವ ಮೂಲಕ ವಿನ್ನರ್ ಘೋಷಿಸಿದ ಹಂಸಲೇಖ

  ದರ್ಶನ್, ರಮೇಶ್ ಹಾಗೂ ಶ್ರಾವ್ಯ ಮಧ್ಯೆ ನಡೆದಿತು ತೀವ್ರ ಪೈಪೋಟಿ

  ಕನ್ನಡದ ದೊಡ್ಡ ರಿಯಾಲಿಟಿ ಶೋ ಸರಿಗಮಪ ಗ್ರ್ಯಾಂಡ್ ಫಿನಾಲೆ

ಕನ್ನಡ ಕಿರುತೆರೆಯ ದೊಡ್ಡ ರಿಯಾಲಿಟಿ ಶೋ ಸರಿಗಮಪ ಗ್ರ್ಯಾಂಡ್ ಫಿನಾಲೆ ಅದ್ಧೂರಿಯಾಗಿ ನಡೆದಿದೆ. ಸರಿಗಮಪ ಸೀಸನ್​ 20ರ ಟ್ರೋಫಿಯನ್ನು ಮೆಂಟರ್​ ಹೇಮಂತ್​ ಅವರ ತಂಡದ ದರ್ಶನ್ ನಾರಾಯಣ್ ಅವರು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ಇದನ್ನು ಓದಿ: ರಸ್ತೆಯಲ್ಲಿ ಮಲಗಿದ್ದ ಕರುವಿನ ಮೇಲೆ ಕಾರು ಹತ್ತಿಸಿ ವಿಕೃತಿ ಮೆರೆದ ಚಾಲಕ.. ಮೂಕ ಪ್ರಾಣಿ ನರಳಾಟ!

ಅದ್ಧೂರಿಯಾಗಿ ಜರುಗಿದ ಫಿನಾಲೆಗೆ ರಾಜೇಶ್​ ಕೃಷ್ಣನ್​ ಅವರು ಕಾರ್ಯಕ್ರಮಕ್ಕೆ ಮತ್ತೆ ಮರಳಿದ್ದರು. ಈ ಅದ್ಭುತ ಕ್ಷಣಗಳಿಗೆ ಸರಿಗಮಪ ವೇದಿಕೆ ಸಾಕ್ಷಿಯಾಗಿದೆ. ಮೊದಲ ರನ್ನರ್ ಅ​ಪ್​ ಸ್ಥಾನವನ್ನ ಸುಚೇತನ್​ ಅವರ ತಂಡದ ರಮೇಶ್​ ಲಂಬಾಣಿ ಅವರು ಅಲಂಕರಿಸಿದ್ದರು. ಸರಿಗಮಪ ಸೀಸನ್​ 20ರ ಎರಡನೇ ರನ್ನರ್‌ ಅಪ್​ ಆಗಿ ನಂದಿತಾ ಅವರ ಟೀಮ್​ನ ಡಾ. ಶ್ರಾವ್ಯ ಅವರು ಹೊರ ಹೊಮ್ಮಿದರು. ದರ್ಶನ್, ರಮೇಶ್ ಲಮಾಣಿ ಹಾಗೂ ಶ್ರಾವ್ಯ ನಡುವೆ ತೀವ್ರ ಪೈಪೋಟಿ ನಡೆದಿತ್ತು.

View this post on Instagram

A post shared by Darshan Narayan (@darshan__narayan)

ಆದರೆ ಕೊನೆಗೆ ಸೀಸನ್​ 20ರ ಫಿನಾಲೆ ಟ್ರೋಫಿಯನ್ನು ದರ್ಶನ್ ಅವರ ಪಾಲಾಯಿತು. ರಮೇಶ್ ಮತ್ತು ದರ್ಶನ್ ಪಕ್ಕದಲ್ಲಿ ನಿಲ್ಲಿಸಿಕೊಂಡಿದ್ದ ಹಂಸಲೇಖ ದರ್ಶನ್​ ಅವರ ಕೈ ಎತ್ತುವ ಮೂಲಕ ಘೋಷಣೆ ಮಾಡಿದರು. ಒಟ್ಟಿನಲ್ಲಿ ಸರಿಗಮ ಫಿನಾಲೆ ಯಶಸ್ವಿಯಾಗಿ ಮುಕ್ತಾಯ ಕಂಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಸರಿಗಮಪ ಸೀಸನ್ 20ರ ವಿನ್ನರ್ ದರ್ಶನ್ ನಾರಾಯಣ್; ರನ್ನರ್​ ಯಾರು?

https://newsfirstlive.com/wp-content/uploads/2024/03/sarigama.jpg

Load More