newsfirstkannada.com

VIDEO: ಬ್ಯಾಕ್ ಟು USA ಹಾರಿದ ಸರಿಗಮಪ ಪುಟ್ಟ ಗಾಯಕ ವಿರಾಟ್‌; ಹೇಗಿತ್ತು ಗ್ರ್ಯಾಂಡ್​ ವೆಲ್​ಕಮ್​​!

Share :

Published March 25, 2024 at 5:00pm

  ಆಡಿಷನ್​ನಲ್ಲೇ ಕಮಾಲ್​ ಮಾಡಿದ್ದ ಯುಎಸ್​​ಎ ಹಾಡುಗಾರ ವಿರಾಟ್

  ಮತ್ತೆ ಶಾಲೆಗೆ ವಾಪಸ್​ ಆಗೊರೋ ಸರಿಗಮಪ ಫೇಮಸ್​ ಸಿಂಗರ್​ ವಿರಾಟ್

  ಸರಿಗಮಪ ಪುಟ್ಟ ಗಾಯಕನನ್ನು ಗ್ರ್ಯಾಂಡ್​ ಆಗಿ ಬರಮಾಡಿಕೊಂಡ ಟೀಚರ್ಸ್

ಕನ್ನಡ ಕಿರುತೆರೆಯ ದೊಡ್ಡ ರಿಯಾಲಿಟಿ ಶೋ ಸರಿಗಮಪ ಗ್ರ್ಯಾಂಡ್ ಫಿನಾಲೆ ಅದ್ಧೂರಿಯಾಗಿ ನಡೆದಿದೆ. ಸರಿಗಮಪ ಸೀಸನ್​ 20 ಮುಗಿಸಿಕೊಂಡು ಒಳ್ಳೆ ಯಶಸ್ಸಿನ ಮೂಲಕ ಮುಕ್ತಾಯವಾಗಿದೆ. ಸರಿಗಮಪ ಸೀಸನ್ 20ರ ವಿಶೇಷತೆ ನಿಮ್ಮೆಲ್ಲರಿಗೂ ಗೊತ್ತಿರೋ ಹಾಗೇ ವಿಶ್ವದಾದ್ಯಂತ ಆಡಿಷನ್ ಮಾಡಲಾಗಿತ್ತು. ಈ ಆಡಿಷನ್​ಗೆ ಅದರಲ್ಲಿ ಯುಎಸ್​​ಎ ಹುಡುಗ ವಿರಾಟ್ ಆಯ್ಕೆ ಆಗಿ ಕನ್ನಡ ವೇದಿಕೆಯಲ್ಲಿ ಹಾಡಿ ಎಲ್ಲರ ಮನಸ್ಸನ್ನು ಗೆದ್ದುಕೊಂಡಿದ್ದ.

ಇದನ್ನೂ ಓದಿ: VIDEO: ಸರಿಗಮಪ ಸೀಸನ್ 20ರ ವಿನ್ನರ್ ದರ್ಶನ್ ನಾರಾಯಣ್; ರನ್ನರ್​ ಯಾರು?

ಇದೀಗ ಸರಿಗಮಪ ಮುಕ್ತಾಯದ ನಂತರ ವಿರಾಟ್ ಈಗ ಮತ್ತೆ ಯುಎಸ್​​ಎಗೆ ತೆರಳಿದ್ದಾನೆ. ಹೌದು, ತನ್ನ ಶಿಕ್ಷಣ ಮುಂದುವರೆಸೋದಕ್ಕೆ ಮತ್ತೆ ಯುಎಎಸ್​ಗೆ ರಿಟರ್ನ್ ಆಗಿದ್ದಾನೆ. ಪುಟ್ಟ ಪ್ರತಿಭೆ ಗಾಯಕನಿಗೆ ಶಾಲೆಯಲ್ಲಿ ಸಖತ್ ಗ್ರ್ಯಾಂಡ್ ಆಗಿ ವೆಲ್​ಕಮ್ ಮಾಡಿದ್ದಾರೆ. ಯುಎಸ್​ಎಗೆ ತೆರೆಳೋಕು ಮುಂಚೆ ಅಪ್ಪು ಸರ್​ ಅವರ ಮನೆಗೂ ಭೇಟಿ ನೀಡಿ ಅಶ್ವಿನಿ ಪುನೀತ್​ ರಾಜ್​ಕುಮಾರ್​ ಅವರ ಆಶಿರ್ವಾದ ಪಡೆದಿದ್ದ. ಈಗ ಮತ್ತೆ ವಿರಾಟ್ ತನ್ನ ಶಿಕ್ಷಣ ಮುಂದುವರೆಸುವುದಕ್ಕೆ ಫಾರೀನ್​ಗೆ ವಾಪಸ್ ಹೋಗಿದ್ದಾನೆ.

ಇನ್ನು, ಗಾಯಕ ವಿರಾಟ್ ಶಾಲೆಗೆ ವಾಪಸ್​ ಆಗಿದ್ದನ್ನು ಕಂಡ ಅಲ್ಲಿನ ಶಿಕ್ಷಕರು ಕೂಡ ಫುಲ್ ಖುಷಿಯಾಗಿದ್ದಾರೆ. ಭಾರತದಿಂದ ಮರಳಿ ತನ್ನ ಶಿಕ್ಷಣವನ್ನು ಕಂಪ್ಲೀಟ್ ಮಾಡಲು ಬಂದ ವಿರಾಟ್​ನನ್ನು​ ಪ್ರೀತಿಯ ಅಪ್ಪುಗೆಯಿಂದ ವೆಲಕಮ್ ಮಾಡಿದ್ದಾರೆ. ಸದ್ಯ ಗಾಯಕ ವಿರಾಟ್ ಈ ಫೋಟೋಗಳನ್ನು ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದೇ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿವೆ. ಈ ವಿಡಿಯೋ ನೋಡಿದ ನೆಟ್ಟಿಗರು ಪುಟ್ಟಣ್ಣ ನಿನ್ನ ಕನ್ನಡಾಭಿಮಾನಕ್ಕೆ ಜೈ, ನಿನ್ನ ಒಂದು ಕನ್ನಡ ಅಭಿಮಾನಕ್ಕೆ ನಾನು ತಲೆ ಬಾಗುವೆ, ನೀನೇ ಸೂಪರ್ ಸ್ಟಾರ್ ಕಂದ ಎಂದು ಕಾಮೆಂಟ್​ ಮಾಡಿದ್ದಾರೆ. ಸರಿಗಮಪ ಸೀಸನ್​ 20ರ ಟ್ರೋಫಿಯನ್ನು ಮೆಂಟರ್​ ಹೇಮಂತ್​ ಅವರ ತಂಡದ ದರ್ಶನ್ ನಾರಾಯಣ್ ಅವರು ತಮ್ಮ ಮುಡಿಗೇರಿಸಿಕೊಂಡಿದ್ದರು.ಎರಡನೇ ರನ್ನರ್‌ ಅಪ್​ ಆಗಿ ನಂದಿತಾ ಅವರ ಟೀಮ್​ನ ಡಾ. ಶ್ರಾವ್ಯ ಅವರು ಹೊರ ಹೊಮ್ಮಿತ್ತು. ದರ್ಶನ್, ರಮೇಶ್ ಲಮಾಣಿ ಹಾಗೂ ಶ್ರಾವ್ಯ ನಡುವೆ ತೀವ್ರ ಪೈಪೋಟಿ ನಡೆದಿತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಬ್ಯಾಕ್ ಟು USA ಹಾರಿದ ಸರಿಗಮಪ ಪುಟ್ಟ ಗಾಯಕ ವಿರಾಟ್‌; ಹೇಗಿತ್ತು ಗ್ರ್ಯಾಂಡ್​ ವೆಲ್​ಕಮ್​​!

https://newsfirstlive.com/wp-content/uploads/2024/03/sarigamapa-virat-2.jpg

Load More