/newsfirstlive-kannada/media/post_attachments/wp-content/uploads/2023/08/Mumbai-Police.jpg)
ಉತ್ತರಪ್ರದೇಶ ಒಂದಿಲ್ಲೊಂದು ಕ್ರೈಂ ಕಥೆಗೆ, ಎನ್ಕೌಂಟರ್ಗಳಿಗೆ ಆವಾಗ ಆವಾಗ ಸುದ್ದಿಯಾಗುತ್ತಲೇ ಇರುತ್ತದೆ. ಆದ್ರೆ ಸದ್ಯ ಯುಪಿ ರಾಜ್ಯದ ಬರೇಲಿ ಜಿಲ್ಲೆಯಲ್ಲಿ ನಡೆಯುತ್ತಿರುವ ನಿಗೂಢ ಕೊಲೆಗಳು ಎಂಥವರನ್ನೂ ಕೂಡ ಬೆಚ್ಚಿ ಬೀಳಿಸುತ್ತಿವೆ. ಬರೇಲಿಯಲ್ಲಿ ಸೀರಿಯಲ್ ಕಿಲ್ಲರ್ ಏನಾದ್ರೂ ಹುಟ್ಟಿಕೊಂಡನಾ ಎಂಬ ಸಂಶಯಗಳು ಮೂಡುತ್ತಿವೆ. ಯಾಕಂದ್ರೆ ಇದೇ ಜಿಲ್ಲೆಯಲ್ಲಿ ಕಳೆದ 14 ತಿಂಗಳಲ್ಲಿ 9 ಮಹಿಳೆಯರು ನಿಗೂಢವಾಗಿ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ಫಸ್ಟ್ ನೈಟ್‌ನಲ್ಲೇ ಮಚ್ಚಿನಿಂದ ಹೊಡೆದಾಟ.. ವಧು-ವರರ ಸಾವಿನ ಕೇಸ್‌ಗೆ ಹೊಸ ಟ್ವಿಸ್ಟ್; ಅಸಲಿಗೆ ಆಗಿದ್ದೇನು?
ಕಳೆದ 14 ತಿಂಗಳಲ್ಲಿ 45 ರಿಂದ 50 ವಯಸ್ಸಿನ ಹೆಣ್ಣು ಮಕ್ಕಳು 25 ಕಿಲೋ ಮೀಟರ್ ಒಳಗಡೆ ಹತ್ಯೆಯಾಗಿದ್ದಾರೆ. ಎರಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದೇ ರೀತಿಯಲ್ಲಿ ಹತ್ಯೆಯಾಗಿದ್ದನ್ನು ಕಂಡ ಪೊಲೀಸರು, ಆರಂಭಿಕ ತನಿಖೆಯಲ್ಲಿ ಇದು ಒಬ್ಬ ಸರಣಿ ಹಂತಕನ ಕೃತ್ಯವೇ ಎಂದು ಸಂಶಯ ಮೂಡಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಕೊನೆಗೂ ವಕ್ಫ್ ಬೋರ್ಡ್ ತಿದ್ದುಪಡೆ ಕಾಯ್ದೆ ಮಂಡನೆ.. ವಿರೋಧ ಯಾಕೆ? ಇದರ ಇತಿಹಾಸ ಏನು?
ಇನ್ನೂ ಒಂದು ಅಚ್ಚರಿಯಂದ್ರೆ, ಕೊಲೆಯಾಗಿರುವ 9 ಮಹಿಳೆಯರನ್ನು ಒಂದೇ ರೀತಿಯಲ್ಲಿ ಹತ್ಯೆ ಮಾಡಲಾಗಿದೆ. ನಡು ಮಧ್ಯಾಹ್ನವೇ ಅವರ ಕೊಲೆಯಾಗಿದ್ದು. ಎಲ್ಲರನ್ನೂ ಕೂಡ ಕತ್ತು ಹಿಸುಕಿಯೇ ಸಾಯಿಸಲಾಗಿದೆ. ಕೊಲೆಯಾದ ಎಲ್ಲಾ ಮಹಿಳೆಯರ ಬಟ್ಟೆಯನ್ನು ತೆಗೆಯಲಾಗಿದೆ ಆದ್ರೆ ಯಾರ ಮೇಲೂ ಕೂಡ ಅತ್ಯಾಚಾರ ನಡೆದಿಲ್ಲ. ಹೀಗೆ ಒಂದೇ ಮಾದರಿಯಲ್ಲಿ ಮಹಿಳೆಯರು ಹತ್ಯೆಯಾಗಿದ್ದನ್ನು ನೋಡಿದ್ರೆ ಇದು ಸರಣಿ ಹಂತಕನ ಕೆಲಸವೇ ಎಂಬ ಸಂಶಯ ಮೂಡಿದೆ ಎಂದು ಉತ್ತರಪ್ರದೇಶದ ಡಿಜಿಪಿ ಪ್ರಶಾಂತ್ ಕುಮಾರ್ ಹೇಳಿದ್ದಾರೆ.
"Saree Killer" In UP? 9 Women Strangled In 13 Months, Bodies Found In Fields https://t.co/gu8JMDIjYqpic.twitter.com/t7SgIKTkmH
— NDTV News feed (@ndtvfeed)
"Saree Killer" In UP? 9 Women Strangled In 13 Months, Bodies Found In Fields https://t.co/gu8JMDIjYqpic.twitter.com/t7SgIKTkmH
— NDTV News feed (@ndtvfeed) August 8, 2024
">August 8, 2024
ಕಳೆದ ಆರು ತಿಂಗಳಿನಿಂದ ಈ ಕೊಲೆ ಕೇಸ್ ಪ್ರಕರಣವನ್ನು ತನಿಖೆ ನಡೆಸಲಾಗುತ್ತಿದೆ. ಆದ್ರೆ ಕೊಲೆಗಾರ ಸುಳಿವು ಮಾತ್ರ ಸಿಕ್ಕಿಲ್ಲ. ಸದ್ಯ ಹಂತಕನ ಪತ್ತೆಗಾಗಿ ಬರೇಲಿ ಪೊಲೀಸರು ಜಾಲ ಬೀಸಿದ್ದಾರೆ. ಈ ರೀತಿಯ ಸರಣಿ ಹತ್ಯೆಗೆ ಮೊದಲ ಬಾರಿ ಯುಪಿ ಬರೇಲಿ ಜಿಲ್ಲೆ ಸಾಕ್ಷಿಯಾಗಿದ್ದು, ನಗರದ ಹೆಣ್ಣು ಮಕ್ಕಳು ಆಚೆ ಬರಲು ಭಯಭೀತಗೊಳ್ಳುವ ಸನ್ನಿವೇಶ ಉಂಟಾಗಿದೆ. ಈ ಕೊಲೆಗಳು 2015ರಲ್ಲಿ ಸಣ್ಣ ವಯಸ್ಸಿನ ಹೆಣ್ಣು ಮಕ್ಕಳನ್ನು ಅತ್ಯಾಚಾರ ನಡೆಸಿ ಕೊಲೆ ಮಾಡುತ್ತಿದ್ದ ರವೀಂದ್ರ ಕುಮಾರ್ ಪ್ರಕರಣವನ್ನು ನೆನಪಿಸುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ