ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾರತಕ್ಕೆ ಭರ್ಜರಿ ಜೋಡಿಗಳ ಶುಭಾರಂಭ
ಫ್ರಾನ್ಸ್ ವಿರುದ್ಧ ಗೆದ್ದು ಬೀಗಿದ ಭಾರತದ ಬ್ಯಾಡ್ಮಿಂಟನ್ ಜೋಡಿಗಳು
ಪುರುಷರ ಡಬಲ್ಸ್ ಬ್ಯಾಡ್ಮಿಂಟ್ನಲ್ಲಿ ಚಿರಾಗ್-ಸಾತ್ವಿಕ್ಗೆ ಮೊದಲ ಗೆಲುವು
ಪ್ಯಾರಿಸ್: ಫ್ರಾನ್ಸ್ ಅಂಗಳದಲ್ಲಿ ಭಾರತದ ಭರ್ಜರಿ ಜೋಡಿಗಳು ಗೆಲುವಿನ ಶುಭಾರಂಭ ಮಾಡಿದ್ದಾರೆ. ಪುರುಷರ ಡಬಲ್ಸ್ ಬ್ಯಾಡ್ಮಿಂಟ್ನಲ್ಲಿ ಚಿರಾಗ್ ಶೆಟ್ಟಿ ಹಾಗೂ ಸಾತ್ವಿಕ್ ಸೈರಾಜ್ ಜೋಡಿ ತಮ್ಮ ಮೊದಲ ಗೆಲುವನ್ನು ದಾಖಲಿಸಿದೆ. ಇಬ್ಬರ ಜೋಡಿಯ ಅಬ್ಬರದ ಆಟದ ಮುಂದೆ ಫ್ರಾನ್ಸ್ನ ಲುಕಾಸ್ ಕೋರ್ವಿ ಹಾಗೂ ರೋನನ್ ಲಾಬರ್ ಮಂಡಿಯೂರಿದ್ದಾರೆ. ಒಟ್ಟು 48 ನಿಮಿಷಗಳ ಕಾಲ ಸೆಣೆಸಾಡಿದ ಈ ಜೋಡಿ 21-17, 21-14 ಅಂತರದಲ್ಲಿ ಗೆಲುವು ಸಾಧಿಸಿದೆ.
ಇದನ್ನೂ ಓದಿ: 4,4,4,4,4,4,4,4,6,6; ಸೂರ್ಯ ಕುಮಾರ್ ಸಿಡಿಲಬ್ಬರದ ಬ್ಯಾಟಿಂಗ್.. ಮೊದಲ ಪಂದ್ಯದಲ್ಲೇ ಹೊಸ ಭರವಸೆ!
ಆರಂಭದಲ್ಲಿ ಫ್ರೆಂಚ್ ಜೋಡಿ ಭಾರತದ ಚಿರಾಗ್ ಹಾಗೂ ಸಾತ್ವಿಕ್ ವಿರುದ್ಧ ಹಿಡಿತ ಸಾಧಿಸಿದ್ದರಾದರೂ ಕೂಡ ಮುಂದೆ ಪುಟಿದೆದ್ದ ಚಿರಾಗ್ ಹಾಗೂ ಸಾತ್ವಿಕ್ ಒಂದೇ ಒಂದು ಪಾಯಿಂಟ್ಸ್ ಬಿಡದ ಹಾಗೆ ಅವರನ್ನು ಎದುರಿಸಿದರು. ಇಬ್ಬರ ಅಬ್ಬರದ ಮುಂದೆ ಫ್ರಾನ್ಸ್ ಜೋಡಿ ಕೊನೆಗೂ ಸೋಲೊಪ್ಪಿಕೊಂಡಿತು. ಒಂದು ಹಂತದಲ್ಲಿ ನಿರೀಕ್ಷೆಯಂತೆ ಶೆಟ್ಟಿ ಮತ್ತು ರೆಡ್ಡಿ ಜೋಡಿ ಬ್ಯಾಡ್ಮಿಂಟ್ನಲ್ಲಿ ಶುಭಾರಂಭ ಮಾಡಿದೆ. ಚಿನ್ನ ಗೆಲ್ಲಲು ಇನ್ನೂ ಅನೇಕ ಮೆಟ್ಟಿಲುಗಳಿವೆ. ಅವೆಲ್ಲವನ್ನೂ ಹೀಗೆಯೇ ಸರಳವಾಗಿ ದಾಟಿ ಚಿನ್ನವನ್ನು ಮುಡಿಗೇರಿಸಿಕೊಳ್ಳಲಿ ಅನ್ನೋದು ಪ್ರತಿಯೊಬ್ಬ ಭಾರತೀಯರ ಆಸೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ