Advertisment

ಮಿಸ್​​ ಯೂನಿವರ್ಸ್​ನಲ್ಲಿ ಫಸ್ಟ್​ ಟೈಮ್​​​ ಸೌದಿ ಅರೇಬಿಯಾ ಸ್ಪರ್ಧೆ; ಆ ಸುಂದರಿ ಯಾರು..?

author-image
Bheemappa
Updated On
ಮಿಸ್​​ ಯೂನಿವರ್ಸ್​ನಲ್ಲಿ ಫಸ್ಟ್​ ಟೈಮ್​​​ ಸೌದಿ ಅರೇಬಿಯಾ ಸ್ಪರ್ಧೆ; ಆ ಸುಂದರಿ ಯಾರು..?
Advertisment
  • ಮಿಸ್​ ಯುನಿವರ್ಸ್​ ಸೆ.28 ರಂದು ಯಾವ ದೇಶದಲ್ಲಿ ನಡೆಯುತ್ತೆ?
  • ದೇಶದಲ್ಲಿ ಕೆಲ ಬದಲಾವಣೆಗಳನ್ನು ತರುತ್ತಿರುವ ಸೌದಿ ಅರೇಬಿಯಾ
  • Miss Universeನಲ್ಲಿ ಸ್ಪರ್ಧಿಸುತ್ತಿರೋ ಆ ಮಹಿಳೆ ಹೆಸರೇನು?

ಇಸ್ಲಾಮಿಕ್ ರಾಷ್ಟ್ರ ಸೌದಿ ಅರೇಬಿಯಾದ ಆಡಳಿತವನ್ನು ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಅಲ್ ಸೌದ್ ಅವರು ವಹಿಸಿಕೊಂಡ ಮೇಲೆ ಆ ದೇಶದಲ್ಲಿ ಬದಲಾವಣೆಗಳು ಕೇಳಿಬರುತ್ತಿವೆ. ಮಹಿಳೆಯರಿಗಾಗಿ ಇರುವ ಕೆಲವೊಂದು ನಿಯಮಗಳನ್ನ ಸಡಿಲಿಕೆ ಮಾಡುತ್ತಿದ್ದಾರೆ ಎನ್ನಲಾಗ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಇದೇ ಮೊದಲ ಬಾರಿಗೆ ಸೌದಿ ಅರೇಬಿಯಾ ಯುವತಿಯೊಬ್ಬರು ಮಿಸ್​ ಯುನಿವರ್ಸ್​ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

Advertisment

publive-image

ಸೌದಿಯ ರೂಮಿ ಅಲ್ಕಹ್ತಾನಿ ಎನ್ನುವ ರೂಪದರ್ಶಿ ಇದೇ ಮೊದಲ ಬಾರಿಗೆ ಇಂಟರ್​ನ್ಯಾಷನಲ್​ ಸೌಂದರ್ಯ ಸ್ಪರ್ಧೆಯಲ್ಲಿ ದೇಶದ ಪರವಾಗಿ ಭಾಗವಹಿಸುತ್ತಿರುವುದಾಗಿ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಶೇರ್ ಮಾಡಿದ್ದಾರೆ. ಇದು ಸೌದಿ ಮಹಿಳೆಯರಲ್ಲಿ ಹೊಸ ಉತ್ಸಾಹಕ್ಕೆ ಕಾರಣವಾಗಿದೆ ಎನ್ನಬಹುದು. ಏಕೆಂದರೆ ಅಲ್ಲಿನ ಯಾವ ಮಹಿಳೆಯು ಇದುವರೆಗೂ ಯಾವುದೇ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿಲ್ಲ. ಆದರೆ ರೂಪದರ್ಶಿ ರೂಮಿ ಅಲ್ಕಹ್ತಾನಿ ಮೊಟ್ಟ ಮೊದಲಿಗೆ ಪಾಲ್ಗೊಳ್ಳುತ್ತಿರುವುದು ಅಲ್ಲಿನ ಯುವತಿ-ಮಹಿಳೆಯರಿಗೆ ಖುಷಿ ಸಂಗತಿನೇ ಆಗಿರುತ್ತೆ ಎಂದು ಹೇಳಲಾಗುತ್ತಿದೆ.

ಸೌದಿಯ ಈ ಬದಲಾವಣೆಯಿಂದ ಪ್ರಪಂಚವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದೆ. ವಿಶೇಷವಾಗಿ ಮಹಿಳೆಯರ ಮೇಲಿದ್ದ ಷರತ್ತು, ನಿರ್ಬಂಧಗಳನ್ನು ಈಗೀಗ ತೆಗೆದು ಹಾಕಲಾಗುತ್ತಿದೆ. ಮಹಿಳೆಯರಿಗೆ ವಾಹನ ಚಲಾಯಿಸಲು, ಗಂಡು-ಹೆಣ್ಣು ಒಟ್ಟಾಗಿ ಕಾರ್ಯಕ್ರಮಗಳಿಗೆ ಹಾಜರಾಗಲು ಮತ್ತು ಪುರುಷ ಮಾಲೀಕತ್ವವಿಲ್ಲದೆ ಪಾಸ್‌ಪೋರ್ಟ್‌ಗಳಿಗೆ ಅರ್ಜಿ ಹಾಕುವುದು ಸೇರಿ ಹಲವು ನಿಯಮಗಳನ್ನ ತೀರ ಸಡಿಲಿಕೆ ಮಾಡತ್ತಿದ್ದಾರೆ ಎಂದು ಕೇಳಿ ಬರುತ್ತಿವೆ.

ಇನ್ನು ಈ ಬಾರಿಯ ಮಿಸ್​ ಯುನಿವರ್ಸ್​ ಸ್ಪರ್ಧೆಯು ದಕ್ಷಿಣ ಅಮೆರಿಕದಲ್ಲಿ ಬರುವ ಮೆಕ್ಸಿಕೋದಲ್ಲಿ ನಡೆಯಲಿದೆ. 73ನೇ ಆವೃತ್ತಿಯ ಈ ಸ್ಪರ್ಧೆ 2024 ಸೆಪ್ಟೆಂಬರ್​ 28 ರಂದು ನಡೆಯಲಿದ್ದು ಇದರಲ್ಲಿ ಪರ್ಷಿಯಾ ಮತ್ತು ಸೌದಿ ಅರೇಬಿಯಾ ಇದೇ ಮೊದಲ ಬಾರಿಗೆ ಕಾಂಪಿಟೇಷನ್ ಮಾಡುತ್ತಿವೆ.

Advertisment

ಇದನ್ನೂ ಓದಿ: RCB vs PBKS; ಪಂಜಾಬ್​ ಸೋಲಿಗೆ ವಿರಾಟ್​ ಕೊಹ್ಲಿ ಕಾರಣನಾ.. ಸತ್ಯ ಬಾಯ್ಬಿಟ್ಟ ಗಬ್ಬರ್ ಶಿಖರ್ ಧವನ್​ -Video

publive-image

ಸದ್ಯ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವ ರೂಮಿ ಅಲ್ಕಹ್ತಾನಿ ಸೌದಿ ರಾಜಧಾನಿ ರಿಯಾದ್‌ನವರು. ಇವರು ಮಲೇಷ್ಯಾದಲ್ಲಿ ನಡೆದ ಮಿಸ್ ಅಂಡ್ ಮಿಸೆಸ್ ಗ್ಲೋಬಲ್ ಏಷ್ಯನ್‌ನಲ್ಲಿ ಇತ್ತೀಚಿನ ಭಾಗವಹಿಸಿದ್ದರು. ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ವಿಶ್ವದ ಜೊತೆ ಹಂಚಿಕೊಳ್ಳುವುದು ಮತ್ತು ಕಲಿಯುವುದು ಎಂದು ಹೇಳಿದ್ದಾರೆ. ಇವರು ಮಿಸ್ ಸೌದಿ ಕಿರೀಟ ಹೊಂದುವುದರ ಜೊತೆಗೆ ಮಿಸ್ ಮಿಡಲ್ ಈಸ್ಟ್, 2021 ಮಿಸ್ ಅರಬ್ ವರ್ಲ್ಡ್ ಪೀಸ್ ಮತ್ತು ಮಿಸ್ ವುಮನ್ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment