ಹಿರಿ ಜೀವಕ್ಕೆ ಬೆಳಕಾದ ಡ್ರೋನ್ ಪ್ರತಾಪ್‌.. ಮತ್ತೊಂದು ಭರವಸೆಗೆ ಸಾವಿತ್ರಮ್ಮ ಕಣ್ಣೀರು; ಏನಂದ್ರು?

author-image
admin
Updated On
ಹಿರಿ ಜೀವಕ್ಕೆ ಬೆಳಕಾದ ಡ್ರೋನ್ ಪ್ರತಾಪ್‌.. ಮತ್ತೊಂದು ಭರವಸೆಗೆ ಸಾವಿತ್ರಮ್ಮ ಕಣ್ಣೀರು; ಏನಂದ್ರು?
Advertisment
  • ಕೊಟ್ಟ ಮಾತಿನಂತೆ ಅಜ್ಜಿಗೆ ಸಹಾಯ ಮಾಡಿದ ಡ್ರೋನ್ ಪ್ರತಾಪ್‌
  • ಒಂದು ಕಣ್ಣಿನ ಆಪರೇಷನ್ ಯಶಸ್ವಿಯಾಗಿದ್ದಕ್ಕೆ ಸಾವಿತ್ರಮ್ಮ ಖುಷಿ
  • ಡ್ರೋನ್ ಪ್ರತಾಪ್ ಅಭಿಮಾನಿಯಿಂದ ಹಿರಿ ಜೀವದ ಬಾಳಲ್ಲಿ ಬೆಳಕು

ಬೆಂಗಳೂರು: ಬಿಗ್‌ಬಾಸ್‌ ಸೀಸನ್ 10ರ ರನ್ನರ್ ಅಪ್ ಡ್ರೋನ್ ಪ್ರತಾಪ್ ಅವರು ಕೊಟ್ಟ ಮಾತಿನಂತೆ ಗುಡಿಸಲ್ಲಿ ವಾಸಿಸುತ್ತಿರುವ ಹಿರಿ ಜೀವದ ಬದುಕಲ್ಲಿ ಬೆಳಕಾಗಿದ್ದಾರೆ. ಕಣ್ಣಿನ ಸಮಸ್ಯೆಯಿಂದ ಬಳಲುತ್ತಿದ್ದ ಸಾವಿತ್ರಮ್ಮನವರ ಕಣ್ಣಿನ ಆಪರೇಷನ್‌ಗೆ ಡ್ರೋನ್ ಪ್ರತಾಪ್‌ ನೆರವಾಗಿದ್ದರು. ಒಂದು ಕಣ್ಣಿನ ಆಪರೇಷನ್ ಯಶಸ್ವಿಯಾಗಿದ್ದು, ಇದೀಗ ಡ್ರೋನ್ ಪ್ರತಾಪ್ ಮತ್ತೊಂದು ಕಣ್ಣಿನ‌ ಆಪರೇಷನ್ ಭರವಸೆ ನೀಡಿದ್ದಾರೆ.

ಇದನ್ನೂ ಓದಿ: ಮತ್ತೆ ಹೃದಯ ಗೆದ್ದ ಡ್ರೋನ್ ಪ್ರತಾಪ್‌.. ಬಿಗ್‌ಬಾಸ್‌ ಮಾಜಿ ಸ್ಪರ್ಧಿ ಕಾರ್ಯಕ್ಕೆ ಮೆಚ್ಚುಗೆಯ ಮಹಾಪೂರ 

ಸಾವಿತ್ರಮ್ಮನವರ ಕಣ್ಣಿನ ಆಪರೇಷನ್ ಜೊತೆಗೆ ಡ್ರೋನ್ ಪ್ರತಾಪ್‌ ಮನೆಯನ್ನು ಕಟ್ಟಿಸಿಕೊಡುವ ಭರವಸೆ ಕೊಟ್ಟಿದ್ದಾರೆ. ಡ್ರೋನ್ ಪ್ರತಾಪ್ ಅವರ ಈ ಸಹಾಯ ನೊಂದ ಅಜ್ಜಿಯ ಬಾಳಲ್ಲಿ ಹೊಸ ಬೆಳಕು ಮೂಡುವಂತೆ ಮಾಡಿದೆ. ಪ್ರತಾಪ್ ಸಹಾಯ ನೆನೆದು ಸಾವಿತ್ರಮ್ಮ ಕಣ್ಣೀರು ಹಾಕಿದ್ದಾರೆ.

publive-image

ಸಾವಿತ್ರಮ್ಮ ಯಾರು?
ಡ್ರೋನ್ ಪ್ರತಾಪ್ ಅವರಿಂದ ಸಹಾಯ ಪಡೆದಿರುವ ಸಾವಿತ್ರಮ್ಮ ಕಳೆದ 45 ವರ್ಷಗಳಿಂದ‌ ಈ ಚಿಕ್ಕ ಗುಡಿಸಲಿನಲ್ಲೇ ವಾಸ ಮಾಡುತ್ತಿದ್ದಾರೆ. ಏಕಾಂಗಿಯಾಗಿ ವಾಸ ಮಾಡ್ತಿರುವ ಸಾವಿತ್ರಮ್ಮನವರಿಗೆ ಈಗ 87 ವರ್ಷ. ಬೆಂಗಳೂರಿನ ಕುರುಬರಳ್ಳಿಯ ಶಂಕರಮಠದ ಬಳಿ ಅಜ್ಜಿಯ ವಾಸಿಸುತ್ತಿದ್ದಾರೆ.

ಇದನ್ನೂ ಓದಿ:ಲೋಕವೇ ಮೆಚ್ಚುವ ಕಾರ್ಯಕ್ಕೆ ಮುಂದಾದ ಡ್ರೋನ್​ ಪ್ರತಾಪ್​.. ಏನದು?

ಡ್ರೋನ್ ಪ್ರತಾಪ್‌ ಪರಿಚಯ ಹೇಗಾಯ್ತು?
ಸಾವಿತ್ರಮ್ಮ ಗಂಡನನ್ನು ಕಳೆದುಕೊಂಡು ಮಗನ ಜೊತೆ ವಾಸ ಮಾಡುತ್ತಿದ್ದರು. ಆದರೆ ಮಗನು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಚಿಕ್ಕ ಗುಡಿಸಲಿನಲ್ಲಿ ಏಕಾಂಗಿಯಾಗಿ ಅಜ್ಜಿ ವಾಸ ಮಾಡುತ್ತಿದ್ದಾರೆ. ಅಜ್ಜಿ ಕಣ್ಣಿಗೆ ಕೈ ಇಟ್ಟುಕೊಂಡು ನಡೆದುಕೊಂಡು ಹೋಗುವಾಗ ಸ್ಥಳೀಯ ರಝಾಕ್ ಕಣ್ಣಿಗೆ ಬಿದ್ದಿದ್ದಾರೆ. ಮಸಾಲೆ ಐಟಮ್‌ಗಳನ್ನ ಮನೆ, ಮನೆಗೆ ಮಾರಾಟ ಮಾಡ್ತಿದ್ದ ರಝಾಕ್ ಈ ಅಜ್ಜಿಯನ್ನ ನೋಡಿ ಅಜ್ಜಿಯ ಬಳಿ ವಿಚಾರಿಸಿದ್ದಾರೆ.

publive-image

ಅಜ್ಜಿಗೆ ಸಹಾಯ ಮಾಡಿದ ರಝಾಕ್ ಡ್ರೋನ್ ಪ್ರತಾಪ್‌ನ ಅಪ್ಪಟ ಅಭಿಮಾನಿ. ಡ್ರೋನ್ ಪ್ರತಾಪ್ ಬಿಗ್ ಬಾಸ್‌ನಿಂದ ಎಲಿಮಿನೇಟ್ ಆಗಿದ್ದಕ್ಕೆ ಅಂದು ಕೋಪದಲ್ಲಿ ತನ್ನ ಮೊಬೈಲ್ ಅನ್ನೇ ಹೊಡೆದಾಕ್ಕಿದ್ದರಂತೆ. ಅಜ್ಜಿಯ ಸ್ಥಿತಿ ಕಂಡು ಡ್ರೋನ್ ಪ್ರತಾಪ್‌ಗೆ ಮಾಹಿತಿ ನೀಡಿದ್ದಾರೆ.

ಅಜ್ಜಿಯ ಸ್ಥಿತಿ ಕಂಡು ಡ್ರೋನ್ ಪ್ರತಾಪ್ ಅವರು ಕಣ್ಣಿನ ಆಪರೇಷನ್‌ಗೆ ಸಹಾಯ ಮಾಡಿದ್ದಾರೆ. ₹1200 ಪೆನ್ಷನ್ ಹಣದಿಂದಲೇ ಬದುಕುತ್ತಿರುವ ಅಜ್ಜಿಗೆ ಮನೆ ಕಟ್ಟಿಸಿಕೊಡುವ ಭರವಸೆ ಸಿಕ್ಕಿದೆ ಹಿರಿ ಜೀವ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment