/newsfirstlive-kannada/media/post_attachments/wp-content/uploads/2024/07/School.jpg)
ಶಾಲೆ ಎಂದರೆ ಜ್ಞಾನ ದೇಗುಲ. ವಿದ್ಯಾರ್ಥಿಗಳಿಗೆ ವಿದ್ಯೆಯ ಜೊತೆಗೆ ಬುದ್ಧಿ ಮತ್ತು ಅವರ ಭವಿಷ್ಯವನ್ನು ರೂಪಿಸುವ ಮಂದಿರ. ಆದರೀಗ ಕಾಲ ಬದಲಾಗಿದೆ. ಶಾಲೆಗಳಲ್ಲಿ ಕೆಲವು ಶಿಕ್ಷಕರು ಅಸಭ್ಯವಾಗಿ ವರ್ತಿಸುವ ಸಂಗತಿಗಳು ಹೊರಬರುತ್ತಿರುತ್ತವೆ. ಅದರಂತೆಯೇ ಮುಖ್ಯೋಪಾಧ್ಯಾರು ಮತ್ತು ಶಿಕ್ಷಕಿಯೊಬ್ಬರು ಶಾಲೆಯ ಅಸಭ್ಯವಾಗಿ ವರ್ತಿಸಿದ ಘಟನೆಯೊಂದು ದೃಶ್ಯ ಸಮೇತ ಬೆಳಕಿಗೆ ಬಂದಿದೆ.
ಉತ್ತರ ಪ್ರದೇಶದ ಜೌನ್ಪುರದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಅಲ್ಲಿನ ಕಾನ್ವೆಂಟ್ ಶಾಲೆಯೊಂದರಲ್ಲಿ ಶಿಕ್ಷಕಿ ಮತ್ತು ಮುಖ್ಯೋಪಾಧ್ಯರು ಶಾಲೆಯ ಕೋಣೆಯೊಂದರಲ್ಲಿ ಕಿಸ್ ಮಾಡಿದ್ದಾರೆ. ಈ ದೃಶ್ಯ ಕ್ಯಾಮೆರಾಗೆ ಸೆರೆ ಸಿಕ್ಕಿದ್ದು, ಈ ಘಟನೆಯಿಂದ ಶಿಕ್ಷಕಿ ಮತ್ತು ಹೆಡ್ ಮಾಸ್ಟರ್ ಎಂಬ ಗೌರವಾನ್ವಿತ ಸ್ಥಾನಗಳಿಗೆ ಕಳಂಕ ತಂದಿದೆ.
ಇದನ್ನೂ ಓದಿ: ಅಂಬಾನಿ ಮಗನ ಅದ್ದೂರಿ ಮದುವೆ.. 1 ವೆಡ್ಡಿಂಗ್ ಕಾರ್ಡ್ಗೆ ಖರ್ಚು ಮಾಡಿದ ಹಣ ಎಷ್ಟು ಗೊತ್ತಾ?
ಶಿಕ್ಷಕಿ ಮತ್ತು ಹೆಡ್ ಮಾಸ್ಟರ್ನ ಅಸಭ್ಯ ವರ್ತನೆಯ ವಿಡಿಯೋ ಉತ್ತರ ಪ್ರದೇಶದಾದ್ಯಂತ ಹರಿದಾಡಿದ್ದು, ಸಂಚಲನ ಮೂಡಿಸಿದೆ. ಅದರಲ್ಲೂ ದೃಶ್ಯದಲ್ಲಿ ಶಾಲಾ ಕೊಠಡಿಯ ಮೇಲೆ ಗ್ರೂಪ್ ಕ್ಯಾಪ್ಟನ್ ಅಭಿನಂದನ್ ವರ್ತಮಾನ್, ಅಟಲ್ ಬಿಹಾರಿ ವಾಜಪೇಯಿ, ಮಹರಾಣಾ ಪ್ರತಾಪ್ ಮತ್ತು ಭಗತ್ ಸಿಂಗ್ ಮುಂತಾದ ಮಹಾನ್ ವ್ಯಕ್ತಿಗಳ ಚಿತ್ರಗಳು ಇರುವುದು ದೃಶ್ಯದಲ್ಲಿ ಗೋಚರಿಸಿದೆ.
ಇದನ್ನೂ ಓದಿ: ನಟ ದರ್ಶನ್ ಹಿಂದೆ ಪವಿತ್ರಾಗೌಡ ಬಿದ್ದಿದ್ದೇಕೆ? ಸ್ಫೋಟಕ ಸತ್ಯ ಬಿಚ್ಚಿಟ್ಟ ಲೇಡಿ ಡೈರೆಕ್ಟರ್!
ಶಿಕ್ಷಕಿ ಮತ್ತು ಹೆಡ್ಮಾಸ್ಟರ್ ಕಿಸ್ಸಿಂಗ್ ವಿಡಿಯೋ 7 ನಿಮಿಷಗಳಿಂದ ಕೂಡಿದ್ದು, ಸಾಮಾಜಿಕ ಜಾಲತಾಣದಲ್ಲೂ ಅದು ಹರಿದಾಡಿದೆ. ಇದರಿಂದಾಗಿ ಶಾಲೆಗೆ ಕೆಟ್ಟ ಹೆಸರು ಬಂದಿದೆ. ಇದಲ್ಲದೆ ಶಿಕ್ಷಕಿ ಮತ್ತು ಹೆಡ್ಮಾಸ್ಟರ್ ನಡುವೆ ಅಕ್ರಮ ಸಂಬಂಧವಿತ್ತು ಎಂಬುದು ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಡೆಂಘೀ ಬೆನ್ನಲ್ಲೇ ಡೇಂಜರಸ್ ವೈರಸ್ ಎಂಟ್ರಿ.. ಆರೋಗ್ಯ ಕಾಪಾಡಿಕೊಳ್ಳಲು ಏನು ಮಾಡಬೇಕು?
ಇನ್ನು ಈ ಘಟನೆಗೆ ಸಂಬಂಧಿಸಿ ಪ್ರಕರಣ ದಾಖಲಾಗಿದೆಯೇ? ಪೊಲಿಸರು ಕ್ರಮ ಕೈಗೊಂಡಿದ್ದಾರೆಯೇ? ಎಂಬ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಎಫ್ಐಆರ್ ದಾಖಲಾಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ