Advertisment

2ನೇ ಮದುವೆಯಾಗಲು ರೆಡಿಯಾಗಿದ್ದ ಭೂಪನಿಗೆ ಶಾಕ್​: ಚರ್ಚ್​ಗೆ ನುಗ್ಗಿದ ಮೊದಲನೇ ಹೆಂಡ್ತಿ ಮಾಡಿದ್ದೇನು?

author-image
Gopal Kulkarni
Updated On
2ನೇ ಮದುವೆಯಾಗಲು ರೆಡಿಯಾಗಿದ್ದ ಭೂಪನಿಗೆ ಶಾಕ್​: ಚರ್ಚ್​ಗೆ ನುಗ್ಗಿದ ಮೊದಲನೇ ಹೆಂಡ್ತಿ ಮಾಡಿದ್ದೇನು?
Advertisment
  • ಎರಡನೇ ಮದುವೆಯಾಗುತ್ತಿದ್ದ ವೇಳೆಯೇ ಚರ್ಚ್​ಗೆ ನುಗ್ಗಿದ ಪ್ರಥಮ ಪತ್ನಿ
  • ಚರ್ಚ್​ನಲ್ಲಿಯೇ ವಾಗ್ವಾದ, ಕೈ ಕೈ ಮಿಲಾಯಿಸುವ ಹಂತಕ್ಕೆ ಹೋದ ಜಗಳ
  • ಡಿವೋರ್ಸ್ ಕೊಟ್ಟಿಲ್ಲ ಎಂದ ಪತ್ನಿ, ಕೊಟ್ಟಿದ್ದೇನೆ ಎನ್ನುತ್ತಿರುವ ಪತಿರಾಯ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರದ ಕ್ರೈಸ್ಟ್ ಚರ್ಚ್​​ನಲ್ಲಿ ಇಂದು ಭಾರೀ ದೊಡ್ಡ ಕೋಲಾಹಲವುಂಟಾಗಿದೆ. ಈಗಾಗಲೇ ಮದುವೆಯಾಗಿದ್ದ ಮೋಹನ್ ಕಾಂತ್ ಅನ್ನೋ ವ್ಯಕ್ತಿ ಮತ್ತೊಂದು ಮದುವೆಗೆ ರೆಡಿಯಾಗಿ ಸೂಟು ಬೂಟು ಹಾಕಿಕೊಂಡು ಮಿರಿ ಮಿರಿ ಮಿಂಚುತ್ತಿದ್ದ. ಇದೇ ವೇಳೆಗೆ ಚರ್ಚ್​ಗೆ ಎಂಟ್ರಿ ಕೊಟ್ಲು ನೋಡಿ ಅವನ ಮೊದಲನೇ ಪತ್ನಿ ಮತ್ತು ಆಕೆಯ ಅಕ್ಕ, ನೋಹನ್​ ಕಾಂತ್​ನ ಮುಖದಲ್ಲಿ ಬೆವರಾಡತೊಡಗಿತು.

Advertisment

publive-image

ಇದನ್ನೂ ಓದಿ:60ರ ಅರ್ಚಕನ ಜೊತೆ 20 ವರ್ಷದ ಯುವತಿ ಚಾಟಿಂಗ್.. ಆನ್​ಲೈನ್​ನಲ್ಲೇ ಅಜ್ಜನಿಗೆ ಲಕ್ಷ, ಲಕ್ಷ ಪಂಗನಾಮ!

ಕ್ರೈಸ್ಟ್​ ಚರ್ಚ್​​ಗೆ ನುಗ್ಗಿದ ಮೋಹನ್ ಕಾಂತ್​ನ ಮೊದಲ ಪತ್ನಿ ಹಾಗೂ ಆಕೆಯ ಅಕ್ಕ ದೊಡ್ಡ ಗಲಾಟೆಯನ್ನೇ ಮಾಡಿದ್ದಾರೆ. ಪರಿಸ್ಥಿತಿ ಕೈ ಕೈ ಮಿಲಾಯಿಸುವ ಹಂತಕ್ಕೂ ಹೋಗಿದೆ. ವಾದ ವಾಗ್ವಾದಗಳು ಜೋರಾಗಿಯೇ ನಡೆದವು. ವಿಚ್ಛೇದನ ನೀಡದೇ ಎರಡನೇ ಮದುವೆಗೆ ತಯಾರಾಗಿದ್ದ ಮೋಹನ್ ಕಾಂತ್ ವಿರುದ್ಧ ಆತನ ಪತ್ನಿ ರಶ್ಮಿ ಹಾಗೀ ರೋಸಿ ಸಿಡಿದೆದ್ದರು. 2018ರಲ್ಲಿಯೇ ಮದುವೆಯಾಗಿದ್ದರು. ಈಗ ಮೊದಲ ಪತ್ನಿಗೆ ಟಾಟಾ ಹೇಳಿ, ಮತ್ತೊಂದು ಪತ್ನಿಯ ಜೊತೆ ಕೈ ಬೆಸೆಯಲು ರೆಡಿಯಾಗಿದ್ದ ಮೋಹನ್ ಕಾಂತ್.

publive-image

ಇದನ್ನೂ ಓದಿ:ಮಂಡ್ಯದಲ್ಲಿ ಗಂಡ, ಹೆಂಡತಿ ದುರಂತ ಅಂತ್ಯ.. ಒಂದು ವರ್ಷದ ಹೆಣ್ಣು ಮಗು ಅನಾಥ; ಅಸಲಿಗೆ ಆಗಿದ್ದೇನು?

Advertisment

ಮೋಹನ್ ಕಾಂತ್ ಎರಡನೇ ಮದುವೆ ಆಗಲು ಸಜ್ಜಾಗಿದ್ದಕ್ಕೆ ಅಸಲಿ ಕಾರಣ ಇಬ್ಬರ ನಡುವೆ ನಿತ್ಯ ನಡೆಯುತ್ತಿದ್ದ ಜಗಳ, ಇತ್ತೀಚೆಗೆ ಇಬ್ಬರೂ ಜಗಳ ಆಡಿಕೊಂಡು ದೂರವಾಗಿದ್ದರು. ಮೋಃಹನ್ ಕಾಂತ್ ಹೇಳುವ ಪ್ರಕಾರ ನಾನು ಕೋರ್ಟ್​ಗೆ ಹೋಗಿ ಡಿವೋರ್ಸ್ ಪಡೆದಿದ್ದೇನೆ ಅಂತಿದ್ದಾರೆ. ಆದ್ರೆ ಏಕಾಏಕಿ ಚರ್ಚ್​ಗೆ ನುಗ್ಗಿದ ರಶ್ಮಿ ಹಾಗೂ ಆಕೆಯ ಅಕ್ಕ ರೋಸಿ ವಿಚ್ಛೇಧನ ಪಡೆಯದೇ ಈ ಮದುವೆ ಮಾಡಿಕೊಳ್ಳುತ್ತಿದ್ದಾನೆ ಎಂದು ವಾದಿಸಿದ್ದಾರೆ.

ಸದ್ಯ ಸ್ಥಳಕ್ಕೆ ಆಗಮಿಸಿದ ಪೊಲೀಸರು ರಶ್ಮಿ ಹಾಗೂ ರೋಸಿ ಯನ್ನ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.. ಈ ಬಗ್ಗೆ ಪ್ರತಿಕ್ರಿಯಿಸಿರುವ ರಶ್ಮಿ ತನಗೆ ಗೊತ್ತಿಲ್ಲದೆ ಅದೇಗೆ ಡಿವೋರ್ಸ್ ತೆಗೆದುಕೊಂಡಿದ್ದಾರೊ ಗೊತ್ತಿಲ್ಲ,, ನಾನು ಬೆಂಗಳೂರಿನಲ್ಲಿ ಆತನ ವಿರುದ್ದ ಕೇಸ್ ದಾಖಲಿಸಿದ್ದೇನೆ, ವಿಷಯ ಕೋರ್ಟ್ ನಲ್ಲಿದ್ದರೂ ಆತ ಮದುವೆಯಾಗಲು ಹೊರಟಿದ್ದಾನೆ, ತನಗೆ ನ್ಯಾಯ ಕೊಡಿಸಿ ಅಂತ ಕಣ್ಣಿರು ಹಾಕಿದ್ದಾಳೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Advertisment
Advertisment
Advertisment