Advertisment

BIGG BOSS ಹೊಸ ಪ್ರೊಮೋದಲ್ಲಿ ಅಡಗಿದೆ ಗುಟ್ಟು.. ಆ ಫೋಟೋದಲ್ಲಿರೋ ಸೆಲೆಬ್ರಿಟಿಗಳು ಯಾರು?

author-image
Veena Gangani
Updated On
ಬಿಗ್‌ ಬಾಸ್ ಮನೆಗೆ ಮೊದಲು ಬಲಗಾಲಿಟ್ಟು ಹೋಗೋರು ಇವರೇನಾ? BBK11 ಫಸ್ಟ್ ಲಿಸ್ಟ್‌ನ ಸೀಕ್ರೆಟ್ ಏನು?
Advertisment
  • ವೀಕ್ಷಕರು ಗೆಸ್ ಮಾಡಿರೋ ಹೆಸರುಗಳು ಯಾವುವು?​
  • ಬಿಗ್​ಬಾಸ್​ ಸೀಸನ್​ 11ರ ಆರಂಭಕ್ಕೆ ಕ್ಷಣಗಣನೆ ಶುರು
  • ಬಿಗ್​ ಮನೆಗೆ ಕಾಲಿಡೋ ಸೆಲೆಬ್ರಿಟಿಗಳು ಯಾರು ಗೊತ್ತಾ?

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಗ್ರ್ಯಾಂಡ್​ ಓಪನಿಂಗ್​​ಗೆ ಇನ್ನೂ ಒಂದು ದಿನ ಮಾತ್ರ ಬಾಕಿ ಉಳಿದಿದೆ. ಹೀಗಾಗಿ ವೀಕ್ಷಕರಲ್ಲಿ ಬಿಗ್​ಬಾಸ್​ ಬಗ್ಗೆ ಮತ್ತಷ್ಟು ಕುತೂಹಲ ಹೆಚ್ಚಾಗಿದೆ. ಈ ಬಾರಿಯ ಬಿಗ್​ಬಾಸ್​ಗೆ ಸೆಲೆಬ್ರಿಟಿಗಳು ಎಂಟ್ರಿ ಕೊಡಲಿದ್ದಾರೆ ಅಂತ ಒಂದು ಕಣ್ಣು ಇಟ್ಟಿದ್ದಾರೆ.

Advertisment

ಇದನ್ನೂ ಓದಿ: BBK11: ವೀಕ್ಷಕರಿಗೆ ಗುಡ್​​ನ್ಯೂಸ್​; ಇಂದು ಬಿಗ್​ ಅಪ್ಡೇಟ್​ ಹೊತ್ತು ತರ್ತಿದೆ ಬಿಗ್​ಬಾಸ್​ ತಂಡ.. ಏನದು?

publive-image

ಹೌದು, ಬಿಗ್​ಬಾಸ್​ ಸೀಸನ್​ 11ರ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಇದೇ ಭಾನುವಾರ ಬಿಗ್​ಬಾಸ್​ ಅಸಲಿ ಕಥೆ ರಿವೀಲ್​ ಆಗ್ತಿದೆ. ಈ ನಡುವೆ ಬಿಗ್​ ಮನೆಗೆ ಕಾಲಿಡೋ ಆ ಸೆಲೆಬ್ರಿಟಿಗಳು ಯಾರು? ಅನ್ನೋದು ಸದ್ಯದ ಕೌತುಕ. ಇದಕ್ಕೂ ರಾಜಾರಾಣಿ ಶೋನಲ್ಲಿ ಶನಿವಾರ ಉತ್ತರ ಸಿಗಲಿದೆ. ಆದ್ರೇ ಈಗ ಎಲ್ಲರ ಚಿತ್ತ ಇರೋದು ಆ ಪ್ರೋಮೋ ಮೇಲೆ. ಹೌದು, ಹೊಸ ಪ್ರೊಮೋ ರಿಲೀಸ್​ ಆಗಿದ್ದು, ಅದರಲ್ಲಿ ಕೆಲವು ಫೋಟೋಗಳನ್ನ ತೋರಿಸಲಾಗಿದೆ.

publive-image

ಆದರೆ ಆ ಫೋಟೋಗಳು ಅಷ್ಟೊಂದು ಸ್ಪಷ್ಟವಾಗಿಲ್ಲ. ಬ್ಲರ್​ ಆಗಿದ್ದು, ಯಾರು? ಯಾರು ಇರಬಹುದು ಆ ಸ್ಪರ್ಧಿಗಳು ಅಂತ ವೀಕ್ಷಕರಲ್ಲಿ ಕುತೂಹಲ ಹೆಚ್ಚಿಸಿದೆ. ಆ ಫೋಟೋಗಳನ್ನ ಡೀಕೋಡ್ ಮಾಡೋಕೆ ಹಲವರು ಯತ್ನಿಸಿದ್ದಾರೆ. ಆ ಬ್ಲರ್​ ಫೋಟೋಗಳಲ್ಲಿ ವೀಕ್ಷಕರು ಕೆಲವೊಂದು ಸ್ಟಾರ್​ ಸೆಲೆಬ್ರಿಟಿಗಳ ಹೆಸರನ್ನು ಗೆಸ್​ ಮಾಡಿದ್ದಾರೆ. ನಿರ್ದೇಶಕ ಎಸ್​ ನಾರಾಯಣ ಅವರ ಮಗ ನಟ ಪಂಕಜ್, ಸತ್ಯ ಸೀರಿಯಲ್​ ಖ್ಯಾತಿಯ ನಟಿ ಗೌತಮಿ ಜಾದವ್​, ವಜ್ರಕಾಯ ಸಿನಿಮಾ ಖ್ಯಾತಿಯ ನಟಿ ನಭಾ ನಟೇಶ್​​, ಕನ್ನಡತಿ ಸೀರಿಯಲ್​ ಖ್ಯಾತಿಯ ಕಿರಣ್‌ ರಾಜ್‌, ರೀಲ್ಸ್​ ಮೂಲಕ ಖ್ಯಾತಿಯ ಪಡೆದಿರೋ ಭೂಮಿಕಾ ಬಸವರಾಜ್​, ಅಂತರಪಟ ಖ್ಯಾತಿಯ ನಟಿ ತನ್ವಿ ಬಾಲರಾಜ್​ ಈ ಬಾರಿ ಬಿಗ್‌ಬಾಸ್‌ ಹೋಗ್ತಾರೆ ಅನ್ನೋ ಪೋಸ್ಟರ್‌ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಇದಕ್ಕೆ ಮೂಲ ಕಾರಣ, ಕಲರ್ಸ್ ಕನ್ನಡದವರೇ ಬ್ಲರ್ ಮಾಡಿರೋ ಫೋಟೋಗಳು.

Advertisment

publive-image

ನ್ಯೂಸ್‌ಫಸ್ಟ್ ಕಿರಣ್‌ರಾಜ್‌ ಅವರನ್ನ ಸಂಪರ್ಕ ಮಾಡಿದಾಗ, ನನ್ನ ಫೋಟೋ ಬಳಕೆಯಾಗಿರೋದು ನಿಜ. ಆದ್ರೆ, ನಾನು ಬಿಗ್‌ಬಾಸ್‌ಗೆ ಹೋಗ್ತಿಲ್ಲ ಅಂತಾ ಸ್ಪಷ್ಟವಾಗಿ ಹೇಳಿದ್ದಾರೆ. ಸೂಪರ್‌ ಸ್ಟಾರ್ ಭಾವನಾ ಮೆನನ್‌ ಹೋಗ್ತಿದ್ದಾರೋ ಅನ್ನೋ ಪ್ರಶ್ನೆಗೂ ಇನ್ನೂ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಇನ್ನೊಂದೆಡೆ, ಜನರ ತಲೆಗೆ ಹುಳು ಬಿಡೋಕೆ ಟೀಮ್ ಈ ರೀತಿ ಮಾಡಿತಾ ಅನ್ನೋ ಚರ್ಚೆಗಳು ನಡೆಯುತ್ತಿವೆ. ಏನೇ ಹೇಳಿ ಅಂತಿಮ ಸ್ಪರ್ಧಿಗಳು ಯಾಱರು ಅನ್ನೋ ಬಗ್ಗೆ ಸದ್ಯಕ್ಕಂತೂ ಕ್ಲಾರಿಟಿ ಇಲ್ಲ. ಬಹುಶಃ ನಾಳೆ ಸ್ಪಷ್ಟನೆ ಸಿಗಬಹುದು. ರಾಜಾರಾಣಿಯಲ್ಲಿ ಐವರು ಸ್ಪರ್ಧಿಗಳನ್ನ ಮಾತ್ರ ರಿವೀಲ್ ಮಾಡಲಿದ್ದಾರೆ ಎನ್ನಲಾಗ್ತಿದೆ. ಅದರಲ್ಲಿ ಸ್ವರ್ಗ ಯಾರಿಗೆ ನರಕ ಯಾರಿಗೆ ಅನ್ನೋದನ್ನ ಜನರು ವೋಟ್ ಮೂಲಕ ನಿರ್ಧಾರ ಆಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment