newsfirstkannada.com

ಮಂಡ್ಯ ಚುನಾವಣೆ ಗೆಲ್ಲಲು ಹೆಚ್.ಡಿ ದೇವೇಗೌಡರ ಮನೆಯಲ್ಲಿ ಸೀಕ್ರೆಟ್ ಪ್ಲಾನ್; ಏನದು?

Share :

Published February 13, 2024 at 5:43pm

Update February 13, 2024 at 5:37pm

  ಬಿಜೆಪಿ-ಜೆಡಿಎಸ್ ನಾಯಕರ ಮಧ್ಯೆ ಮಂಡ್ಯ ಟಿಕೆಟ್ ಫೈಟ್!

  ಚಿಕ್ಕಬಳ್ಳಾಪುರ, ಮಂಡ್ಯ ಕ್ಷೇತ್ರದ ಚುನಾವಣೆ ಬಗ್ಗೆ ಮಾತುಕತೆ

  ಮಂಡ್ಯ ಜೆಡಿಎಸ್ ನಾಯಕರಿಗೆ ದೊಡ್ಡಗೌಡರಿಂದ ಸಖತ್‌ ಟಿಪ್ಸ್

ಬೆಂಗಳೂರು: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಮಂಡ್ಯ ರಾಜಕೀಯ ಕದನ ರಂಗೇರಿದೆ. ಬಿಜೆಪಿ-ಜೆಡಿಎಸ್ ನಾಯಕರ ಮಧ್ಯೆ ಟಿಕೆಟ್ ಫೈಟ್ ಕೂಡ ಜೋರಾಗಿದ್ದು, ಅಂತಿಮವಾಗಿ ಎಲೆಕ್ಷನ್‌ಗೆ ಯಾರು ಸ್ಪರ್ಧಿಸುತ್ತಾರೆ ಅನ್ನೋದು ಭಾರೀ ಕುತೂಹಲ ಕೆರಳಿಸಿದೆ.

ಮಾಜಿ ಪ್ರಧಾನಿ ಹೆಚ್‌.ಡಿ ದೇವೇಗೌಡರ ನಿವಾಸದಲ್ಲಿ ಮಂಡ್ಯ ಚುನಾವಣೆಯ ವಿಚಾರಕ್ಕೆ ಮಹತ್ವದ ಮೀಟಿಂಗ್ ನಡೆದಿದೆ. ಸಭೆಯಲ್ಲಿ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ ದೇವೇಗೌಡ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಮಾಜಿ ಸಚಿವರಾದ ಡಿ.ಸಿ ತಮ್ಮಣ್ಣ, ಸಿ.ಎಸ್ ಪುಟ್ಟರಾಜು ಸೇರಿದಂತೆ ಮಂಡ್ಯ ನಾಯಕರು ಭಾಗಿಯಾಗಿದ್ದಾರೆ.

ರಹಸ್ಯ ಸಭೆಯಲ್ಲಿ ಹೆಚ್‌.ಡಿ ದೇವೇಗೌಡ್ರು ಮಂಡ್ಯದಿಂದ ಹೆಚ್.ಡಿ ಕುಮಾರಸ್ವಾಮಿ, ಸಿ.ಎಸ್ ಪುಟ್ಟರಾಜು ಸ್ಪರ್ಧೆ ಬಗ್ಗೆ ಈಗಲೇ ಚರ್ಚೆ ಬೇಡ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಅಭಿಪ್ರಾಯ ಪಡೆದ ನಂತರ ನಿರ್ಧಾರ ಮಾಡೋಣ. ಯಾರೇ ಅಭ್ಯರ್ಥಿ ನಿಂತರೂ ಒಮ್ಮತದಿಂದ ಕೆಲಸ ಮಾಡೋಣ. ಬಿಜೆಪಿ ಹೈಕಮಾಂಡ್ ಭೇಟಿ ಬಳಿಕ ಅಭ್ಯರ್ಥಿಗಳ ಬಗ್ಗೆ ಅಂತಿಮ ನಿರ್ಧಾರಕ್ಕೆ ಬರೋಣ. ಅಂದ್ರೆ ಮಂಡ್ಯ ಚುನಾವಣೆಗೆ ಯಾರು ಅಭ್ಯರ್ಥಿ ಎಂದು ಫೈನಲ್ ಮಾಡೋದು ಬೇಡ ಎಂದಿದ್ದಾರೆ.

ಬಿಜೆಪಿ, ಜೆಡಿಎಸ್ ಮೈತ್ರಿ ಬಗ್ಗೆ ಯಾವುದೇ ಕಾರಣಕ್ಕೂ ಅಪಸ್ವರದ ಹೇಳಿಕೆ ನೀಡಬೇಡಿ. ಹೆಚ್.ಡಿ ಕುಮಾರಸ್ವಾಮಿ ಚಿಕ್ಕಬಳ್ಳಾಪುರ, ಮಂಡ್ಯ ಕ್ಷೇತ್ರದ ಬಗ್ಗೆ ಹೈಕಮಾಂಡ್ ನಾಯಕರು ತೀರ್ಮಾನ ಮಾಡ್ತಾರೆ ಎಂದು ಹೆಚ್‌.ಡಿ ದೇವೇಗೌಡರು ಮಂಡ್ಯ ನಾಯಕರಿಗೆ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: VIDEO: ‘ಹುಳಿ ಹಿಂಡೋದೆ ಇವ್ರ ಕೆಲಸ’- ಸದನದಲ್ಲಿ ಕುಮಾರಸ್ವಾಮಿಗೆ ಟಾಂಗ್ ಕೊಟ್ಟ ನರೇಂದ್ರ ಸ್ವಾಮಿ

ದೇವೇಗೌಡರ ಜೊತೆ ನಡೆದ ಮಂಡ್ಯ ನಾಯಕರ ಸಭೆ ಬಳಿಕ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ದೇವೇಗೌಡರ ನಿವಾಸದಲ್ಲಿ 8 ವಿಧಾನಸಭೆಯ ನಾಯಕರು ಚರ್ಚೆ ನಡೆಸಿದ್ದಾರೆ. ಅವರ ಅಭಿಪ್ರಾಯವನ್ನು ದೇವೇಗೌಡರ ಗಮನಕ್ಕೆ ತಂದಿದ್ದಾರೆ. ಪ್ರಧಾನಿ ಮೋದಿ, ಬಿಜೆಪಿ ರಾಜ್ಯಾಧ್ಯಕ್ಷ ಜೆ.ಪಿ ನಡ್ಡಾ ಎಲ್ಲರೂ ಸೇರಿ ನಿರ್ಧಾರ ಮಾಡುತ್ತಾರೆ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಂಡ್ಯ ಚುನಾವಣೆ ಗೆಲ್ಲಲು ಹೆಚ್.ಡಿ ದೇವೇಗೌಡರ ಮನೆಯಲ್ಲಿ ಸೀಕ್ರೆಟ್ ಪ್ಲಾನ್; ಏನದು?

https://newsfirstlive.com/wp-content/uploads/2024/02/Hdd-Meeting-ON-Mandya.jpg

Load More