74ರ ಹರೆಯದಲ್ಲೂ ಪ್ರಧಾನಿ ಮೋದಿ ಇಷ್ಟು ಲವಲವಿಕೆಯಿಂದ ಇರೋದು ಹೇಗೆ?
ಯೋಗ, ಪ್ರಾಣಾಯಾಮ, ಮೂರುವರೆಗಂಟೆ ನಿದ್ದೆ ಹೇಗಿದೆ ನಮೋ ಜೀವನ ಶೈಲಿ
ಪ್ರಧಾನಿ ಮೋದಿ ಅವರ ಸಮತೋಲಿತ ಆಹಾರಶೈಲಿಯೆ ಅವರ ಆರೋಗ್ಯದ ಗುಟ್ಟು
ಪ್ರಧಾನಿ ನರೇಂದ್ರ ಮೋದಿಯವರು ಈಗ 74ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಸೋಲರಿಯದ ಸರದಾರನಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. 74ನೇಯ ಈ ವಯಸ್ಸಿನಲ್ಲಿಯೂ ಕೂಡ ಮೋದಿ ತಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಮೊದಲಿನಂತೆಯೇ ಸದೃಢವಾಗಿಟ್ಟುಕೊಂಡಿದ್ದಾರೆ. ಈ ವಯಸ್ಸಿನಲ್ಲಿಯೂ ಕೂಡ ಮೋದಿ ಮಲಗುವುದು ಕೇವಲ ಮೂರೂವರೆ ಗಂಟೆಗಳು ಮಾತ್ರ. ಪ್ರಧಾನಿ ನರೇಂದ್ರ ಮೋದಿಯವರ ಬದುಕೇ ಒಂದು ಕುತೂಹಲಕಾರಿ ಸಂಗತಿ. ಅವರು ನಡೆದು ಬಂದ ದಾರಿ ಹಾಗೂ ಅವರ ಬದುಕಿನ ಶೈಲಿಯ ಬಗ್ಗೆ ಅನೇಕರಿಗೆ ಒಂದು ಕುತೂಹಲ ಇದ್ದೇ ಇರುತ್ತದೆ. ಮೋದಿ ದೈನಂದಿನ ಬದುಕಿನ ಬಗ್ಗೆ ಒಂದಿಷ್ಟು ಮಾಹಿತಿ ಈ ಲೇಖನದಲ್ಲಿದೆ.
ಇದನ್ನೂ ಓದಿ: Modi birthday: ಮೋದಿಗೆ ಸಿಕ್ಕ ಉಡುಗೊರೆಗಳ ಹರಾಜು ಇಂದು; ಬಂದ ಹಣವನ್ನು ಏನು ಮಾಡ್ತಾರೆ ಗೊತ್ತಾ?
ಮೋದಿಯರ ಬೆಳಗು ಆರಂಭವಾಗುವುದೇ ಯೋಗಾಭ್ಯಾಸದಿಂದ ನಿತ್ಯ ಬೆಳಗ್ಗೆ ತಪ್ಪದೇ ಮೋದಿ ಯೋಗ ಮಾಡುತ್ತಾರೆ. ಅವರನ್ನು ಅವರು ಫಿಟ್ ಆಗಿಟ್ಟುಕೊಳ್ಳಲು ವಜ್ರಾಸನ, ಸೇತುಬಂಧಾಸನ, ಭುಜಂಗಾಸನ ಮತ್ತು ಉತ್ಥಾನಪದಾಸನವನ್ನು ನಿತ್ಯ ತಪ್ಪದೇ ಮಾಡುತ್ತಾರೆ. ಕೇಂದ್ರ ಸಚಿವ ಎಲ್ ಮುರುಗನ್ ಹೇಳುವ ಪ್ರಕಾರ ಪ್ರಧಾನಿ ನರೇಂದ್ರ ಮೋದಿಯವರು ನಿತ್ಯ ಕೇವಲ ಮೂರೂವರೆ ಗಂಟೆ ಮಾತ್ರ ನಿದ್ರಿಸುತ್ತಾರಂತೆ. ಸಂಜೆ ಆರು ಗಂಟೆಯ ನಂತರ ಅವರು ಯಾವುದೇ ಆಹಾರವನ್ನು ಸೇವಿಸುವುದಿಲ್ಲವಂತೆ. ಅತ್ಯಂತ ಹಿತಮಿತವಾದ ಹಾಗೂ ಸಮತೋಲನ ಆಹಾರದ ಪದ್ಧತಿಯನ್ನು ಮೋದಿ ಬಹಳ ವರ್ಷದಿಂದ ತಮ್ಮದಾಗಿಸಿಕೊಂಡಿದ್ದಾರೆ ಎಂದು ಕೇಂದ್ರ ಸಚಿವ ಮುರುಗನ್ ಹೇಳುತ್ತಾರೆ.
ಇದನ್ನೂ ಓದಿ: Narendra Modi: ನಾಳೆ ಪ್ರಧಾನಿ ಮೋದಿಗೆ 74ನೇ ಹುಟ್ಟುಹಬ್ಬ; ಕೇಂದ್ರ ಸರ್ಕಾರದ ಮೆಗಾ ಪ್ಲಾನ್ ಏನು?
ಇನ್ನು ಈಗಾಗಲೇ ಹೇಳಿದಂತೆ ಹಿತಮಿತ ಆಹಾರ ಮೋದಿಯವರ ಆಹಾರಶೈಲಿಯಲ್ಲಿ. ಸಂಜೆ 6 ಗಂಟೆಯ ನಂತರ ಏನನ್ನೂ ಸೇವಿಸುವುದಿಲ್ಲ. ಬೆಳಗ್ಗೆ 9 ಗಂಟೆಗೆ ಮಿತವಾದ ಉಪಹಾರ ಮಾಡುತ್ತಾರೆ. ಫಿಟ್ ಇಂಡಿಯಾ ಕಾರ್ಯಕ್ರಮದಲ್ಲಿ ಖುದ್ದು ಮೋದಿಯವರೇ ಹೇಳಿಕೊಂಡಂತೆ ಅವರಿಗೆ ನುಗ್ಗೆಕಾಯಿ ಪರಾಟ ಅಂದ್ರೆ ತುಂಬಾ ಇಷ್ಟವಂತೆ. ಇದರಲ್ಲಿ ಅಮೂಲಾಗ್ರ ಪೋಷಕಾಂಶಗಳು ಇರುತ್ತವೆ ಹೀಗಾಗಿ ನಾನು ವಾರದಲ್ಲಿ ಎರಡು ಬಾರಿಯಾದ್ರೂ ನುಗ್ಗೆಕಾಯಿ ಸೊಪ್ಪಿನ ಪರಾಟ ತಿನ್ನುತ್ತೇನೆ ಎಂದು ಮೋದಿ ಹೇಳಿಕೊಂಡಿದ್ದಾರೆ.
ಕಡಿಮೆ ನಿದ್ರೆ, ಹೆಚ್ಚು ಕೆಲಸ ಯೋಗ, ಹೆಚ್ಚು ನಡಿಗೆ, ಸಮತೋಲಿತ ಇದು ಮೋದಿಯವರು ಅಳವಡಿಸಿಕೊಂಡ ಜೀವನ ಶೈಲಿ. ಹೀಗಾಗಿಯೇ 74ರ ಹರೆಯದಲ್ಲೂ ಇನ್ನೂ ಚಿಗರೆಯಂತ ಚೈತನ್ಯವನ್ನು ಮೋದಿ ಹೊಂದಲು ಕಾರಣ ಎನ್ನುತ್ತಾರೆ ಅವರನ್ನು ಹತ್ತಿರದಿಂದ ಬಲ್ಲವರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ