ಮೋದಿಗೆ ಸಿಕ್ಕಿರುವ ಉಡುಗೊರೆಗಳನ್ನ ನೀವು ಪಡೆಯಬಹುದು
74ನೇ ಹುಟ್ಟುಹಬ್ಬ ಆಚರಿಸಿಕೊಳ್ತಿರುವ ಪ್ರಧಾನಿ ಮೋದಿ
ಒಂದು ವರ್ಷದಲ್ಲಿ ಸ್ವೀಕರಿಸಿದ ಸ್ಮರಣಿಕೆಗಳು ಹರಾಜಿನಲ್ಲಿವೆ
ಪ್ರಧಾನಿ ನರೇಂದ್ರ ಮೋದಿ ಅವರು ಇಂದು ತಮ್ಮ 74ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ತಿದ್ದಾರೆ. ಇದೇ ಸಂಭ್ರಮದಲ್ಲಿ ಮೋದಿ ಅವರು ವಿವಿಧ ಸಂದರ್ಭದಲ್ಲಿ ಸ್ವೀಕರಿಸಿರುವ ಉಡುಗೊರೆಗಳು ಹರಾಜು ಆಗಲಿವೆ. ಅವುಗಳನ್ನು ಪಡೆದುಕೊಳ್ಳುವ ಅವಕಾಶ ನಿಮಗೂ ಇದೆ.
ಮೋದಿ ಸ್ವೀಕರಿಸಿದ ಉಡುಗೊರೆಗಳ ಜೊತೆಗೆ ಕ್ರೀಡಾ ಶೂಗಳು, ಪ್ಯಾರಾಲಿಂಪಿಕ್ಸ್ ಪದಕ ವಿಜೇತರ ಇತರೆ ವಸ್ತುಗಳು, ರಾಮಮಂದಿರದ ಪ್ರತಿಕೃತಿಗಳು ಕೂಡ ಹರಾಜು ಮಾಡಲಾಗುತ್ತಿವೆ. ವರದಿಗಳ ಪ್ರಕಾರ ಕೇಂದ್ರ ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್, ಈ ಎಲ್ಲಾ ವಸ್ತುಗಳ ಬೆಲೆಯನ್ನು ನಿರ್ಧರಿಸಿದ್ದಾರೆ. ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ನಲ್ಲಿ ಮೋದಿ ಅವರು ಸ್ವೀಕರಿಸಿದ ಸ್ಮರಣಿಕಗಳಿವೆ.
ಇದನ್ನೂ ಓದಿ: ಸ್ಪೆಷಲ್ ಟ್ಯಾಲೆಂಟ್ ಹುಡುಗನಿಗೆ ಚಾನ್ಸ್ ಕೊಡಲು ಗಂಭೀರ್ ಕಸರತ್ತು.. 8 ವೇಗಿಗಳು ಅಸಮಾಧಾನ..!
ಉಡುಗೊರೆಗಳ ಹರಾಜಿನ ಬೆಲೆಯನ್ನು ಸರ್ಕಾರಿ ಸಮಿತಿ ನಿರ್ಧರಿಸುತ್ತದೆ. ಅದರ ಬೆಲೆ ಕನಿಷ್ಠ 600 ರೂಪಾಯಿಂದ ಆರಂಭವಾಗಿ 8.26 ಲಕ್ಷ ರೂಪಾಯಿ ವರೆಗೆ ಇದೆ. ಇನ್ನು ಹರಾಜಿನಿಂದ ಬಂದ ಹಣದಲ್ಲಿ ಗಂಗಾ ನದಿಯನ್ನು ಸ್ವಚ್ಛಗೊಳಿಸುವ ಉದ್ದೇಶ ಹೊಂದಲಾಗಿದೆ. ಮೋದಿ ಅವರು ತಮಗೆ ಸಿಗುವ ಎಲ್ಲಾ ಸ್ಮರಣಿಕೆಗಳನ್ನು ಮತ್ತು ಉಡುಗೊರೆಗಳನ್ನು ಹರಾಜು ಹಾಕುವ ಸಂಸ್ಕೃತಿಯನ್ನು ಪ್ರಾರಂಭಿಸಿದ್ದಾರೆ. ಅವರು ಮುಖ್ಯಮಂತ್ರಿಯಾದ ದಿನದಿಂದಲೂ ಅದನ್ನು ಮಾಡಿಕೊಂಡು ಬರುತ್ತಿದ್ದಾರೆ. ಜನರಿಂದ ಉಡುಗೊರೆ ಪಡೆದ ವಸ್ತುವನ್ನು ಜನರಿಗೆ ಹಿಂತಿರುಗಿಸಲಾಗುತ್ತದೆ.
ಅದೇ ರೀತಿ ಸತತ 6ನೇ ಬಾರಿಗೆ ಹರಾಜು ಪ್ರಕ್ರಿಯೆ ಇಂದು ನಡೆಯಲಿದೆ. ಒಂದು ವರ್ಷದಲ್ಲಿ ಮೋದಿ ಸ್ವೀಕರಿಸಿದ ಒಟ್ಟು 600 ವಸ್ತುಗಳ ಹರಾಜಿಗೆ ಸೇರ್ಪಡೆ ಮಾಡಲಾಗಿದೆ. ಇನ್ನು ಅತ್ಯಧಿಕ ಬೆಲೆಯ ಸ್ಮರಣಿಕೆಗಳಲ್ಲಿ ಪ್ಯಾರಾಲಿಂಪಿಕ್ ಕಂಚಿನ ಪದಕ ವಿಜೆತರಾದ ಅಜಿತ್ ಸಿಂಗ್ ಮತ್ತು ಸಿಮ್ರಾನ್ ಶರ್ಮಾ ಮತ್ತು ಬೆಳ್ಳಿ ಪದಕ ವಿಜೇತ ನಿಶಾದ್ ಕುಮಾರ್ ಅವರ ಕ್ರೀಡಾ ಶೂಗಳು ಹಾಗೂ ಬೆಳ್ಳಿ ಪದಕ ವಿಜೇತ ಶರದ್ ಕುಮಾರ್ ಅವರ ಸಹಿ ಮಾಡಿದ ಕ್ಯಾಪ್ಗಳಾಗಿವೆ. ಇವೆಲ್ಲವೂ ಸುಮಾರು 2.86 ಲಕ್ಷ ರೂಪಾಯಿ ಎನ್ನಲಾಗಿದೆ.
ಇದನ್ನೂ ಓದಿ: 4 ಪಂದ್ಯ.. ಕಿತ್ತಿರೋದು 30 ವಿಕೆಟ್.. ಚೆಪಾಕ್ನಲ್ಲಿ ಇವ್ರಿಗೆ ಸಾಟಿಯೇ ಇಲ್ಲ.. ಬಾಂಗ್ಲಾಗೆ ಢವಢವ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ