/newsfirstlive-kannada/media/post_attachments/wp-content/uploads/2024/08/apple-security-threat.jpg)
ನವದೆಹಲಿ: ಭಾರತೀಯ ಕಂಪ್ಯೂಟರ್ ತುರ್ತು ಸ್ಪಂದನ ತಂಡ ಕೆಲವು ಆ್ಯಪಲ್​ ಬಳಕೆದಾರರಿಗೆ ಹಲವು ಎಚ್ಚರಿಕೆಗಳನ್ನು ನೀಡಿದೆ. ಆಗಷ್ಟ್​ 2 ರಂದು ಹೊರಬಿದ್ದಿರುವ CERT-Inನ ಎಚ್ಚರಿಕೆ ಆ್ಯಪಲ್​ ಫೋನ್​ನಲ್ಲಿ ಹಲವು ಭದ್ರತೆಗೆ ಸಂಬಧಿಸಿದ ಹಲವು ಸಮಸ್ಯೆಗಳು ಉಂಟಾಗಲಿವೆ. ಐಫೋನ್, ಐಪ್ಯಾಡ್, ಮ್ಯಾಕ್ಸ್ ಸೇರಿ ಆ್ಯಪಲ್​ನ ಹಲವು ಉತ್ಪನ್ನಗಳಿಗೂ ಈ ಸಮಸ್ಯೆ ಕಾಡಲಿದೆ.
ಆ್ಯಪಲ್​ನ ಹಲವು ರೀತಿಯ ಸಾಫ್ಟ್​ವೇರ್​ಗಳಲ್ಲಿ ಈ ತೊಂದರೆ ಕಾಣಿಸಿಕೊಳ್ಳಲಿದೆ
iOS ಮತ್ತು iPAD Os ವರ್ಷನ್​ನ 17.6 ಮತ್ತು
macOS ವರ್ಷನ್​ನ ಪ್ರಯಾರ್ 14.6
watchOs ವರ್ಷನ್ ಪ್ರಯರ್ 10.6
tvOS: 17.6
vision os 1.3
Safari 17.6
CERT-In ಈ ಬಗೆಯ ಸಾಫ್ಟ್​ವೇರ್ ಹೊಂದಿರುವ ಆ್ಯಪಲ್​ ಉತ್ಪನ್ನಗಳು ಸದ್ಯ ಅಪಾಯದಲ್ಲಿವೆ ಎಂದು ಹೇಳಿದೆ. ಈ ರೀತಿಯ ಸಾಫ್ಟ್​ವೇರ್​ಗಳು ನಿಮ್ಮ ಡಿವೈಸ್​ನಲ್ಲಿರುವ ಸೂಕ್ಷ್ಮ ಮಾಹಿತಿಗಳ ಮೇಲೆ ದಾಳಿಯಾಗಬಹುದು ಎಂದು ಎಚ್ಚರಿಕೆಯನ್ನು ನೀಡಿದೆ.
ಆ್ಯಪಲ್​ನಿಂದಲೂ ಗ್ರಾಹಕರಿಗೆ ಸೆಕ್ಯೂರಿಟಿ ಅಲರ್ಟ್​
ಇನ್ನು CERT-In ಆ್ಯಪಲ್ ಬಳಕೆದಾರರಿಗೆ ಈಗಾಗಲೇ ಒಂದು ಸೂಚನೆಯನ್ನು ನೀಡಿದೆ, ಬಳಕೆದಾರರು ಕೂಡಲೇ ಸಾಫ್ಟ್​ವೇರ್ ಅಪಡೇಟ್ ಮಾಡಿಕೊಳ್ಳಿ. ಈಗಾಗಲೇ ಆ್ಯಪಲ್​ ಸಂಸ್ಥೆ ಅಪ್​ಡೇಟ್​ ಆಯ್ಕೆಯನ್ನು ಪೂರೈಸಿದೆ ಈ ಮೂಲಕ ನಿಮ್ಮ ಆ್ಯಪಲ್ ಉತ್ಪನ್ನದ ಭದ್ರತೆಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಿ ಎಂದು ಕೂಡ ಹೇಳಿದೆ.
ಹಲವು ಸಾಫ್ಟ್​ವೇರ್​ಗಳ ದಾಳಿಯ ಬಗ್ಗೆ ಎಚ್ಚರಿಕೆ ನೀಡಿದ ಆ್ಯಪಲ್
CERT-In ಜೊತೆಗೆ ಆ್ಯಪಲ್ ಕಂಪನಿಯೂ ಕೂಡ ತನ್ನ ಉತ್ಪನ್ನಗಳ ಬಳಕೆದಾರರಿಗೆ ಹಲವು ಎಚ್ಚರಿಕೆಯನ್ನು ನೀಡಿದೆ. ಸದ್ಯದಲ್ಲಿಯೇ ನಿಮ್ಮ ಐಫೋನ್, ಐಪ್ಯಾಡ್​ನಂತಹ ಉತ್ಪನ್ನಗಳ ಮೇಲೆ ಸ್ಪೈವೇರ್, ಪೆಗಾಸಸ್ ಸ್ಪೈವೇರ್​ ನಂತಹ ಸಾಫ್ಟ್​ವೇರ್​ಗಳು ದಾಳಿಯಿಡುವ ಸಾಧ್ಯತೆಯಿದೆ ಎಂಬ ಎಚ್ಚರಿಕೆಯನ್ನು ಭಾರತವನ್ನು ಸೇರಿ ಒಟ್ಟು 150 ದೇಶಗಳಿಗೆ ರವಾನಿಸಿದೆ. ಸದ್ಯ ಸುಧಾರಿತ ಸ್ಪೈವೇರ್​ಗಳು ಪ್ರಮುಖವಾಗಿ ಆ್ಯಪಲ್ ಉತ್ಪನ್ನಗಳನ್ನು ಟಾರ್ಗೆಟ್​ ಮಾಡುವ ಉದ್ದೇಶವನ್ನು ಹೊಂದಿವೆ.ಹೀಗಾಗಿ ಆ್ಯಪಲ್ ಬಳಕೆದಾರರು ಕೊಂಚ ಎಚ್ಚರಿಕೆಯಿಂದ ಇರೋದು ಒಳಿತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us