newsfirstkannada.com

ಬಾತ್​ ರೂಂನಲ್ಲಿದ್ದ ಮಹಿಳೆಯ ವಿಡಿಯೋ ಚಿತ್ರೀಕರಿಸಿ ಸಿಕ್ಕಿ ಬಿದ್ದ ಸೆಕ್ಯುರಿಟಿ ಗಾರ್ಡ್.. ಆಮೇಲೇನಾಯ್ತು?

Share :

Published April 19, 2024 at 1:57pm

  ಮಹಿಳೆ ಬಾತ್​ರೂಂನಲ್ಲಿದ್ದಾಗ ಕದ್ದು ವಿಡಿಯೋ ಚಿತ್ರೀಕರಣ

  ಮಹಿಳೆ ಕೈಗೆ ಸಿಕ್ಕಿ ಬಿದ್ದ ಅಪಾರ್ಟ್​​ಮೆಂಟ್​​ ಸೆಕ್ಯೂರಿಟಿ ಗಾರ್ಡ್​

  ಈ ಘಟನೆ ನಡೆದದ್ದು ಎಲ್ಲಿ ಗೊತ್ತಾ? ಮುಂದೆ ಏನಾಯ್ತು?

ಕಲಬುರಗಿ: ಸೆಕ್ಯೂರಿಟಿ ಗಾರ್ಡ್​ವೊಬ್ಬ ಬಾತ್​ ರೂಂನಲ್ಲಿ ಸ್ನಾನ ಮಾಡುತ್ತಿದ್ದ ಮಹಿಳೆಯ ವಿಡಿಯೋ ರೆಕಾರ್ಡ್​​ ಮಾಡಿ ಸಿಕ್ಕಿಬಿದ್ದಿದ್ದಾನೆ. ಕಲಬುರಗಿ ನಗರದ ರಾಮ ಮಂದಿರ ವೃತ್ತದ ಬಳಿಯಿರುವ ಅಪಾರ್ಟ್ಮೆಂಟ್ ನಲ್ಲಿ ಈ ಘಟನೆ ನಡೆದಿದೆ. ಸೆಕ್ಯೂರಿಟಿ ಗಾರ್ಡ್ ವಿಶ್ವನಾಥ್ ವಿಡಿಯೋ ರೇಕಾರ್ಡ್ ಮಾಡಿ ಸಿಕ್ಕಿಬಿದ್ದಿದ್ದಾನೆ.

ಮಹಿಳೆ ಅಪಾರ್ಟ್ಮೆಂಟ್ ನಲ್ಲಿ ಬಾಡಿಗೆಗೆ ಇದ್ದಳು. ಆಕೆ ಬಾತ್​ ರೂಂನಲ್ಲಿ ಇದ್ದ ವೇಳೆ ಸೆಕ್ಯೂರಿಟಿ ಗಾರ್ಡ್ ವಿಶ್ವನಾಥ್ ತನ್ನ ಸ್ಮಾರ್ಟ್​ಫೋನ್​ನಲ್ಲಿ ವಿಡಿಯೋ ಚಿತ್ರೀಕರಿಸಿದ್ದಾನೆ. ಈ ವಿಚಾರ ಮಹಿಳೆ ಗೊತ್ತಾಗಿದೆ. ತಕ್ಷಣ ಗಂಡನಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾಳೆ.

ಇದನ್ನೂ ಓದಿ: Lok Sabha Election: ಮೊದಲ ಹಂತದ ಚುನಾವಣೆ.. ಅತಿ ಶ್ರೀಮಂತ ಅಭ್ಯರ್ಥಿ ಯಾರು? ಆಸ್ತಿ ಎಷ್ಟಿದೆ? ಇಲ್ಲಿದೆ ಮಾಹಿತಿ

ಮಹಿಳೆಯ ಗಂಡ ಬಂದು ಸೆಕ್ಯೂರಿಟಿ ಗಾರ್ಡ್ ನನ್ನ ಹಿಡಿದು ಥಳಿಸಿದ್ದಾನೆ. ಅಪಾರ್ಟ್ಮೆಂಟ್ ಅಂಡರ್ ಗ್ರೌಂಡ್ ನಲ್ಲಿರುವ ಪಾರ್ಕಿಂಗ್ ಸ್ಥಳದಲ್ಲಿ ಕಂಬಕ್ಕೆ ಕಟ್ಟಿ ಥಳಿಸಿದ್ದಾನೆ. ನಂತರ ಅಪಾರ್ಟ್ಮೆಂಟ್ ನಲ್ಲಿದ್ದ ಜನ ಸೇರಿಕೊಂಡು ಸೆಕ್ಯೂರಿಟಿ ಗಾರ್ಡ್ ವಿಶ್ವನಾಥ್ ಗೆ ಹೊಡೆದಿದ್ದಾರೆ. ಬಳಿಕ ಅಪಾರ್ಟ್ಮೆಂಟ್ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಪೊಲೀಸರು ಸೆಕ್ಯೂರಿಟಿ ಗಾರ್ಡ್ ವಿಶ್ವನಾಥ್​ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸ್ಟೇಷನ್ ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಾತ್​ ರೂಂನಲ್ಲಿದ್ದ ಮಹಿಳೆಯ ವಿಡಿಯೋ ಚಿತ್ರೀಕರಿಸಿ ಸಿಕ್ಕಿ ಬಿದ್ದ ಸೆಕ್ಯುರಿಟಿ ಗಾರ್ಡ್.. ಆಮೇಲೇನಾಯ್ತು?

https://newsfirstlive.com/wp-content/uploads/2024/04/Vishwanath.jpg

Load More