ಇರಲು ಮನೆ ಇರಲಿಲ್ಲ; ಮೆಜೆಸ್ಟಿಕ್​​ನಲ್ಲೇ ಸುತ್ತಾಡಿದ್ದ ಸಿಹಿ ಕುಟುಂಬ; ಕಷ್ಟಗಳ ನೆನೆದು ಪುಟಾಣಿ ಕಣ್ಣೀರು

author-image
Veena Gangani
Updated On
ಇರಲು ಮನೆ ಇರಲಿಲ್ಲ; ಮೆಜೆಸ್ಟಿಕ್​​ನಲ್ಲೇ ಸುತ್ತಾಡಿದ್ದ ಸಿಹಿ ಕುಟುಂಬ; ಕಷ್ಟಗಳ ನೆನೆದು ಪುಟಾಣಿ ಕಣ್ಣೀರು
Advertisment
  • ಡ್ರಾಮಾ ಜೂನಿಯರ್ಸ್ ಬರುವ ಮುನ್ನ ಸಾಕಷ್ಟು ಕಷ್ಟ ಎದುರಿಸಿದ್ದ ಸಿಹಿ
  • ಸೀತಾರಾಮ ಧಾರಾವಾಹಿಯಲ್ಲಿ ಸಿಹಿ ಪಾತ್ರಕ್ಕೆ ಜೀವ ತುಂಬಿದ್ದು ರಿತು ಸಿಂಗ್
  • ಕೈಯಲ್ಲಿ ಹಣ ಇಲ್ಲದೇ ಮೆಜೆಸ್ಟಿಕ್​ನಲ್ಲಿ ಸುತ್ತಾಡುತ್ತಿದ್ದರಂತೆ ಸಿಹಿ ಕುಟುಂಬಸ್ಥರು

ಕನ್ನಡಿಗರ ಮೆಚ್ಚಿನ ಧಾರಾವಾಹಿಗಳ ಸಾಲಿನಲ್ಲಿ ಸೀತಾರಾಮ ಕೂಡ ಒಂದು. ಸೀತಾರಾಮ ಸೀರಿಯಲ್​ನಲ್ಲಿ ಮುಖ್ಯವಾಗಿ ಸಿಹಿ ಪಾತ್ರ ವೀಕ್ಷಕರಿಗೆ ತುಂಬಾ ಇಷ್ಟವಾಗಿ ಬಿಟ್ಟಿದೆ. ಎಷ್ಟರ ಮಟ್ಟಿಗೆ ಎಂದರೆ ಇಂಥ ಮಗುವಿನ ಮಗಳನ್ನು ಕೊಡು ಅಂತ ಹೇಳಿಕೊಳ್ಳಿದ್ದಾರೆ ವೀಕ್ಷಕರು. ಅಷ್ಟರ ಮಟ್ಟಿಗೆ ಸಿಹಿ ಪಾತ್ರ ವೀಕ್ಷಕರಲ್ಲಿ ನಾಟಿದೆ.

ಇದನ್ನೂ ಓದಿ:DKD SHOW, ಸೀತಾರಾಮ ಸೀರಿಯಲ್​ನಿಂದ ದಿಢೀರ್​ ಹೊರ ಬಂದ್ರಾ​ ಮೇಘನಾ ಶಂಕರಪ್ಪ; ಆಗಿದ್ದೇನು?

publive-image

ಇನ್ನು ಸೀತಾರಾಮ ಧಾರಾವಾಹಿಯಲ್ಲಿ ಸಿಹಿ ಪಾತ್ರಕ್ಕೆ ರಿತು ಸಿಂಗ್ ಅವರು ಜೀವ ತುಂಬುತ್ತಿದ್ದಾರೆ. ಸಿಹಿಯ ಮುದ್ದಾದ ಮಾತು, ಅದ್ಭಯ ನಟನೆ ಎಲ್ಲರಿಗೂ ಇಷ್ಟವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಸಿಹಿ ನಟನೆಗೆ ಭರಪೂರ ಮೆಚ್ಚುಗೆ ವ್ಯಕ್ತವಾಗುತ್ತಲೇ ಇರುತ್ತವೆ. ಆದರೆ ಇದೇ ಸಿಹಿ ಕುಟುಂಬಸ್ಥರು ಡ್ರಾಮಾ ಜೂನಿಯರ್ಸ್ ಬರುವ ಮುನ್ನ ಸಾಕಷ್ಟು ಕಷ್ಟಗಳನ್ನು ಎದುರಿಸಿದ್ದಾರೆ.

ಡ್ರಾಮಾ ಜೂನಿಯರ್ಸ್ ಮುನ್ನ ಸಿಹಿ ತಾಯಿ ಬೆಂಗಳೂರಿಗೆ ಬಂದಾಗ ತುಂಬಾನೆ ಕಷ್ಟದಲ್ಲಿದ್ರು, ಇರೋದಕ್ಕೆ ಮನೆ ಇರಲಿಲ್ಲ, ಕೈಯಲ್ಲಿ ಹಣ ಇಲ್ಲದೇ ಮೆಜೆಸ್ಟಿಕ್​ನಲ್ಲಿ ಸುತ್ತಾಡುತ್ತಿದ್ದರಂತೆ. ನಾಳೆ ಜೀವನ ಹೇಗೆ ಅನ್ನೋ ಪ್ರಶ್ನೆಗೆ ಅವರ ಬಳಿ ಉತ್ತರನೇ ಇರಲಿಲ್ಲವಂತೆ. ಆದರೆ ಸಿಹಿಗೆ ಅವಕಾಶ ಸಿಕ್ಕಮೇಲೆ ಎಲ್ಲವೂ ಬದಲಾಗಿದೆ. ಆ ಮನೆಯ ಧೈರ್ಯ ಅಂದ್ರೆ ಸಿಹಿ ಎನ್ನುವಷ್ಟು ಸಹಾಯ ಮಾಡುತ್ತಿದ್ದಾಳೆ ಈ ರೀತು ಸಿಂಗ್. ಇನ್ನು ಈ ವಿಚಾರದ ಜೀ ಕುಟುಂಬ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಈ ಬಗ್ಗೆ ನಿರೂಪಕ ಅಕುಲ್​ ಬಾಲಾಜಿ ಹೆಳುತ್ತಿದ್ದರು. ಈ ವೇಳೆ ರೀತು ಸಿಂಗ್ ತಾಯಿ ಕಣ್ಣೀರು ಹಾಕಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment