Advertisment

ಲೈವ್ ಡಿಬೇಟ್​ನಲ್ಲಿ ಚಪ್ಪಲಿ ಹೊಡೆದ ಕೇಸ್​ಗೆ ಟ್ವಿಸ್ಟ್; ನಟಿ ಲಾವಣ್ಯ ಹೊಟ್ಟೆಗೆ ಬಲವಾದ ಪೆಟ್ಟು, ಆಸ್ಪತ್ರೆಯಲ್ಲಿ ಚಿಕಿತ್ಸೆ

author-image
Ganesh
Updated On
ಲೈವ್ ಡಿಬೇಟ್​ನಲ್ಲಿ ಚಪ್ಪಲಿ ಹೊಡೆದ ಕೇಸ್​ಗೆ ಟ್ವಿಸ್ಟ್; ನಟಿ ಲಾವಣ್ಯ ಹೊಟ್ಟೆಗೆ ಬಲವಾದ ಪೆಟ್ಟು, ಆಸ್ಪತ್ರೆಯಲ್ಲಿ ಚಿಕಿತ್ಸೆ
Advertisment
  • ವಿಕೋಪಕ್ಕೆ ತಿರುಗಿದೆ ರಾಜ್ ತರುಣ್-ನಟಿ ಲಾವಣ್ಯ ಜಗಳ
  • ಇಬ್ಬರ ಜಗಳದಲ್ಲಿ ಶೇಖರ್ ಬಾಷಾ ಎಂಟ್ರಿ.. ಯಾರೀತ..?
  • ಶೇಖರ್ ಬಾಷಾ ವಿರುದ್ಧ ಕಿರುಕುಳ, ಹಲ್ಲೆ ಕೇಸ್ ದಾಖಲು

ತೆಲುಗು ನಟ ರಾಜ್ ತರುಣ್ ಮತ್ತು ನಟಿ ಲಾವಣ್ಯ ನಡುವಿನ ಜಗಳ ವಿಕೋಪಕ್ಕೆ ತಿರುಗಿದೆ. ಝೀ ನ್ಯೂಸ್​ ಡಿಬೇಟ್ ಕಾರ್ಯಕ್ರಮದಲ್ಲಿ ರಾಜ್ ತರುಣ್ ಅವರ ಸ್ನೇಹಿತ ಶೇಖರ್ ಬಾಷಾಗೆ ಚಪ್ಪಲಿಯಿಂದ ಹೊಡೆದ ಸುದ್ದಿ ಭಾರೀ ಸದ್ದು ಮಾಡಿತ್ತು.

Advertisment

ಸದ್ಯದ ಮಾಹಿತಿ ಏನೆಂದರೆ ಶೇಖರ್ ಬಾಷಾ ಲಾವಣ್ಯಗೆ ಹಲ್ಲೆ ಮಾಡಿ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ರೇಡಿಯೋ ಜಾಕಿಯೂ ಆಗಿರುವ ಶೇಖರ್ ಬಾಷಾ, ಯೂಟ್ಯೂಬ್ ಚಾನೆಲ್​ಗೆ ​ ಸಂದರ್ಶನ ನಡೆಸುತ್ತಿದ್ದ ವೇಳೆ ಲಾವಣ್ಯ ಭೇಟಿ ನೀಡಿದ್ದರು. ಇವರಿಬ್ಬರ ಮಧ್ಯೆ ತೀವ್ರ ಜಗಳ ಶುರುವಾಗಿದೆ. ಆಗ ಶೇಖರ್ ಬಾಷಾ ಆಕೆಯನ್ನು ಥಳಿಸಿದ್ದಾರೆ. ನಟಿಯ ಹೊಟ್ಟೆಗೆ ಹೊಡೆತ ಬಿದ್ದಿದೆ. ಕೂಡಲೇ ಲಾವಣ್ಯ ಪೊಲೀಸರಿಗೆ ಕರೆ ಮಾಡಿ ದೂರು ದಾಖಲಿಸಿದ್ದಾರೆ. ಸದ್ಯ ನಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:ಭೀಕರ ರಸ್ತೆ ಅಪಘಾತದಲ್ಲಿ ವಿದ್ಯಾರ್ಥಿನಿ ಸಾವು; ಮನೆಬಿಟ್ಟು ಹೋದ ಅಪ್ಪ ಇನ್ನೂ ಬರಲೇ ಇಲ್ಲ..

publive-image

ಇದಕ್ಕೂ ಮುನ್ನ ಲಾವಣ್ಯ ರಾಜ್ ತರುಣ್ ವಿರುದ್ಧ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮದುವೆ ಆಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳಸಿ ಗರ್ಭಪಾತ ಮಾಡಿಸಿದ್ದಾರೆ ಎಂದು ಆರೋಪಿಸಿದ್ದರು. ಈ ಆರೋಪವನ್ನು ರಾಜ್ ತರುಣ್ ತಳ್ಳಿ ಹಾಕಿದ್ದಾರೆ. ಇನ್ನು, ಇವರಿಬ್ಬರ ಪ್ರಕರಣದಲ್ಲಿ ಶೇಖರ್ ಬಾಷಾಗೆ ಏನು ಸಂಬಂಧ ಅಂತಾ ನೋಡೋದಾದ್ರೆ, ರಾಜ್ ತರುಣ್ ಹಾಗೂ ಶಖರ್ ಬಾಷಾ ಇಬ್ಬರು ಸ್ನೇಹಿತರು. ಸೇಹಿತನ ಪರ ಬ್ಯಾಟ್ ಬೀಸುತ್ತಿದ್ದಾರೆ.

Advertisment

ಹಲವು ವರ್ಷಗಳಿಂದ ರಾಜ್ ತರುಣ್ ಮತ್ತು ಲಾವಣ್ಯ ಪ್ರೇಮಿಗಳು. ಆಕೆಗೆ ಗರ್ಭಪಾತ ಆಗಿರೋದೆಲ್ಲ ಸುಳ್ಳು. ಅವಳು ಮದ್ಯ ಸೇವನೆ ಮಾಡುತ್ತಾಳೆ. ಜೊತೆಗೆ ಡ್ರಗ್​​ ವ್ಯಸನಿ ಕೂಡ ಹೌದು. ಇದೇ ಕಾರಣಕ್ಕೆ ಅನೇಕ ಬಾರಿ ರಾಜ್ ತರುಣ್​ ಕಾನೂನು ಸಂಕಷ್ಟ ಎದುರಿಸಿದ್ದಾರೆ ಅನ್ನೋದು ಬಾಷಾ ಆರೋಪ ಆಗಿದೆ.

ಇದನ್ನೂ ಓದಿ:‘ಕೊಹ್ಲಿ, ರೋಹಿತ್​ ಅಗತ್ಯವೇ ಇರಲಿಲ್ಲ’ ಗೌತಮ್ ಗಂಭೀರ್ ವಿರುದ್ಧ ನೆಹ್ರಾ ವಾಗ್ದಾಳಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment