ಸೈಬರ್ ವಂಚನೆ ಪ್ರಕರಣಗಳಿಗೆ ಬಲಿಯಾಗಬೇಡಿ
ಸೆಲ್ಫಿಯಿಂದಲೂ ನಿಮಗೆ ಸಮಸ್ಯೆ ಎದುರಾಗಬಹುದು
ಸೆಲ್ಫಿಯಿಂದ ಬ್ಯಾಂಕ್ ಖಾತೆಯೇ ಖಾಲಿಯಾಗಬಹುದು
ಸೈಬರ್ ವಂಚನೆ ಪ್ರಕರಣಗಳು ದಿನನಿತ್ಯ ಬೆಳಕಿಗೆ ಬರುತ್ತಿರುತ್ತವೆ. ಬ್ಯಾಂಕ್ ಖಾತೆ ಖಾಲಿಯಾದ ಅನೇಕ ಘಟನೆಗಳು ಕಣ್ಣ ಮುಂದೆ ಬರುತ್ತಿರುತ್ತವೆ. ಸ್ಮಾರ್ಟ್ಫೋನ್ ಬಂದ ಬಳಿಕವಂತೂ ಇಂತಹ ಘಟನೆಗಳು ಹೆಚ್ಚಾಗುತ್ತಿವೆ. ಅದರಲ್ಲೂ ಅಂಗೈ ಅಗಲದ ಸ್ಮಾರ್ಟ್ಫೋನ್ನಲ್ಲಿ ಬ್ಯಾಂಕ್ ಖಾತೆ ಬಳಸಿದ ನಂತರವಂತೂ ಇಂತಹ ವಂಚನೆಗಳು ಜಾಸ್ತಿಯಾಗುತ್ತಿರುತ್ತವೆ.
ಸ್ಮಾರ್ಟ್ಫೋನ್ ಬಂದ ಬಳಿಕ ಸೆಲ್ಫಿ ಗೀಳು ಹೆಚ್ಚಾಗುತ್ತಿವೆ. ಆದರೆ ಸೆಲ್ಫಿಯಿಂದ ಕೂಡ ಬ್ಯಾಂಕ್ ಖಾತೆ ಖಾಲಿಯಾಗುವ ಸಾಧ್ಯತೆಯಿದೆ ಎನ್ನುತ್ತಿದ್ದಾರೆ ಸೈಬರ್ ಸೆಕ್ಯುರಿಟಿ ಸಂಶೋಧಕರು. ಒಂದೇ ಒಂದು ಸೆಲ್ಫಿಯಿಂದ ಖಾತೆ ಖಾಲಿಯಾಗಬಹುದಂತೆ.
ಇದನ್ನೂ ಓದಿ: ಬಿಡುಗಡೆಗೂ ಮುನ್ನವೇ ಸೋರಿಕೆಯಾಯ್ತು ಐಫೋನ್ 17 ಕುರಿತ ಮಾಹಿತಿ.. ಡಿಸ್ಪ್ಲೇನಲ್ಲಿ ದೊಡ್ಡ ಬದಲಾವಣೆ
ಬಹುತೇಕ ಜನರು ಸೆಲ್ಫಿ ತೆಗೆದ ಬಳಿಕ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ. ಸದ್ಯ ಹಲವು ಆ್ಯಪ್ಗಳು ಮತ್ತು ವೆಬ್ಸೈಟ್ಗಳಲ್ಲಿ ಗುರುತು ದೃಢೀಕರಿಸಲು ಸೆಲ್ಫಿಯನ್ನು ಕೇಳುತ್ತದೆ. ಇದೀಗ ಬ್ಯಾಂಕ್ಗಳು ಮತ್ತು ಫಿನ್ಟೆಕ್ ಕಂಪನಿಗಳು ಕೂಡ ದೃಢೀಕರಣಕ್ಕಾಗಿ ಸೆಲ್ಫಿಯನ್ನು ಬಯಸುತ್ತವೆ. ಆದರೆ ಇದೇ ತಂತ್ರವನ್ನು ಸೈಬರ್ ವಂಚಕರು ಬಳಸುಬಹುದು ಎಂದು ಸೈಬರ್ ಸೆಕ್ಯುರಿಟಿ ಸಂಶೋಧಕರು ಎಚ್ಚರಿಕೆ ನೀಡಿದ್ದಾರೆ .
ಬ್ಯಾಂಕ್ ವಂಚನೆ: ಸೆಲ್ಫಿ ಫೋಟೋ ಬಳಸಿ ಸೈಬರ್ ಅಪರಾಧಿಗಳು ಬ್ಯಾಂಕ್ ಖಾತೆಗೆ ಪ್ರವೇಶಿಸಲು ಮತ್ತು ಹಣವನ್ನು ಎಗರಿಸಲು ಬಳಸಬಹುದು.
ಸಾಲ ವಂಚನೆ: ಸೆಲ್ಫಿ ಬಳಸಿ ನಿಮಗೆ ಗೊತ್ತಿಲ್ಲದೆ ಬ್ಯಾಂಕ್ ಖಾತೆಯಿಂದ ಸಾಲ ತೆಗೆದುಕೊಳ್ಳಬಹುದು.
ಸಿಮ್ ಕಾರ್ಡ್ ಕ್ಲೋನಿಂಗ್: ಸೆಲ್ಫಿ ಸಹಾಯದಿಂದ ಸಿಮ್ ಕಾರ್ಡ್ ಕ್ಲೋನ್ ಮಾಡಬಹುದು. ಮೊಬೈಲ್ ಸಂಖ್ಯೆಗೆ ನೀಡಿದ OTP ಸ್ವೀಕರಿಸಬಹುದು.
ಸೈಬಕ್ ವಂಚಕರ ದಾಳಿಯಿಂದ ತಪ್ಪಿಸಿಕೊಳ್ಳಬೇಕಾದರೆ ಅಪರಿಚಿತ ಲಿಂಕ್ಗಳ ಮೇಲೆ ಕ್ಲಿಕ್ ಮಾಡಬೇಡಿ. ಬ್ಯಾಂಕ್ ಖಾತೆಗಳಿಗೆ ಬಲವಾದ ಪಾಸ್ವರ್ಡ್ ನಮೂದಿಸಿ. ಭದ್ರತೆ ಬಲಪಡಿಸಲು ಎರಡು ದೃಢೀಕರಣವನ್ನು ಬಳಸಿ, ಸಾಮಾಜಿಕ ಜಾಲತಾಣ ಬಳಸುವಾಗ ಜಾಗರೂಕರಾಗಿರಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ